ವೃದ್ಧಾಶ್ರಮದಲ್ಲಿ ಕಂಪ್ಲಿ ಗೃಹ ರಕ್ಷಕದಳದಿಂದ ವೃದ್ಧರಿಗೆ ಮಧಾಹ್ನದ ಊಟ
ಲೋಕದರ್ಶನ ವರದಿ
ಕಂಪ್ಲಿ 09 : ಗಂಗಾವತಿ ನಗರದ ಕಂಪ್ಲಿ ರಸ್ತೆಯ ಕೋಳಿ ಫಾರಂ ಬಳಿಯಲ್ಲಿರುವ ನವ ಜೀವನ ವೃದ್ಧಾಶ್ರಮದಲ್ಲಿ ಕಂಪ್ಲಿ ಗೃಹ ರಕ್ಷಕ ದಳದಿಂದ ವೃದ್ಧರಿಗೆ ಸೋಮವಾರ ಮಧ್ಯಾಹ್ನದ ಊಟ ವ್ಯವಸ್ಥೆ ಕಲ್ಪಿಸಲಾಯಿತು. ನಂತರ ಗೃಹ ರಕ್ಷಕದಳದ ಘಟಕಾಧಿಕಾರಿ ಕೆ.ಹೊನ್ನೂರವಲಿ, ಸಾಜೇಂಟ್ ಬಿ.ಚಂದ್ರಶೇಖರ ಜಂಟಿ ಮಾತನಾಡಿ, ದಾನಗಳಲ್ಲೇ ಶ್ರೇಷ್ಠ ದಾನ ಅನ್ನದಾನ ಎಂಬ ಪುರಾಣ ಪ್ರಸಿದ್ಧ ಸತ್ಯವನ್ನು ಈ ಅನ್ನ ದಾನದ ಮೂಲಕ ನಾವೆಲ್ಲರೂ ಕಾಣುತ್ತಿದ್ದೇವೆ. ಬಡವರಿಗೆ ಹಾಗೂ ಹಸಿದವರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡುವ ಮೂಲಕ ಸಮಾಜ ಮುಖಿ ಕಾರ್ಯಕ್ರಮಕ್ಕೆ ಕೈಜೋಡಿಸಲಾಗುತ್ತಿದೆ.
ಇಲ್ಲಿನ ನವ ಜೀವನ ವೃದ್ಧಾಶ್ರಮದಲ್ಲಿ ಗೃಹ ರಕ್ಷಕದಳದಿಂದ ವೃದ್ಧರಿಗೆ ಉಚಿತವಾಗಿ ಒಂದೊಪ್ಪತ್ತಿನ ಊಟ ಬಡಿಸಲಾಯಿತು. ಈ ಅನ್ನದಾನ ಸೇವೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯಿತು. ಮಕ್ಕಳ ಭವಿಷ್ಯವನ್ನು ರೂಪಿಸಿ, ಮಕ್ಕಳಿಂದ ದೂರವಾಗಿ ಅನಾಥ ಆಶ್ರಮಕ್ಕೆ ವೃದ್ಧರು ಸೇರಿಸುತ್ತಿರುವುದು ದುರ್ಧೈವವಾಗಿದೆ. ಆದ್ದರಿಂದ ಮಕ್ಕಳು ಜನ್ಮ ನೀಡಿದ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ನವ ಜೀವನ ವೃದ್ಧಾಶ್ರಮದ ವ್ಯವಸ್ಥಾಪಕ ಆನಂದರಾವ್, ಗೃಹ ರಕ್ಷಕದಳದ ಸಿಬ್ಬಂದಿಗಳಾದ ಮಂಜುನಾಥ, ಎಂ.ಅಲ್ಲಂಪ್ರಭು, ಬಿ.ಜಯಪ್ರಕಾಶ ಇದ್ದರು,