ಹಾವೇರಿ

ದೀಪಾವಳಿ ಹಬ್ಬ ಎಲ್ಲರ ಬಾಳಲ್ಲಿ ಬೆಳಕನ್ನು ತರುವಂತಾಗಲಿ

ದೀಪಾವಳಿ ಹಬ್ಬ ಎಲ್ಲರ ಬಾಳಲ್ಲಿ ಬೆಳಕನ್ನು ತರುವಂತಾಗಲಿ

ಲೋಕದರ್ಶನ ವರದಿ 

         ಹಾವೇರಿ 09 :ಭಾರತ ಭವ್ಯ ಸಂಸ್ಕೃತಿ ಪರಂಪರೆಯ ದೇಶವಾಗಿದ, ದೀಪಾವಳಿ ಹಬ್ಬ ಎಲ್ಲರ ಬಾಳಲ್ಲಿ ಬೆಳಕನ್ನು ತರುವಂತಾಗಲಿ ಎಂದು ಉದ್ದಿಮಿಗಳು ಹಾಗೂ ಸಮಾಜ ಸೇವಕರಾದ ಪರಶುರಾಮ ಹರ್ಲಾಪುರ ಅವರು ಹೇಳಿದರು. 

       ನಗರದ ಶಶಿ ಟ್ರೇಡರ್ಸ್‌ ನಲ್ಲಿ ದೀಪಾವಳಿ ಹಬ್ಬದ ನಿಮಿತ್ತವಾಗಿ ವಿಮಲ್ ಪರಿವಾರ ವತಿಯಿಂದ ಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪಾವಳಿ ಹಬ್ಬದ ಶುಭ ಕೋರಿ ಅವರು ಮಾತನಾಡಿದರು. 

           ದೇಶದ ಜನತೆಗೆ ತನ್ನದೆಯಾದ ಸಂಪ್ರದಾಯ ಹಾಗೂ ಆಧ್ಯಾತ್ಮಿಕ ನೆಲೆಗಟ್ಟು ಇದ್ದು,ಎಲ್ಲ ಹಬ್ಬಗಳಿಗೂ ಪಾರಂಪರಿಕ ಹಿನ್ನೆಲೆಯಲ್ಲಿ ಆಚರಣೆ ಮಾಡಲಾಗುತ್ತಿದೆ. ಬೆಳಕಿನ ಈ ಹಬ್ಬ ಎಲ್ಲರ ಜೀವನದಲ್ಲಿ ಕಹಿ ಮರೆತು ಬೆಳಕಿನ ಹಾಗೆ ಬದುಕು ಉಜ್ವಲವಾಗಲಿ.

             ಈ ದಿನ ಶಶಿ ಟ್ರೇಡರ್ಸ್‌ ನಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಯವೃಂದದವರಿಗೆ ಸಿಹಿ ಹಾಗೂ ಉಡುಗೊರೆ ನೀಡುವ ಮೂಲಕ ಶ್ರಮಿಕರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದೇವೆ.

            ಎಲ್ಲರಿಗೂ ಭಗವಂತ ಒಳ್ಳೆಯದು ಮಾಡಲಿ ಎಂದು ಪರಶುರಾಮ ಹರ್ಲಾಪುರ ಅವರು ದೀಪಾವಳಿ ಹಬ್ಬದ ಶುಭ ಕೋರಿದರು.ಈ ಸಂದರ್ಭದಲ್ಲಿ ವಿಮಲ ಪರಿವಾರದವರು,ಶಶಿ ಟ್ರೇಡರ್ಸ್‌ ಕಾರ್ಯವೃಂದದವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ