ಬೆಳಗಾವಿ

ಸಾವಿನಲ್ಲೂ ಒಂದಾದ ವೃದ್ದ ದಂಪತಿಗಳು : ವಿದ್ಯುತ್ ತಗುಲಿದ ಪತಿ ಉಳಿಸಲು ಹೋಗಿ ಪತ್ನಿ ಕೂಡಾ ಸಾವು

ಸಾವಿನಲ್ಲೂ ಒಂದಾದ ವೃದ್ದ ದಂಪತಿಗಳು : ವಿದ್ಯುತ್ ತಗುಲಿದ ಪತಿ ಉಳಿಸಲು ಹೋಗಿ ಪತ್ನಿ ಕೂಡಾ ಸಾವು

ಬೆಳಗಾವಿ : ಮನೆಯ ಮುಂದಿನ ತೋಟದಲ್ಲಿನ ತೆಂಗಿನಕಾಯಿ ಕೊಯ್ಯುವಾಗ ಕಬ್ಬಿಣದ ಪೈಪ್ ಹೈವೋಲ್ವೇಜ್ ವಿದ್ಯುತ್ ತಂತಿಗೆ ತಗುಲಿದ ವೇಳೆ ಪತಿಯನ್ನು ಉಳಿಸಲು ಹೋದಾಗ ಪತಿ, ಪತ್ನಿ ಇಬ್ಬರೂ ಅಸುನಿಗುವ ಮೂಲಕ ಸಾವಿನಲ್ಲೂ ವೃದ್ದ ದಂಪತಿಗಳು ಒಂದಾದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಸಂಗರಗಾಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. 

   ತೋಟದಲ್ಲಿ ತೆಂಗಿನಕಾಯಿ ಕೊಯ್ಯುವಾಗ ಕಬ್ಬಿಣದ ಪೈಪ್ ಹೈವೋಲ್ವೇಜ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಪತಿ-ಪತ್ನಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ 12.30 ರ ಸುಮಾರಿಗೆ ನಡೆದಿದೆ.

   ಈ ದುರ್ಘಟನೆಯಲ್ಲಿ ಶಾಹು ಸಾವೇರ ಮಸ್ಕರಿನ್ (70) ಹಾಗೂ ಅವರ ಪತ್ನಿ ಮಿಲಾಗ್ರಾನ್ ಶಾಹು ಮಸ್ಕರಿನ್ ( 65) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. 

    ಲಭ್ಯ ಮಾಹಿತಿ ಪ್ರಕಾರ, ಪತಿ ಶಾಲು ಮಸ್ಕರಿನ್ ಅವರು ತೆಂಗಿನಕಾಯಿಯನ್ನು  ಕೊಯ್ಯುವಾಗ  ಆಯತಪ್ಪಿ ಅವರ ಕೈಯಲ್ಲಿದ್ದ ಕಬ್ಬಿಣದ ಪೈಪ್ ಮರದ ಸಮೀಪ ಹಾದು ಹೋಗಿದ್ದ ಹೆಸ್ಕಾಂನ 11 ಸಾವಿರ ವೋಲ್ಟ್ ಹೈವೋಲ್ವೇಜ್ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ಅವರಿಗೆ ತೀವ್ರ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತರಾದರು. 

   ಪತಿಗೆ ವಿದ್ಯುತ್ ಶಾಕ್ ತಗುಲಿರುವುದನ್ನು ಕಂಡ ಅವರ ಪತ್ನಿ ತಕ್ಷಣವೇ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಅವರಿಗೂ ವಿದ್ಯುತ್ ಶಾಕ್ ತಗುಲಿದೆ, ದುರದೃಷ್ಟವಶಾತ್ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸುದ್ದಿ ಓದಿ