ಬಾಗಲಕೋಟೆ

ಬಂಡಿಗಣಿ ಶ್ರೀಗಳ ಸಾವಿನ ಸುತ್ತ ಅನುಮಾನದ ಹುತ್ತ: 19 ಜನರ ವಿರುದ್ಧ ಎಫ್‌ಐಆರ್

ಬಂಡಿಗಣಿ ಶ್ರೀಗಳ ಸಾವಿನ ಸುತ್ತ ಅನುಮಾನದ ಹುತ್ತ: 19 ಜನರ ವಿರುದ್ಧ ಎಫ್‌ಐಆರ್

ಲೋಕದರ್ಶನ ವರದಿ 


ರಬಕವಿ-ಬನಹಟ್ಟಿ : ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಶ್ರೀಗಳ ನಿಗೂಢ ಸಾವಿನ ಪ್ರಕರಣ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದು, ತನಿಖೆ ನಿರ್ಣಾಯಕ ಹಂತ ತಲುಪುವ ನೀರೀಕ್ಷೆ ಮೂಡಿಸಿದೆ. ಲಕ್ಷಾಂತರ ಭಕ್ತರನ್ನು ಹೊಂದಿರುವ ಮಠದ ಶ್ರೀಗಳ ಸಾವಿನ ಸುತ್ತ ಎದ್ದಿರುವ ಅನುಮಾನಗಳಿಗೆ ಉತ್ತರ ಸಿಗಲಿದೆಯೇಯೆಂಬ ಕುತೂಹಲ ಭಕ್ತವಲಯದಲ್ಲಿ ತೀವ್ರಗೊಂಡಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಬನಹಟ್ಟಿ ಸಿಪಿಐ ಪೊಲೀಸರು ಶಿವಾನಂದ ಹಿರೇಮಠ, ಅಲ್ಲಪ್ಪ ಗಣೇಶವಾಡಿ, ಹನಮಂತ ಚೌಗಲೆ ಸೇರಿದಂತೆ ಒಟ್ಟು 19 ಮಂದಿಯ ವಿರುದ್ಧ ಸೆ.17ರಂದು ಎಫ್‌ಐಆರ್ ದಾಖಲಿಸಿದ್ದಾರೆಂದು ದೂರುದಾರರು ತಿಳಿಸಿದ್ದಾರೆ. 

ಸಾವಿನ ಸುತ್ತ ಅನುಮಾನದ ಹುತ್ತ! : 2025ರ ನವೆಂಬರ್ 25ರಂದು ತೀವ್ರ ಅಸ್ವಸ್ಥಗೊಂಡಿದ್ದ ಶ್ರೀಗಳನ್ನು ಜಮಖಂಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆ ಪಡೆಯಲು ಅಡ್ಡಿಪಡಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಲ್ಲದೆ, ಕುಟುಂಬದವರಿಗೂ ಭೇಟಿಗೆ ಅವಕಾಶ ನೀಡಿರಲಿಲ್ಲ ಎಂಬ ಗಂಭೀರ ಆರೋಪಗಳನ್ನು ದೂರುದಾರರು ಮಾಡಿದ್ದಾರೆ. 

ಶ್ರೀಗಳ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಕುಟುಂಬದವರು, ಕೊಲೆ, ನಕಲಿ ಮರಣ ಪ್ರಮಾಣಪತ್ರ ಸೃಷ್ಟಿ, ಸಾಕ್ಷ್ಯನಾಶ ಹಾಗೂ ಮಠದ ಬೆಲೆಬಾಳುವ ವಸ್ತುಗಳ ಕಳವು ಸೇರಿದಂತೆ ವಿವಿಧ ಆರೋಪಗಳ ಕುರಿತು ಖಾಸಗಿ ದೂರು ಸಲ್ಲಿಸಿದ್ದರು. ಈ ಆರೋಪಗಳು ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಬೇಕಿವೆ. 

ಕೊಲೆ, ಸಾಕ್ಷ್ಯನಾಶ ಆರೋಪಗಳ ತನಿಖೆಗೆ ನ್ಯಾಯಾಲಯದ ಅಸ್ತು : ನ್ಯಾಯಾಲಯದ ನಿರ್ದೇಶನದಂತೆ ದಾಖಲಾದ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (ಕೊಲೆ) ಮತ್ತು 238 (ಸಾಕ್ಷ್ಯನಾಶ) ಸೇರೆ​‍್ಡಗೆ ಸೆ.22ರಂದು ಅನುಮತಿ ದೊರೆತಿದೆ. ಪ್ರಕರಣದ ಮುಂದಿನ ತನಿಖೆ ನಡೆಸಿ ವರದಿ ಸಲ್ಲಿಸಲು ನವೆಂಬರ್ 5ರ ಗಡುವು ನಿಗದಿಪಡಿಸಲಾಗಿದೆ. 


ಸುದ್ದಿ ಓದಿ