ಬೆಳಗಾವಿಯಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯಿಂದ ಸ್ವಯಂಸೇವಕರಿಗಾಗಿ ಎರಡು ದಿನಗಳ ವಸತಿ ಶಿಬಿರ ಆರಂಭ
ಬೆಳಗಾವಿ 22:- ಯೂಥ್ ಫಾರ್ ಸೇವಾ ಸಂಸ್ಥೆ ವತಿಯಿಂದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ ಬೆಳಗಾವಿಯಲ್ಲಿ ಸ್ವಯಂಸೇವಕರಿಗಾಗಿ ಆಯೋಜಿಸಿರುವ 2 ದಿನದ ನಿವಾಸಿ ಶಿಬಿರಕ್ಕೆ ಇಂದು ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಬೆಳಗಾವಿಯ ವಿವಿಧ ಕಾಲೇಜಿನ ಸ್ವಯಂಸೇವಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
2007ರಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯು ಸ್ಥಾಪನೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕಳೆದ 9 ವರ್ಷಗಳಕಾಲ ಸತತವಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ. ಹಲವಾರು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ಅವರನ್ನು ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಹಾಗೂ ಸಮಾಜದ ಅಭಿವೃದ್ಧಿಯ ಚಟುವಟಿಕೆಗಳಲ್ಲಿ ತೊಡಗಿಸುವುದಕ್ಕೆ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಡಾ. ಬನ್ನಪ್ಪ ಎಸ್ ಉನಗಾರ್ ಹಿರಿಯ ವಿಜ್ಞಾನಿ ಐ ಸಿ ಎಂ ಆರ್ ಬೆಳಗಾವಿ ಸುಜಾತಾ ದಪ್ತರ್ದಾರ್ ,ಯೂಥ್ ಫಾರ್ ಸೇವಾ ಮಾರ್ಗದರ್ಶನ ಸಮಿತಿಯ ಸದಸ್ಯರು ಶ್ರೀ ಪ್ರವೀಣ ಪ್ಯಾಟಿ, ಡಾ. ಸಂಗೀತಾ ತೊಲಗಿ, . ನೀತಾ ಗಂಗರಡ್ಡಿ ಹಾಗೂ ಉತ್ತರಾ್ರಂತ ಸಂಯೋಜಕರಾದ ಶ್ರೀ ಲಕ್ಷ್ಮಣ ಪೂಜಾರಿ,
ಸಂಪನ್ಮೂಲ ವ್ಯಕ್ತಿಗಳಾದ ಡಾ. ಚಂದ್ರಶೇಖರ ಬಿ. ಡಾ. ಸ್ಫೂರ್ತಿ ಮಾಸ್ತಿಹೋಳ್ಳಿ , ಹಾಗೂ ಬೆಳಗಾವಿ ಜಿಲ್ಲಾ ಸಂಯೋಜಕರು ಸಂತೋಷ ಖೋತ ಹಾಗೂ 65 ಕ್ಕೂ ಹೆಚ್ಚು ಸ್ವಯಂಸೇವಕರು ಈ ಶಿಬಿರದಲ್ಲಿ ಭಾಗಿಯಾಗಿದ್ದಾರೆ.ಚೈತ್ರಾ ಹಾಗೂ ಸಮೃದ್ಧಿ ರವರು ಕಾರ್ಯಕ್ರಮದ ನಿರೂಪಣೆಯನ್ನು ನಿರೂಪಿಸಿದರು.