ಉಗರಗೋಳ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ ವಿಜಯದಶಮಿ ಜಾತ್ರೋತ್ಸವ
ಲೋಕದರ್ಶನ ವರದಿ
ಉಗರಗೋಳ 22 : ಏಳುಕೊಳ್ಳದ ನಾಡು ಶ್ರೀಕ್ಷೇತ್ರ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಜರುಗಿದ ಜಾತ್ರಾ ಉತ್ಸವ ಬುಧವಾರ ಸಂಪನ್ನಗೊಂಡಿತು.
ಬುಧವಾರ ಜರುಗಿದ ವಿಜಯದಶಮಿ ಅಂಗವಾಗಿ ಲಕ್ಷಾಂತರ ಭಕ್ತರು ಆದಿಶಕ್ತಿ ರೇಣುಕಾ ಯಲ್ಲಮ್ಮಾ ದೇವಿ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿ. ಶ್ರೀದೇವಿಯಲ್ಲಿ ನಮ್ಮನ್ನೆಲ್ಲರನ್ನು ಆಯುರಾರೋಗ್ಯ ಭಗ್ಯದಿಂದ ಕರುಣಿಸು ತಾಯಿ ಎಂದು ಭಕ್ತಿಯಿಂದ ಬೇಡಿಕೊಂಡರು.
ರೇಣುಕಾ ಯಲ್ಲಮ್ಮಾ ಪ್ರಾಂಗಣದಲ್ಲಿ ಭಕ್ತರ ಹರ್ಷೋದ್ದಾರದ ಮದ್ಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಮಾನವನ ಬದುಕು ಹಸನಾಗಲಿ ಹಾಗೂ ರೈತನ ಬಾಳು ಬಂಗಾರವಾಗಲಿ, ಸಮೃದ್ಧ ಬೆಳೆಬರಲಿ, ಭೂಮಿತಾಯಿ ಧಾನ್ಯ ಸಂಪತ್ತಿನಿಂದ ತುಂಬಿರಲಿ, ದೇಶದ ಸಕಲ ಜೀವರಾಸಿ ಒಳತಿಗೆ ಪ್ರಾರ್ಥಿಸಲಾಯಿತು.
ಯಲ್ಲಮ್ಮನಗುಡ್ಡ-ಉಗರಗೋಳ ಮಾರ್ಗದಲ್ಲಿರುವ ಬನ್ನಿ ಮಹಾಂಕಾಳೇಶ್ವರಿ (ಬಣ್ಣೆಮ್ಮಾ) ದೇವಿ ದೇವಸ್ಥಾನವರೆಗೂ ಅರ್ಚಕರು ಆಯುಧಗಳನ್ನು ಹೊತ್ತು ಮೆರವಣಿಗೆ ಮೂಲಕ ಸಾಗಲಾಯಿತು. ಅಲ್ಲಿ ಉಗರಗೋಳ ಗ್ರಾಮದ ಹಿರಿಯರು, ಭಕ್ತರು, ದೇವಸ್ಥಾನ ಅಧಿಕಾರಿಗಳ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮ ಕೈಗೊಂಡು ನಂತರ ಬನ್ನಿ ಮುಡಿಯುವ ಮೂಲಕ ದಸರಾ ಆಚರಣೆ ಸಂಪನ್ನಗೊಳಿಸಲಾಯಿತು. ಉಧೋ ಉಧೋ ಯಲ್ಲಮ್ಮಾ ನಿನ್ಹಾಲ್ಕ ಉಧೋ” ಎಂಬ ಜೈಕಾರ ಮುಗಿಲು ಮುಟ್ಟಿದ್ದವು.
ಬನ್ನಿ ವಿನಿಮಯವು ಕೇವಲ ಧಾರ್ಮಿಕ ವಿಧಿಯಲ್ಲ ಪ್ರೀತಿ, ಗೌರವ, ವಿಶ್ವಾಸ, ಸ್ನೇಹವನ್ನು ಹಂಚಿಕೋಳ್ಳುವ ಸಂಕೇತವಾಗಿದ್ದು. ಹಳ್ಳಿಗಳಲ್ಲಿ ಈಗಲೋ ಜನರು ಮನೆ ಮನೆಗೆ ತೇರಳಿ ಪರಸ್ಪರರು ಬನ್ನಿ ಕೋಟ್ಟು ನಾವು ನೀವು ಬಂಗಾರದಂಗ ಇರೋಣ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು.
ದೇವಸ್ಥಾನ ಉಪಕಾರ್ಯಧರ್ಶಿ ನಾಗರತ್ನಾ ಚೋಳಿನ, ಶೀತಲ ಕಡಟ್ಟಿ, ರೊಹೀತ ಪೊಲೇಶಿ, ಆರ್ ಎಸ್ ಸವದತ್ತಿ, ತಮ್ಮನಗೌಡ ತಿಪರಾಶಿ, ಸಿ ಎನ್ ಕುಲಕರ್ಣಿ, ಏಕನಗೌಡ ಮುದ್ದನಗೌಡ್ರ, ಶಂಕರಗೌಡ ಕೊಳ್ಳಪ್ಪಗೌಡ ಗಂದಿಗವಾಡ, ಶಿದ್ಧನಗೌಡ ಪಾಟೀಲ, ವಾಯ್ ವಾಯ್ ಕಾಳಪ್ಪನವರ, ರಂಜಿತ ಬಜಂತ್ರಿ, ನಾಗರಾಜ ಬಡೆಪ್ಪನವರ, ಪಿಎಸ್ಆಯ್ ರಾಜು ಪೂಜಾರ, ಎಎಸ್ಆಯ್ ಎನ್ ವ್ಹಿ ಧಾರವಾಡ, ಹವಾಲ್ದಾರ ಹನಮಂತ ಬಜಂತ್ರಿ, ಪಂಡಿತ ಯಡೂರಯ್ಯ, ಚಂದ್ರಶೇಖರ ಗಡಾದಗೌಡ್ರ, ರಾಜನಗೌಡ ಟೋಪಣ್ಣವರ, ಮಾರುತಿ ಹೂಗಾರ, ನಾಗನಗೌಡ ಗಡಾದಗೌಡ್ರ, ಯಲ್ಲಪ್ಪಗೌಡ ಪೊಲೇಶಿ, ಬನ್ನಿಮಹಾಕಾಳಿ ದೇವಿ ಅರ್ಚಕರಾದ ಸೋಮಲಿಂಗ ಕಾರಿಮನಿ, ಅಶೋಕ ಸಂಗಟಿ, ಹಾಗೂ ದೇವಸ್ಥಾನ ಸಿಬ್ಬಂದಿ ಹಾಗೂ ಲಕ್ಷಾಂತರ ಭಕ್ತರು ಇದ್ದರು.