ವಿಜಯಪುರ

ಅಗ್ನಿಗೆ ಆಹುತಿಯಾದ ಮಳಿಗೆಗಳಿಗೆ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಭೇಟಿ

ಅಗ್ನಿಗೆ ಆಹುತಿಯಾದ ಮಳಿಗೆಗಳಿಗೆ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಭೇಟಿ

ಲೋಕದರ್ಶನ ವರದಿ 

         ವಿಜಯಪುರ 09: ಆಕಸ್ಮಿಕ ಅಗ್ನಿಗೆ ಆಹುತಿಯಾದ ನಗರದ ನಾಲಬಂದ ಚೌಕ ಹತ್ತಿರದ ಅಟಲ್ ಬಿಹಾರಿ ವಾಜಪೇಯಿ ಮಾರ್ಗದಲ್ಲಿನ ತಿಕೋಟಕರ ಸಂಕೀರ್ಣದ  ಮಳಿಗೆಗಳಿಗೆ ಕಾಂಗ್ರೇಸ್ ಹಿರಿಯ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಭೇಟಿ ನೀಡಿದರು. ನಗರದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಈ ಅಗ್ನಿ ಅವಘಢ ಸ್ಥಳಕ್ಕೆ ಖುದ್ಧಾಗಿ ಭೇಟಿ ನೀಡಿದ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಅಂಗಡಿ ಮಾಲೀಕರಿಗೆ ಹಾಗೂ ಕೆಲಸಗಾರರಿಗೆ ಸಾಂತ್ವನ ಹೇಳಿದರು. 

            ಈ ಅಗ್ನಿ ಅನಾಹುತದಿಂದ ಇಲ್ಲಿನ ಮಳಿಗೆಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಇದರಿಂದ ವ್ಯಾಪಾರಿಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ಅವಘಡಗಳು ಸಂಭವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಗ್ನಿಗೆ ಆಹುತಿಯಾದ ಮಳಿಗೆಗಳ ಮಾಲೀಕರು, ಕೆಲಸಗಾರರು ಸೇರಿದಂತೆ ಇನ್ನೀತರರು ಇದ್ದರು. 


ಸುದ್ದಿ ಓದಿ