ಬೆಳಗಾವಿ

ತರಾತುರಿ ನಿರ್ಧಾರ ಅಸಾಧ್ಯ : ರೈತರ ಹಿತ ಕಾಪಾಡಲು ಸರಕಾರ ಬದ್ದ, ಶಾಶ್ವತ ಪರಿಹಾರಕ್ಕೆ ಕಾಲಾವಕಾಶ ನೀಡಿ: ಸಿಎಂ

ತರಾತುರಿ ನಿರ್ಧಾರ ಅಸಾಧ್ಯ : ರೈತರ ಹಿತ ಕಾಪಾಡಲು ಸರಕಾರ ಬದ್ದ, ಶಾಶ್ವತ ಪರಿಹಾರಕ್ಕೆ ಕಾಲಾವಕಾಶ ನೀಡಿ: ಸಿಎಂ
Hasty decisions are not possible; the government is committed to protecting farmers' interests—pleas

ಬೆಳಗಾವಿ : ರೈತರ ಹಿತ ಕಾಪಾಡಲು ಸರಕಾರ ಬದ್ದವಾಗಿದೆ.  “ಸರ್ಕಾರದ ಬೊಕ್ಕಸದಲ್ಲಿ ಹಣವಿದ್ದರೆ ಈಗಲೇ ಕೊಡಬೇಕಲ್ಲವೇ?. ಇದರಿಂದ ತರಾತುರಿ ನಿರ್ಧಾರವು ಅಸಾಧ್ಯ. ನಿಮಗೆ ಸಹಾಯ ಮಾಡಲು ಇಲ್ಲಿಗೆ ಬಂದಿದ್ದೇನೆ ಹೊರತು, ತೊಂದರೆ ಕೊಡಲು ಅಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸಲು ಸ್ವಲ್ಪ ಕಾಲಾವಕಾಶ ನೀಡಿ” ಎಂದು ಮುಖ್ಯಮಂತ್ರಿ ಡಿಕೆಶಿವಕುಮಾರ ರೈತರಲ್ಲಿ ಮನವಿ ಮಾಡಿದರು. 

    ಸೋಮವಾರ ಸುವರ್ಣ ಸೌಧದಲ್ಲಿ ರೈತರ ಕಬ್ಬು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಕಬ್ಬಿನ ಬೆಲೆ ಹೆಚ್ಚಳ ಹಾಗೂ ರೈತರ ವಿವಿಧ ಬೇಡಿಕೆಗಳ ಕುರಿತು ರೈತರು ವ್ಯಕ್ತಪಡಿಸಿದ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಅವರು, ತರಾತುರಿಯಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಕಬ್ಬಿನ ಬೆಲೆ ಹೆಚ್ಚಳ ಅಥವಾ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸಿದರು. 

   ಈ ಸಂದರ್ಭದಲ್ಲಿ ರೈತರು ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದಾಗ, “ನಮ್ಮನ್ನು ಹೆದರಿಸುತ್ತಿದ್ದೀರಾ? ಅಥವಾ ಹೊಡೆಯಲು ಬರುತ್ತಿದ್ದೀರಾ?” ಎಂದು ಪ್ರಶ್ನಿಸಿದ ಡಿಕೆಶಿವಕುಮಾರ, ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನಾನು ಬೆಂಗಳೂರಿನಲ್ಲಿ ಸಭೆ ಕರೆಯಬಹುದಿತ್ತು. ಆದರೆ ಎಲ್ಲರೂ ಮಾತನಾಡಿದರೆ ಹೇಗೆ? ಎಲ್ಲರೂ ಮುಖಂಡರಾಗಲು ಸಾಧ್ಯವಿಲ್ಲ. ನಿಮ್ಮ ಮುಖಂಡರಿಗೆ ಮಾತನಾಡಲು ಅವಕಾಶ ನೀಡಿ” ಎಂದು ರೈತರನ್ನು ಉದ್ದೇಶಿಸಿ ಹೇಳಿದರು. 

   ರೈತರಿಗೆ ನೀಡಲಾಗುವ ಪರಿಹಾರದ ಕುರಿತು ಮಾತನಾಡಿದ ಅವರು, ಪ್ರತಿ ರೈತನಿಗೆ 50 ನೀಡಿದರೂ ಒಟ್ಟು 300 ಕೋಟಿ ಆಗುತ್ತದೆ ಎಂದು ಪ್ರಸ್ತಾಪಿಸಿದರು. ವಿದ್ಯುತ್‌ಗಾಗಿ ಸರ್ಕಾರ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿದೆ.  

ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯದ ಆರ್ಥಿಕ ಇಲಾಖೆಯ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವ ಅಗತ್ಯವಿದೆ. “ನಾನು ನಿಮ್ಮೊಂದಿಗಿದ್ದೇನೆ. ರೈತರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ” ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. ರೈತರ ಬೇಡಿಕೆಗಳ ಕುರಿತು ಚರ್ಚೆ ನಡೆಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಸರ್ಕಾರಕ್ಕೆ ಕಾಲಾವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು.

   ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಮಹಾರಾಷ್ಟöçದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಭರವಸೆ ನೀಡಲಾಗಿದೆ. ಕೇಂದ್ರ ಸರ್ಕಾರದ ಸಮಿತಿಯು ಅಕ್ಟೋಬರ್ 29ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಸಮಿತಿಯ ಮುಂದೆ ರೈತರ ಪರವಾಗಿ ವಾದ ಮಂಡಿಸುವುದಾಗಿ ತಿಳಿಸಲಾಗಿದೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಈ ವಿಚಾರದಲ್ಲಿ ಆತುರದ ಅಥವಾ ಆವೇಶದ ನಿರ್ಧಾರ ಕೈಗೊಳ್ಳುವುದಿಲ್ಲ. ರೈತರ ಧ್ವನಿಯಾಗಿ ನಿಂತು, ಎಲ್ಲರ ವಿಶ್ವಾಸ ಪಡೆದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. 

ರೈತರ ಹೋರಾಟಕ್ಕೆ ಗೌರವ ನೀಡಿ, ಈ ಹಿಂದೆ ಕಿತ್ತೂರಿನಲ್ಲಿ ರೈತರನ್ನು ಭೇಟಿ ಮಾಡಿ ಚರ್ಚೆ ನಡೆಸುವುದಾಗಿ ನೀಡಿದ್ದ ಭರವಸೆಯಂತೆ ಸಭೆ ಕರೆಯಲಾಗಿದೆ ಎಂದು ತಿಳಿಸಿದರು. 

  ಮಹಾರಾಷ್ಟ್ರದಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೃಷ್ಣಾ ಅಣೆಕಟ್ಟು ಭರ್ತಿಯಾಗಿದ್ದರೂ, ಇತರ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿಲ್ಲ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಆತಂಕವಿದೆ. ವಿದ್ಯುತ್ ಉತ್ಪಾದನೆ ಕುಸಿದಿರುವುದರಿಂದ ವಿದ್ಯುತ್ ಕೊರತೆಯೂ ಉಂಟಾಗಿದೆ. ರಾಜ್ಯದಲ್ಲಿ ಸುಮಾರು 22 ಲಕ್ಷ ರೈತರ ಪಂಪ್‌ಸೆಟ್‌ಗಳು ಹಾಗೂ ಗೃಹಜ್ಯೋತಿ ಯೋಜನೆಗೆ ದೊಡ್ಡ ಪ್ರಮಾಣದ ಹಣ ವೆಚ್ಚವಾಗುತ್ತಿದೆ. ಈ ವರ್ಷ ಹೆಚ್ಚುವರಿಯಾಗಿ ಸುಮಾರು 9 ಸಾವಿರ ಕೋಟಿ ಹೊರೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದರು.

  ವಿದ್ಯುತ್ ಕೊರತೆಯ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ ಕೇರಳದಲ್ಲಿ 23 ಹಾಗೂ ಮತ್ತೊಂದು ರಾಜ್ಯದಲ್ಲಿ 33ರಂತೆ ಪಾವತಿಸಿ ವಿದ್ಯುತ್ ಖರೀದಿಸಿರುವುದಾಗಿ ಹೇಳಲಾಗಿದೆ. ಕಳೆದ ವರ್ಷ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ಕಬ್ಬಿಗೆ 300 ಹೆಚ್ಚುವರಿ ದರ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ನೀರಾವರಿ ಯೋಜನೆಗಳಿಗೆ ಬಳಸಿದ ವಿದ್ಯುತ್ ಬಿಲ್‌ಗಳ ಪಾವತಿಯೂ ಬಾಕಿಯಿದೆ. ಡೀಸೆಲ್, ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ಏರಿಕೆಯಿಂದ ರೈತರ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಆದರೆ ಸಕ್ಕರೆ ಬೆಲೆಯಲ್ಲಿ ನಿರೀಕ್ಷಿತ ಏರಿಕೆಯಾಗಿಲ್ಲ ಎಂಬುದು ರೈತರ ಅಳಲಾಗಿದೆ. 

  ಕಬ್ಬಿನ ಇಳುವರಿ ಹಾಗೂ ಸಕ್ಕರೆ ಉತ್ಪಾದನೆ ಕುಸಿದಿರುವುದರಿಂದ ಕಾರ್ಖಾನೆಗಳ ಮೇಲೂ ಒತ್ತಡವಿದೆ. ಎಥನಾಲ್ ಉತ್ಪಾದನೆಗೆ ಕಬ್ಬು ಬಳಸಬಾರದು ಎಂಬ ಸೂಚನೆಯೂ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (mSP) ಹೆಚ್ಚಳವಾದರೆ ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತದೆ ಎಂದು ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೇಡಿಕೆಗಳನ್ನು ಪರಿಶೀಲಿಸಬೇಕಿದೆ. ರೈತರ ಸಂಕಷ್ಟದ ಅರಿವು ಸರ್ಕಾರಕ್ಕಿದ್ದು, ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ಮುಂದುವರಿಸಿ, ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, 29ರಂದು ಕೇಂದ್ರ ಕಮಿಟಿಯವರು ಬರುತ್ತಾರೆ. ಅವರ ಜೊತೆ ನಾವು ಇರತೇವೆ. ರೈತರಿಗೆ ಒಂದು ದಾರಿ ಹುಡುಕೋನ ಎಂದರು. ಎಂಎಸ್‌ಪಿ ಎಂದು ನೀಡದೆ ಇರುದರಿಂದ ಈ ಹಿಂದೆ ಪ್ರೋತ್ಸಾಹ ಹಣ ರಾಜ್ಯ ಸರಕಾರ ನೀಡದೆ ಎಂದು ನುಡಿದರು. ಬಳಿಕ ಚೂನಪ್ಪ ಪೂಜಾರಿ ಮಾಡಿ, ಸಕ್ಕರೆ ಕಾರಖಾನೆ ಬೆಲೆ ನಿಗದಿ ಮಾಡಬೇಕು. ಸರಕಾರ ತೆರಿಗೆ ಹಣದಿಂದ ನಮಗೆ ಬೆಲೆ ನೀಡಬೇಕಾಗಿದೆ. ಗುರ್ಲಾಪೂರದಲ್ಲಿ ಈಗಾಗಲೇ ಪ್ರತಿಭಟನೆ ನಡೆಯುತ್ತಿದೆ. ಸರಕಾರ ಏನು ನಿರ್ಧಾರ ಮಾಡಿದೆ ಎನ್ನುವದನ್ನು ತಿಳಿಸಲಿ ಆಮೇಲೆ ನಾವು ನಮ್ಮ ನಿರ್ಧಾರ ತಿಳಿಸೊನ ಎಂದರು. ಶಾಸಕರ ಕಾರಖಾನೆಯವರ ಜೊತೆಗೆ ಮಾತನಾಡಿ, ಕಾರಖಾನೆಗಳು ಬಂದಾಗಬಾರದು ಒಂದು ಗಟ್ಟಿ ಧ್ವನಿಯಿಂದ ಏನಾದರು ಒಂದು ತಿರ್ಮಾಣ ಮಾಡಿ. ರಾಜ್ಯ ಸರಕಾರದ 5 ಗ್ಯಾರೇಂಟಿ ಯೋಜನೆಗಳಲ್ಲಿ ತೆರಿಗೆ ಹಣದಿಂದ ರೈತರಿಗೆ ಪ್ರೋತ್ಸಾಹ ಹಣ ನೀಡುವ ಮೂಲಕ 6 ಗ್ಯಾರೇಂಟಿ ಎಂದು 1000 ರೂ. ತೆರಿಗೆ ಹಣ ರಾಜ್ಯ ಸರಕಾರ ನೀಡಲಿ ಎಂದು ಒತ್ತಾಯಿಸಿದರು. ರಾಜ್ಯ ಸರಕಾರ ಒಂದು ಗಟ್ಟಿ ನಿರ್ಧಾರ ಮಾಡಲಿ, ಆಮೇಲೆ ಕೇಂದ್ರ ಸರಕಾರ ಬೆನ್ನು ಬೆನ್ನು ಬೀಳುವದಾಗಿ ಹೇಳಿದರು. 

  ಕಾರಖಾನೆ ಮಾಲಿಕರ ಜತೆ 2ನೇ ಸುತ್ತಿನ ಮಾತುಕತೆ:

  ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಸಿಎಂ ಡಿ ಕೆ ಶಿವಕುಮಾರ್ ಅವರು ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಸೋಮವಾರ ರಾತ್ರಿ ಸಕ್ಕರೆ ಮಾಲೀಕರೊಂದಿಗೆ ಎರಡನೇ ಸುತ್ತಿನ ಚರ್ಚೆ ನಡೆಸಿದರು.

  ಈ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ, ಸಂತೋಷ್ ಲಾಡ್, ಯಶವಂತರಾಯ ಗೌಡ ಪಾಟೀಲ್, ಶಾಸಕ ಎನ್ ಎಚ್ ಕೋನರೆಡ್ಡಿ, ಸಿಎಂ ಆರ್ಥಿಕ ಸಲಹೆಗಾರ ಎಲ್ ಅತೀಕ್, ಅಪರ ಮುಖ್ಯಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್, ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಉಪಸ್ಥಿತರಿದ್ದರು.

ಸುದ್ದಿ ಓದಿ