ಬೆಳಗಾವಿ

ನಾಡದ್ರೋಹಿ ಎಂಇಎಸ್ ಮುಖಂಡ ಶುಭಂ ಶೆಳಕೆ ಸೇರಿ ಇಬ್ಬರ ಬಂಧನ, ನ. 4 ವರೆಗೆ ನ್ಯಾಯಾಂಗ ವಶಕ್ಕೆ

ನಾಡದ್ರೋಹಿ ಎಂಇಎಸ್ ಮುಖಂಡ ಶುಭಂ ಶೆಳಕೆ ಸೇರಿ ಇಬ್ಬರ ಬಂಧನ, ನ. 4 ವರೆಗೆ ನ್ಯಾಯಾಂಗ ವಶಕ್ಕೆ
Two arrested, including anti-national MES leader Shubham Shelke; remanded to judicial custody until

ಬೆಳಗಾವಿ : ತಮ್ಮ ವಿರುದ್ದ ದಾಖಲಾದ ದೂರಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಮೇರೆಗೆ ಎಮ್ ಇಎಸ್ ಮುಖಂಡ ಶುಭಂ ಶೆಳಕೆ ಸೇರಿ ಇಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಬಂಧಿತರನ್ನು ನ. 4 ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ನ್ಯಾಯಾಲಯವು ಆದೇಶ ಮಾಡಿದೆ ಎಂದು ತಿಳಿದು ಬಂದಿದೆ. 

    ಬಂಧಿತರನ್ನು ಬೆಳಗಾವಿಯ ತಾನಾಜಿಗಲ್ಲಿಯ ನಿವಾಸಿ ಶುಭಂ ವಿಕ್ರಾಂತ ಶೆಳಕೆ ಹಾಗೂ ಚೆಳುವನಟ್ಟಿಯ ನಿವಾಸಿ ಮನೋಹರ ಅಪ್ಪಾಜಿ ಹುಂದ್ರೆ ಎಂದು ಗುರುತಿಸಲಾಗಿದೆ.

  ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 12/2025 ಹಾಗೂ ಬೆಳಗಾವಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ ನಂ. 285/2025 ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯದ ಉದ್ಘೋಷಣೆ (ಪ್ರೊಕ್ಲಮೇಶನ್) ಹೊರಡಿಸಲಾಗಿದ್ದ ಇಬ್ಬರು ಆರೋಪಿತರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

   ಪ್ರಕರಣದ ವಿಚಾರಣೆಗೆ ನಿಗದಿಪಡಿಸಿದ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗದೆ ಇರುವುದರಿಂದ, ನ್ಯಾಯಾಲಯವು ಆರೋಪಿತರ ವಿರುದ್ಧ ಉದ್ಘೋಷಣೆ ಹೊರಡಿಸಿತ್ತು. ನ್ಯಾಯಾಲಯದ ಆದೇಶದಂತೆ ಆರೋಪಿತರನ್ನು ತಲೆಮರೆಸಿಕೊಂಡ ಆರೋಪಿಗಳೆಂದು ಪರಿಗಣಿಸಲಾಗಿತ್ತು.

   ಇದೀಗ, ದಿ. 22 ಅಕ್ಟೋಬರ್ 2026ರಂದು ಇಬ್ಬರೂ ಆರೋಪಿತರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿತರನ್ನು ನವೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

ಅಟ್ರಾಸಿಟಿ ಕೇಸ್ನಲ್ಲಿ ಶುಭಂ ಸೆಳಕೆ ಬಂಧನವಾಗಿದ್ದು, ಬೆಳಗಾವಿ ಖಡೇಬಜಾರ್ ಪೊಲೀಸರಿಂದ ಬಂಧನ. ಆರೋಗ್ಯ ತಪಾಸಣೆ ನಡೆಸಿ ಹಿಂಡಲಗಾ ಜೈಲಿಗೆ ಶುಭಂ ಸೆಳಕೆ‌ ರವಾನೆ‌ ಮಾಡಲಾಗಿದೆ.

ಬೆಳಗಾವಿಯ ಎಂಇಎಸ್ ನಾಯಕ ಶುಭಂ ಸೆಳಕೆ ಕಳೆದೊಂದ ವರ್ಷದ ಹಿಂದಿನ ಅಟ್ರಾಸಿಟಿ ಕೇಸ್ ನಲ್ಲಿ ಸಳಕೆ ಬಂಧನ

ಕರಾಳ ದಿನಾಚರಣೆ ಮಾಡೋದಾಗಿ ಬೆಳಗಾವಿ ಡಿಸಿಗೆ ಸವಾಲು ಹಾಕಿದ್ದ ಪುಂಡ

ಪದೇ ಪದೇ ಗಡಿ ವಿಚಾರ ಮುಂದಿಟ್ಟು ಕ್ಯಾತೆ ತೆಗೆಯುತ್ತಿದ್ದ ನಾಡದ್ರೋಹಿ ಶುಭಂ ಸಳೆಕೆ ಬಂಧನವಾಗಿದೆ.

 ರಾಜ್ಯೋತ್ಸವ ಪ್ರತಿಯಾಗಿ ಕರಾಳ ದಿನಾಚರಣೆಗೆ ಸಿದ್ಧತೆ ನಡೆಸಿದ್ದ ನಾಡದ್ರೋಹಿ ಶುಭಂ ಸದ್ಯ ನ.04ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ‌ ಮಾಡಿದೆ.

ಸುದ್ದಿ ಓದಿ