ಜಿಲ್ಲಾ ಮಟ್ಟದ ಭರತನಾಟ್ಯ ಸ್ಪರ್ಧೆ ಹಾಗೂ ಕಲಾ ಪ್ರತಿಭಾ ಪುರಸ್ಕಾರ
ಲೋಕದರ್ಶನ ವರದಿ
ಕಂಪ್ಲಿ 09 : ಭರತನಾಟ್ಯ ಕೇವಲ ನೃತ್ಯವಲ್ಲ. ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ, ಮೌಲ್ಯಗಳ ಪ್ರತಿಬಿಂಬವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ಪಟ್ಟಣದ ವಿದ್ಯಾಸಾಗರ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಾಟ್ಯಮಯೂರಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ನೃತ್ಯಕಲಾ ಸಂಸ್ಥೆ ಮತ್ತು ವಿದ್ಯಾಸಾಗರ ಇಂಟರ್ನ್ಯಾಷನಲ್ ಶಾಲೆಯ ಆಶ್ರಯದಲ್ಲಿ ಮಾಸ್ ಡಾನ್ಸ್ ಸ್ಟುಡಿಯೋ ವತಿಯಿಂದ ಮೊದಲನೆಯ ವಾರ್ಷಿಕೋತ್ಸವ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ್ರ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಭರತನಾಟ್ಯ ಸ್ಪರ್ಧೆ ಹಾಗೂ ಕಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಶಾಸ್ತ್ರೀಯ ಕಲಾಪ್ರಕಾರಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡರೆ ನಮ್ಮ ಸಂಸ್ಕೃತಿ ಬಗ್ಗೆ ಹೆಮ್ಮೆ, ಗೌರವ ಹೆಚ್ಚುತ್ತದೆ’.
ಮೊದಲ ಬಾರಿಗೆ ಕಂಪ್ಲಿಯಲ್ಲಿ ಭರತನಾಟ್ಯ ನೃತ್ಯ ಸ್ಪರ್ಧೆ ನಡೆಸುವ ಮೂಲಕ ಈ ಭಾಗದ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಟ್ಟಿದ್ದಾರೆ. ಈ ವೇದಿಕೆಯಲ್ಲಿ ಪ್ರಜ್ವಲಿಸಿದ ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಲು ಅವಕಾಶಗಳು ದೊರೆಯಲಿ ಎಂದರು. ವಿದ್ಯಾಸಾಗರ ಅಂತರಾಷ್ಟ್ರೀಯ ಶಾಲೆಯ ಕಾರ್ಯದರ್ಶಿ ಪಿ.ನಾಗೇಶ್ವರ ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಭಾಗದ ಗ್ರಾಮೀಣ ಮಕ್ಕಳಿಗೂ ಭರತನಾಟ್ಯದಂತಹ ಶ್ರೇಷ್ಠ ಕಲೆ ಪರಿಚಯಿಸುತ್ತಿರುವುದು ಅತ್ಯಂತ ಅರ್ಥಪೂರ್ಣ ಕಾರ್ಯವಾಗಿದೆ. ಭರತನಾಟ್ಯ ಕಲೆಯು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಿ, ಆತ್ಮವಿಶ್ವಾಸ ಮೂಡಿಸಿ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಕಂಪ್ಲಿ ಮಾಸ್ ಡ್ಯಾನ್ಸ್ ಸ್ಟುಡಿಯೋ ನೃತ್ಯ ನಿರ್ದೇಶಕ ಮೋಜೆಸ್ ಪೌಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಂಪ್ಲಿಯಲ್ಲಿ ಕಳೆದ ಒಂದು ವರ್ಷದಿಂದ ಭರತನಾಟ್ಯ ಮತ್ತು ನೃತ್ಯಗಳನ್ನು ಕಲಿಸಲಾಗುತ್ತಿದೆ. ಈಗ ಕಂಪ್ಲಿಯಲ್ಲಿ ಮೊಟ್ಟ ಮೊದಲ ಸಲ ಭರತನಾಟ್ಯ ನೃತ್ಯಯ ಹೆಜ್ಜೆನಾದ ಸ್ಪರ್ಧೆಯೊಂದಿಗೆ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಮುಂದಿನ ಹಂತದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ, ಸಾಧನೆ ಮಾಡಲು ದಾರಿ ಮಾಡಿಕೊಡಲಾಗಿದೆ ಎಂದರು. ಇಲ್ಲಿನ ಜಿಲ್ಲಾ ಮಟ್ಟದ ಸ್ಪರ್ಧೆಯ ಫಲಿತಾಂಶದ ಜೂನಿಯರ್ ಸೋಲೋ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಆಕಾಂಕ್ಷಾ ಕೋರಿ, ದ್ವಿತೀಯ ಸ್ಥಾನ ಎಸ್.ದಿಶಿಕಾ, ತೃತೀಯ ಸ್ಥಾನ ವೈಷ್ಣವಿ ಪಡೆದುಕೊಂಡರು.
ನಂತರ ಸೀನಿಯರ್ ಸೋಲೋ ವಿಭಾಗದಲ್ಲಿ ಸಾಯಿ ನಿಧಿ ಪ್ರಥಮ, ಪವಿತ್ರ ಅಮರೇಶ ದ್ವಿತೀಯ, ಲವಿಕಾ ತೃತೀಯ ಸ್ಥಾನ ಪಡೆದುಕೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ಬಿಷಪ್ ಇಸಿಐ ರೈಟ್, ರೆವ್, ರವಿಕುಮಾರ್ ಎಸ್, ಅಂಡ್ಲಿ, ಗಂಗಾವತಿಯ ಕ್ಯಾಲ್ವರಿ ಇಸಿಐ ಚರ್ಚ್ನ ರೆವ್, ಯೋಹಾನ ಬಾಬು, ಬ್ರೈಟ್ ವೇ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಯು.ಶಿವರಾಜ, ನಿವೃತ್ತ ಮುಖ್ಯಶಿಕ್ಷಕಿ ಪೂರ್ಣ ಚಂದ್ರಿಕಾ, ವಿದ್ಯಾಸಾಗರ ಅಂತರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ಸಾಯಿ ಕಿಶೋರ ಪಲೇಟಿ,
ದೇವಲಾಪುರ ಪಿ.ಎಂ.ಶ್ರೀ. ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಹೆಚ್.ಪಿ.ಸೋಮಶೇಖರ, ವಿದ್ಯಾಸಾಗರ ಅಂತರಾಷ್ಟ್ರೀಯ ಶಾಲೆಯ ಸಂಯೋಜಕಿ ರೋಹಿಣಿ ಪಲೇಟಿ, ಗಂಗಾವತಿಯ ಬೆತೆಲ್ ಸಮೂಹ ಸಂಸ್ಥೆಯ ಖಜಾಂಚಿ ಸುಜಾತ ರಾಜು, ಗೌಸಿಯಾ ಜ್ಯುವೆಲರ್ಸ್ನ ಎಸ್.ಅಬ್ದುಲ್, ದೇವಸಮುದ್ರ ಸಮಾಜ ಸೇವಕಿ ಜಿ.ಜಯಮ್ಮ, ಗಂಗಾವತಿಯ ಸಿಎಂಸಿ ನಿವೃತ್ತ ಸಿಬ್ಬಂದಿ ಚಂದ್ರಮ್ಮ ವಿ.ಎಸ್.ಕುಮಾರ್, ನಾಟ್ಯಮಯೂರಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ನೃತ್ಯಕಲಾ ಸಂಸ್ಥೆಯ ಕಾರ್ದದರ್ಶಿ ಜಯಶ್ರೀ ಪೌಲ್ ಸೇರಿದಂತೆ ಭರತನಾಟ್ಯ ಕಲೆಗಾರರು ಪಾಲ್ಗೊಂಡಿದ್ದರು.