ಪಾಮನಕಲ್ಲೂರಲಿ ಅದ್ಧೂರಿಯಾಗಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ರಾಯಚೂರು 26: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ವಜನಾಂಗದ ಮುಖಂಡರ ನೇತೃತ್ವದಲ್ಲಿ ಸೋಮವಾರ ಅರ್ಥಪೂರ್ಣವಾಗಿ ಮತ್ತು ಅದ್ಧೂರಿಯಾಗಿ ಆಚರಿಸಲಾಯಿತು.ಗ್ರಾಮದ ರಾಯಚೂರು - ಲಿಂಗಸುಗೂರು ಮುಖ್ಯರಸ್ತೆ ಬಳಿ ಇರುವ ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ಮತ್ತು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರು ಮತ್ತು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಚಾಲನೆ ನೀಡಿದರು.
ಮಹಾತ್ಮರ ವೃತಗಳಿಗೆ ಪೂಜೆ:ಪ್ರತಿಭಾರಿಯಂತೆ ಈ ಬಾರಿ ಕೂಡ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಮುಖ್ಯರಸ್ತೆಯ ಬಳಿಯಲ್ಲಿರುವ ಶ್ರೀ ಗುರು ಒಳಬಳ್ಳಾರಿ ಚನ್ನಬಸವೇಶ್ವರ ನಾಮಫಲಕ, ನಿಜಶರಣ ಅಂಬಿಗರ ಚೌಡಯ್ಯರ ನಾಮಫಲಕ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಾಮಫಲಕ, ಕನಕದಾಸರ ನಾಮಫಲಕ, ಟಿಪ್ಪು ಸುಲ್ತಾನ್ ನಾಮಫಲಕಗಳಿಗೆ ಪೂಜೆ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ನಾಲ್ವರ್ಕರ್, ಜಗತ್ತಿನಾದ್ಯಂತ ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿ ಎಲ್ಲರೂ ಅನುಕರಣೆ ಮಾಡಬಹುದಾದ ಮಹಾನ್ ಗ್ರಂಥವನ್ನು ಮಹರ್ಷಿ ವಾಲ್ಮೀಕಿಯವರು ನಮಗೆ ನೀಡಿದ್ದಾರೆ.
ಅವರ ಜಯಂತಿಯನ್ನು ರಾಷ್ಟ್ರಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಅದರಂತೆಯೇ ಪಾಮನಕಲ್ಲೂರು ಗ್ರಾಮದಲ್ಲಿ ಕೂಡ ಸಂಭ್ರಮದಿಂದ ಮಹರ್ಷಿ ವಾಲ್ಮೀಕಿಯವರ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದರು.ಮಹರ್ಷಿ ವಾಲ್ಮೀಯವರು ರಾಮಾಯಣ ಗ್ರಂಥದ ಮೂಲಕ ಏನೆಲ್ಲಾ ಮೌಲ್ಯಯುತವಾದ ಸಂದೇಶಗಳನ್ನು ನೀಡಿದ್ದಾರೋ ಅವುಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು. ಮಹರ್ಷಿ ವಾಲ್ಮೀಕಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಲ್ಲಿಕಾರ್ಜುನ ನಾಲ್ವರ್ಕರ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಅಚರ್ಕರಾದ ವಿದ್ಯಾನಂದ ಸ್ವಾಮೀಜಿ, ಲಚಮಪ್ಪ ಕೊಂಡಾಲ, ಸಣ್ಣ ದುರುಗಪ್ಪ ಜೋಳದಾರಾಶಿ, ಅಯ್ಯಪ್ಪ ಯದಲದೊಡ್ಡಿ, ಮಲ್ಲಿಕಾರ್ಜುನ ನಾಲ್ವರಕರ್, ವಿಜಯಕುಮಾರ್ ಗುತ್ತೇದಾರ, ವೆಂಕಟೇಶ್ ಯದಲದೊಡ್ಡಿ ಕಾನ್ಯಾಳ, ನಾಗಪ್ಪ ಅರಿಕೇರಿ, ರಂಗಪ್ಪ ಅರಿಕೇರಿ, ಮಲ್ಲಪ್ಪ ಅರಿಕೇರಿ, ಮಲ್ಲಿಕಾರ್ಜುನ ಗೊಬ್ಬಿ, ಗಂಗಪ್ಪ ಯದಲದೊಡ್ಡಿ, ಅಯ್ಯಪ್ಪ ನಾಯಕ ವಾಟರಮ್ಯಾನ್, ಮೌನೇಶ ಯದಲದೊಡ್ಡಿ, ಅಯ್ಯಣ್ಣ ನಾಯಕ, ಬಸವರಾಜ ಪೋಸ್ಟ್ ಮಾಸ್ಟರ್, ಅಮರೇಗೌಡ ಗುಡಿಹಾಳ, ಮರೆಪ್ಪ ಹುಣಸಗಿ, ಲಕ್ಷ್ಮೀಕಾಂತ ಭೋವಿ, ಲಕ್ಷ್ಮಣ ಚೌಡ್ಲಿ, ನಾಗರಾಜ ಅರಿಕೇರಿ, ಅಮರೇಶ ಕಮತರ್ ಸೇರಿದಂತೆ ವಾಲ್ಮೀಕಿ ನಾಯಕ ಸಮಾಜದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.