ಬಾಗಲಕೋಟೆ

ಬಾಗಲಕೋಟೆ ಜಿಲ್ಲಾ ಕ್ರಿಕೆಟ್ ಟೂರ್ನಿಗೆ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ತಂಡ ಸಜ್ಜು

ಬಾಗಲಕೋಟೆ ಜಿಲ್ಲಾ ಕ್ರಿಕೆಟ್ ಟೂರ್ನಿಗೆ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ತಂಡ ಸಜ್ಜು

 ಬೀಳಗಿ 24 : ಇತ್ತಿಚ್ಚೇಗೆ ಕ್ರೀಡೆಗಳಿಗೆೆ ತುಂಬಾ ಪ್ರಾಮುಖ್ಯತೆ ಹೆಚ್ಚುತ್ತಿದೆ. ಕ್ರೀಡಾ ಚಟುವಟಿಕೆಯಲ್ಲಿ ತೋಡುಗುವುದರಿಂದ ಮಾನಸಿಕ ವೃದ್ದಿ, ಆರೋಗ್ಯ ಚೈತನ್ಯ, ಮಾನಸಿಕವಾಗಿ ಏಕಾಗ್ರಹತೆ ಮೂಡಲಿದೆ ಎಂದು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಎನ್‌.ಪಾಟೀಲ ಹೇಳಿದರು.                      ಇಲ್ಲಿಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿ ಸಭಾಂಗಣದ ಆವರಣದಲ್ಲಿ ನಡೆದ ಬಾಗಲಕೋಟೆ ಜಿಲ್ಲಾ ಪಟ್ಟಣ ಸಹಕಾರಿ ಬ್ಯಾಂಕುಗಳ ಕ್ರಿಕೆಟ್ ಟೂರ್ನಾಮೆಂಟ್ 2026-27 ಹಾಗೂ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ ಇದರ ಕ್ರಿಕೆಟ್ ಜರ್ಸಿ ಹಾಗೂ ಕ್ರಿಕೆಟ್ ಕಿಟ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಮಖಂಡಿಯಲ್ಲಿ ಅ.24 ಹಾಗೂ 25 ಎರಡು ದಿನಗಳವರೆಗೆ ನಡೆಯಲಿರುವ ಬಾಗಲಕೋಟೆ ಜಿಲ್ಲಾ ಪಟ್ಟಣ ಸಹಕಾರಿ ಬ್ಯಾಂಕುಗಳ ಕ್ರಿಕೆಟ್ ಟೂರ್ನಾಮೆಂಟ್‌ದಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಟೀಮ್ ಉತ್ತಮ ಪ್ರದರ್ಶನ ನೀಡಬೇಕು. ಕ್ರೀಡಾಕೂಟದ ನಿಯಮಗಳನ್ನು ಪಾಲನೆ ಮಾಡಿ ಉತ್ತಮ ಪ್ರದರ್ಶನ ನೀಡಬೇಕು. ಬ್ಯಾಂಕಿನ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎಸ್‌.ಆರ್‌.ಪಾಟೀಲರು ಕ್ರೀಡಾಭಿಮಾನಿಗಳಿಗೆ ಹಾಗೂ ಇತರೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಈ ನಿಟ್ಟಿನಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಟೀಮ್ ಜಿಲ್ಲೆಯಲ್ಲಿಯೇ ಬೀಳಗಿಯ ಹೆಸರು ಮತ್ತು ಗೌರವ ತರಲಿ ಎಂದು ಶುಭ ಹಾರೈಸಿದರು.  ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬ್ಯಾಂಕಿನ ನಿರ್ದೇಶಕರಾದ ರಾಜೇಂದ್ರ ಬಾರಕೇರ, ಶ್ರೀಶೈಲ ಅಂಟಿನ, ಗಂಗಣ್ಣ ಕೆರೂರು, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಿ.ಎಸ್‌.ಬನಹಟ್ಟಿ, ಬಿ.ಟಿ.ಪಾಟೀಲ, ಎಮ್‌.ವಿ.ನ್ಯಾಮಗೌಡರ, ಲಿಂಗರಾಜ ಕೊಟಗಿ ಇತರರು ಇದ್ದರು. 


ಸುದ್ದಿ ಓದಿ