ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬ ಸಹಕಾರಿ : ಎಂ.ಎ.ಎಣ್ಣಿ
ಲೋಕದರ್ಶನ ವರದಿ
ಹಾವೇರಿ : ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯ ಹಬ್ಬವಾಗಬೇಕು. ಬಹಳ ಸ್ವಾತಂತ್ರ್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರವನ್ನುಂಟು ಮಾಡಬಲ್ಲದು. ತನ್ನದೇ ಲೋಕವೊಂದನ್ನು ವಿಸ್ತರಿಸಿಕೊಳ್ಳುವುದು ಎಂದು ಹಾವೇರಿ ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಕಾರ್ಯದರ್ಶಿಯಾದ ಎಂ.ಎ.ಎಣ್ಣಿ ಹೇಳಿದರು.
ಹಿತ್ತಲಮನಿ ಗುರುಕುಲಮ್ ಪೂರ್ವ ಪ್ರಾಥಮಿಕ ಶಾಲೆ, ಹಾವೇರಿ ಶರಣ ಸಾಹಿತ್ಯ ಪರಿಷತ್ ತಾಲೂಕಾ ಘಟಕ ಹಾವೇರಿ,ಅಗಸ್ತ್ಯ ಸ್ಯಾಮಸಂಗ್ ಫೌಂಡೇಶನ್ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಕಲಿಕಾ ಹಬ್ಬದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಕಲಿಕಾ ಹಬ್ಬದ ಸಂಚಾಲಕರಾದ ಜಿ.ಎಂ. ಓಂಕಾರಣ್ಣನವರ ಮಾತನಾಡಿ ಕಲಿಕಾ ಹಬ್ಬದಲ್ಲಿ ಚಟುವಟಿಕೆಗಳು ಕಲಿಕೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಚೆನ್ನಾಗಿತ್ತು. ಚಿಕ್ಕ ಮಕ್ಕಳಿಗೆ ಕಲಿಕಾ ಪರಿಸರವನ್ನು ರೂಪಿಸುವ ಜವಾಬ್ದಾರಿ ಹಾಗೂ ಸವಾಲಿನ ಕೆಲಸವಾಗಿತ್ತು. ಈ ಹಬ್ಬದಲ್ಲಿ ಆಡು-ಹಾಡು, ಕಾಗದ-ಕತ್ತರಿ, ಮಾಡು-ಆಡು ಚಟುವಟಿಕೆಗಳಲ್ಲಿ ಮಕ್ಕಳು ಖುಷಿಯಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಎಂದರು.
ಈ ಕಲಿಕಾ ಹಬ್ಬದಲ್ಲಿ 40 ಮಕ್ಕಳು ಪಾಲ್ಗೊಂಡಿದ್ದರು. ಸಂಪನ್ಮೂಲಕ ವ್ಯಕ್ತಿಗಳಾಗಿ ಸಾವಿತ್ರಾ ಬಾರ್ಕಿ, ರಂಜನಾ ಭಟ್, ಅಕ್ಕಮಹಾದೇವಿ ಹಾನಗಲ್ಲ, ವೀರಣ್ಣ ಫಕ್ಕೀರಗೌಡ್ರ, ರುದ್ರ್ಪ ಹಳ್ಳಿಕೇರಿ, ಸಮೀರ ಯಲವದಳ್ಳಿ, ಗೀತಾ ಬಾನಪ್ಪನವರ ಕಾರ್ಯನಿರ್ವಹಿಸಿದರು.
ಶ್ರೀಮತಿ ಪೂಜಾ ವಿರೇಶ ಹಿತ್ತಲಮನಿ ಅಧ್ಯಕ್ಷತೆ ವಹಿಸಿದ್ದರು. ಅಕ್ಕಮಹಾದೇವಿ ಹಾನಗಲ್ಲ ಸ್ವಾಗತಿಸಿದರು. ರಂಜನಾ ಭಟ್ ಅನಿಸಿಕೆಗಳನ್ನು ಹೇಳಿದರು. ವಿರೇಶ ಹಿತ್ತಲಮನಿ ವಂದಿಸಿದರು.