ಬಾಗಲಕೋಟೆ

ಸಾಹಿತ್ಯದ ಬೀಜ ಬಿತ್ತಿದ ಪ್ರಥಮ ದಾರ್ಶನಿಕ ಮಹರ್ಷಿ ವಾಲ್ಮೀಕಿ: ರವಿ ಕಂಗಳ

ಸಾಹಿತ್ಯದ ಬೀಜ ಬಿತ್ತಿದ ಪ್ರಥಮ ದಾರ್ಶನಿಕ ಮಹರ್ಷಿ ವಾಲ್ಮೀಕಿ: ರವಿ ಕಂಗಳ

ಲೋಕದರ್ಶನ ವರದಿ 

      ಬೀಳಗಿ 26: ಸಾಹಿತ್ಯದ ಬೀಜ ಬಿತ್ತಿದ ಪ್ರಥಮ ದಾರ್ಶನಿಕ ಮಹರ್ಷಿ ವಾಲ್ಮೀಕಿ. ಸಾಹಿತ್ಯದಿಂದ ಜೀವಾನುಭವವನ್ನು ಲೋಕಾನುಭವವನ್ನಾಗಿ ಕಟ್ಟಿಕೊಟ್ಟ ಮಹಾನ ಪುರುಷ ಮಹರ್ಷಿ ವಾಲ್ಮೀಕಿ ಎಂದು ಬದಾಮಿಯ ಸಾಹಿತಿ ರವಿ ಕಂಗಳ ಅಭಿಪ್ರಾಯ ಪಟ್ಟರು. 

         ಪಟ್ಟಣದ ಮಿನಿ ವಿಧನ ಸೌಧ ಆವರಣದಲ್ಲಿ ತಾಲೂಕಾ ಆಡಳಿತ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. 

          ಮನಕುಲಕ್ಕೆ ವಾಲ್ಮೀಕಿ ರಾಮಾಯಣ ಶ್ರೇಷ್ಠವಾದ ಕಾವ್ಯವಾಗಿದೆ. ಬರೆ ಮನಸ್ಸಿನ ಕಲ್ಮಶವನ್ನು ಪರಿಶುದ್ಧಗೊಳಿಸುವ ಕಾವ್ಯಗಳನ್ನು ಕಟ್ಟಿಕೊಟ್ಟ ಮಹಾನ ಚೇತನ ಅವರು. ವಾಲ್ಮೀಕಿ ಮಹಾಕಾವ್ಯ ರಾಮಾಯಣ ಪಾರಾಯಣ ಮಾಡಿದಷ್ಟು ರಸಸೃಷ್ಠಿಯ ಕಾವ್ಯವಾಗುತ್ತದೆ. ರಾಮಾಯಣ ನಮಗೆ ಜೀವನ ದರ್ಶನ ನೀಡಿದೆ ಎಂದರು.  

   ತಹಶೀಲ್ದಾರ ವಿನೋದ ಹತ್ತಳ್ಳಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಮನುಕುಲದ ಕಳಶವಾಗಿದ್ದು ಅವರು ಒಂದೇ ಸಮುದಾಯಕ್ಕೆ ಸೀಮಿತರಲ್ಲ ಸರ್ವಧರ್ಮಕ್ಕೂ ಅವರು ಮಹಾ ಚೇತನ ಎಂದರು.  

            ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಅಧ್ಯಕ್ಷ ಎ.ಆರ್‌.ಪ್ಯಾಟಿಮಠ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡು ನಮ್ಮ ಬದುಕು  ಸುಂದರವಾಗಿ ನಿರ್ಮಾಣವಾಗುತ್ತದೆ. ಸಮೂದಾಯ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಎಂದರು. 

             ತಾಪಂ ಇಒ ಶ್ರೀನಿವಾಸ ಪಾಟೀಲ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಸಮಾಜ ಕಲ್ಯಾಣ ಇಲಾಖೆ ಇಡಿ ಸಿ.ಎಸ್‌.ಗಡ್ಡದೇವರಮಠ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಟಿ.ವೈ ಜಾನಮಟ್ಟಿ, ಬಿಜೆಪಿ ಎಸ್‌ಟಿ ಘಟಕ ಅಧ್ಯಕ್ಷ ಎಂ.ವೈ ವಡವಾಣಿ, ವೀರ ಸಿಂಧೂರ ಲಕ್ಷ್ಮಣ ಟ್ರಸ್ಟ್‌ ಅಧ್ಯಕ್ಷ ಶಂಕರ ತಳವಾರ, ಮುಖಂಡ ಸುರೇಂದ್ರ ನಾಯಕ, ವಿಠ್ಠಲ ಕಳಸನ್ನವರ, ಹಣಮಂತ ಕಟ್ಟೆಪ್ಪನವರ ಇತರರು ಇದ್ದರು. 


ಸುದ್ದಿ ಓದಿ