ಪಿಯು ಕಾಲೇಜು ಸ್ಥಾಪನೆಗೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಹಕ್ಕೋತ್ತಾಯ
ಲೋಕದರ್ಶನ ವರದಿ
ಕಂಪ್ಲಿ 28: ಗ್ರಾಮದಲ್ಲಿ ಪಿಯು ಕಾಲೇಜು ಇಲ್ಲದ ಪರಿಣಾಮ ಎಸ್ಸೆಸ್ಸೆಲ್ಸಿ ಮುಗಿದ ನಂತರ ದೂರದ ನಗರಗಳಿಗೆ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸದೇ, ಮಕ್ಕಳ ಬಾಲ್ಯ ವಿವಾಹದಿಂದ ಭವಿಷ್ಯ ಹಾಳಾಗುತ್ತಿದ್ದು, ಇದರಿಂದ ಕೂಡಲೇ ಗ್ರಾಮದಲ್ಲಿ ಪಿಯು ಕಾಲೇಜು ಆರಂಭಿಸಬೇಕೆಂದು ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆಯಿಸಿದ ಶಾಸಕರು ಇಲ್ಲಿನ ಶಾಲಾ ಮಕ್ಕಳ ಅನುಗುಣವಾಗಿ ಪಿಯು ಕಾಲೇಜು ಸ್ಥಾಪನೆಗೆ ಸಂಬಂಧಿಸಿದ ಶಿಕ್ಷಣ ಸಚಿವರ ಗಮನಕ್ಕೆ ತಂದು, ಕಾಲೇಜ ಆರಂಭಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಜಾ ಆಂದೋನಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೀರಾವರಿ, ರಸ್ತೆ ಸೇರಿದಂತೆ ನಾನಾ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಮಾಡಿದೆ.
ಬಿಜೆಪಿ ಕೊಡುಗೆ ಶೂನ್ಯವಾಗಿದೆ. ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದಿದ್ದು, ಯೋಜನೆಗಳ ಸದ್ಭಳಕೆಯೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎಂದರು. ತಹಶೀಲ್ದಾರ್ ಜೂಗಲ್ ಮಂಜುನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ,
ಸರ್ಕಾರದ ಪ್ರತಿಯೊಂದು ಯೋಜನೆಗಳು ಜನರ ಮನೆ ಬಾಗಿಲಿಗೆ ಮುಟ್ಟಿಸುವಂತಹ ಕೆಲಸವನ್ನು ಅಧಿಕಾರಿಗಳು ಜಾಗೃತಿಯಿಂದ ಮಾಡಬೇಕು. ಸಕಾಲದಲ್ಲಿ ಯೋಜನೆಗಳು ಜನತೆಗೆ ತಲುಪಿಸಿದಾಗ ಮಾತ್ರ ನೆಮ್ಮದಿಯ ಬದುಕಿಗೆ ಅನುಕೂಲವಾಗುತ್ತದೆ. ಸರ್ಕಾರವು ಸೌಲಭ್ಯಗಳನ್ನು ನಾಡಿನ ಜನತೆಗೆ ಕಲ್ಪಿಸುವ ಹಿತದೃಷ್ಠಿಯಿಂದ ಪ್ರಜಾಸೇವಾ ಆಂದೋಲನ ಮೂಲಕ ಅನುಕೂಲ ಮಾಡಿಕೊಟ್ಟಿದೆ.
ನಿಟ್ಟಿನಲ್ಲಿ ಅಧಿಕಾರಿಗಳು ಜನತೆಗೆ ಪಂಚ ಯೋಜನೆಗಳ ಜೊತೆಗೆ ಸರ್ಕಾರದ ಪ್ರತಿಯೊಂದು ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಬೇಕು ಎಂದರು. ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಂಪೌಂಡ್ ಗೋಡೆ, ಶುದ್ಧ ಕುಡಿಯುವ ನೀರು, ಶಾಶ್ವತ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಶಾಲಾ ವಿದ್ಯಾರ್ಥಿಗಳು ಮನವಿ ಮಾಡಿದರು.
ಕಂದಾಯ 4, ಆರ್‌ಡಿಪಿಆರ್ 106, ಕೃಷಿ, ನೀರಾವರಿ, ಕಾರ್ಮಿಕ, ಅಬಕಾರಿ ಇಲಾಖೆ ತಲಾ 1, ಕೆಇಬಿ 2 ಸೇರಿದಂತೆ ಒಟ್ಟು 116 ಅರ್ಜಿಗಳು ಸ್ವೀಕೃತವಾಗಿದ್ದು, ಕೆಲವೊಂದು ಸ್ಥಳದಲ್ಲೇ ಅರ್ಜಿಗಳು ವಿಲೇವಾರಿ ಮಾಡಲಾಯಿತು. ಉಳಿದ ಅರ್ಜಿಗಳಿಗೆ ಹಂತ ಹಂತದಲ್ಲಿ ವಿಲೇವಾರಿ ಮಾಡುವ ಭರವಸೆ ನೀಡಲಾಯಿತು.
ವೃದ್ಯಾಪಿ ವೇತನ ಮಂಜೂರಾತಿ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್, ತಾಪಂ ಇಒ ಆರ್.ಕೆ.ಶ್ರೀಕುಮಾರ, ಎಇಇ ಶ್ರೀನಿವಾಸ ಪ್ರಸಾದ್, ಗ್ರಾಮ ಆಡಳಿತಾಧಿಕಾರಿ ಅಬ್ದುಲ್, ಪಿಡಿಒ ಮಲ್ಲಿಕಾರ್ಜುನ, ಮುಖ್ಯಗುರುಗಳಾದ ನಂದ ಕಿಶೋರ, ಎಚ್.ಪಿ.ಸೋಮಶೇಖರ, ಮುಖಂಡರಾದ ಜಿ.ಮರೇಗೌಡ, ಗೌಡ್ರು ಅಂಜಿನಪ್ಪ, ಸಿದ್ದಯ್ಯ, ಸುರೇಶಗೌಡ, ಸೋಮಲಾಪುರ ಮಾರೇಶ, ಪಂಪಾಪತಿ ಸೇರಿದಂತೆ ಅನೇಕರಿದ್ದರು.