ಹೂವಿನ ಹಡಗಲಿ

ಪರಿಷತ್ ಚುನಾವಣೆಯಲ್ಲಿ ಶಶೀಲ್ ನಮೋಶಿ ಗೆಲವು ನಿಶ್ಚಿತ

ಪರಿಷತ್ ಚುನಾವಣೆಯಲ್ಲಿ ಶಶೀಲ್ ನಮೋಶಿ ಗೆಲವು ನಿಶ್ಚಿತ


ಲೋಕದರ್ಶನ ವರದಿ  

ಹೂವಿನಹಡಗಲಿ ಅ.22- ವಿಧಾನ ಪರಿಷತ್ ನಲ್ಲಿ ದಶಕಗಳಿಂದ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿ ಬೇಡಿಕೆಗಳಿಗೆ ಸ್ಪಂದಿಸಿರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಈ ಬಾರಿಯೂ ಭರ್ಜರಿ ಗೆಲುವು ನಿಶ್ಚಿತ  ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಸಂಜೀವರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಕಾಯಕ ಭವನದಲ್ಲಿ ಈಚೆಗೆ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಲ್ಕು ಬಾರಿ ಶಿಕ್ಷಕರ ಪ್ರತಿನಿಧಿಯಾಗಿ ಆಯ್ಕೆಯಾಗಿ ನಮೋಶಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಸರ್ಕಾರ ಮಟ್ಟದಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ.


ಹಿಂದೆ ಬಿಜೆಪಿ ಸರ್ಕಾರ 7ನೇ ವೇತನ ಆಯೋಗ ಘೋಷಿಸಿ, ಶಿಕ್ಷಕರು, ಉಪನ್ಯಾಸಕರು, ಪದವೀಧರರಿಗೆ ಬೆಂಬಲ ನೀಡಿದೆ. ಪ್ರಬುದ್ಧ ಶಿಕ್ಷಕ ಮತದಾರರು ನಮೋಶಿ ಅವರಿಗೆ ಮೊದಲ ಪ್ರಾಶಸ್ತ್ರ ನೀಡುವ ವಿಶ್ವಾಸವಿದೆ ಎಂದರು.ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕ ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ವಂಚಿಸಿದೆ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸದೇ ಶಿಕ್ಷಕರ ಹಕ್ಕುಗಳನ್ನು ಕಸಿಯಲಾಗಿದೆ. ರಾಜ್ಯ ಶೈಕ್ಷಣಿಕ ವ್ಯವಸ್ಥೆ ಗೊಂದಲದ ಗೂಡು ಮಾಡಿ ಲಕ್ಷಾಂತರ ಶಿಕ್ಷಕಕರ, ಉಪನ್ಯಾಸಕರ ಜೀವನವನ್ನು ಅತಂತ್ರಗೊಳಿಸಲಾಗಿದೆ ಎಂದು ಟೀಕಿಸಿದರು.


ಉತ್ತರ ಪತ್ರಿಕೆ ಮೌಲ್ಯಮಾಪಕರ ಸಂಭಾವನೆ ಹೆಚ್ಚಿಸಿಲ್ಲ. ಶಿಕ್ಷಕರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಿದರು.ಬಿಜೆಪಿ ಮುಖಂಡ ಚನ್ನಬಸವನಗೌಡ ಪಾಟೀಲ್, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಮಂಜುನಾಥ ಜೈನ್, ಮೀರಾಬಾಯಿ, ಗುಳಿಗಿ ವೀರೇಂದ್ರ, ಬಲ್ಲಾಹುಣ್ಣಿ ರಾಮಣ್ಣ, ಕೃಷ್ಣನಾಯ್ಕ, ಮಲ್ಲನಾಯಕನಹಳ್ಳಿ ಕೊಟ್ರೇಶ ಇದ್ದರು. 


ಸುದ್ದಿ ಓದಿ