ಕೆಟ್ಟ ವಿಚಾರ ಕೆಟ್ಟ ಆಚಾರ ಸುಟ್ಟು ಹಾಕುವುದೇ ದೇವಿ ಪುರಾಣ : ಶಿವಾನಂದ ಮ್ಯಾಗೇರಿ
ಶಿಗ್ಗಾವಿ 15 : ಕೆಟ್ಟ ವಿಚಾರ ಕೆಟ್ಟ ಆಚಾರ ಸುಟ್ಟು ಹಾಕುವುದೇ ದೇವಿ ಪುರಾಣ ಎಂದು ಶಿವಾನಂದ ಮ್ಯಾಗೇರಿ ಹೇಳಿದರು.ತಾಲೂಕಿನ ಹಿರೇ ಬೆಂಡಿಗೇರಿಯಲ್ಲಿ ನಡೆದ ಶ್ರೀದೇವಿ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಿ ಪುರಾಣ ದೇಹದ ಪುರಾಣ ರಾಕ್ಷಸರನ್ನು ನಾವು ಮನದೊಳಗೆ ಶರೀರದೊಳಗೆ ಇಟ್ಟುಕೊಂಡು ಬದುಕುತ್ತಿರುವುದೇ ನಮ್ಮ ಬದುಕಿಗೆ ಅಶಾಂತಿ ತಂದಿದೆ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ. ಎಂಬ ಮಾತ್ರ ದ್ವೇಷ ರೋಷ. ಕೋಪ ಕೇಡು ಹೊಟ್ಟೆಕಿಚ್ಚು ಅಸೂಯೆ ಅಹಂಕಾರವೆಂಬ ರಾಕ್ಷಸರು ನಮ್ಮ ಶರೀರದಲ್ಲಿ ವಾಸವಾಗಿದ್ದಾರೆ.
ಅವರನ್ನು ನಾವು ನಮ್ಮ ಮನ ಎಂಬ ಮನೆಯನ್ನು ಬಿಡಿಸುವವರೆಗೂ ನಮಗೆ ನೆಮ್ಮದಿ ಸಿಗುವುದಿಲ್ಲ ಅವರೊಂದಿಗೆ ನಮ್ಮ ಮನಸೇ ಸಾಕ್ಷಾತ ದೇವಿ ರೂಪ ತಾಳಿ ಯುದ್ಧ ಮಾಡಿ ನಾಶ ಮಾಡಿದಾಗ ನಮ್ಮ ಬದುಕಿನಲ್ಲಿ ಶಾಂತಿ ನೆಮ್ಮದಿ ಆರೋಗ್ಯ ಆನಂದ ಸಂತೃಪ್ತಿ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದರು.
ಪುರಾಣ ಪ್ರವಚನ ಮಾಡಿದ ಕುಮಾರಿ ಗಾಯತ್ರಿ ಪತ್ತಾರ್ ಪ್ರವಚನದಲ್ಲಿ ಪ್ರತಿಯೊಬ್ಬರ ಮನಸ್ಸು ಚಂಚಲವಾಗಿದೆ ನೆಮ್ಮದಿ ಹಾಳಾಗಿ ಹೋಗಿದೆ.
ಅದಕ್ಕೆ ಕಾರಣ ನಮ್ಮಲ್ಲಿ ಪ್ರತಿದಿನ ನಾವು ನಾನು ನನ್ನದು ನನ್ನಿಂದ ಎಂಬ ಸ್ವಾರ್ಥದಲ್ಲಿ ಮುಳುಗಿ ಬದುಕಿನ ಅರ್ಥ ಕಳೆದುಕೊಂಡಿದ್ದೇವೆ ದೇವಿ ಪುರಾಣದಿಂದ ನಾವೆಲ್ಲರೂ ಜ್ಞಾನ ಧ್ಯಾನ ಧ್ಯಾನ ಮಾಡಿ ದೇವಿ ಚರಿತ್ರೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಬಂಗಾರಕಿಂತ ಹೆಚ್ಚು ಬೆಲೆ ಮತ್ತು ಗೌರವ ತರುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಗೀತ ಸೇವೆಯನ್ನು ಕುಮಾರ ಸರ್ವೇಶ ಪತ್ತಾರ್ ನೆರವೇರಿಸಿದರು. ಗ್ರಾಮದ ಹಿರಿಯರಾದ ತಿಪ್ಪಣ್ಣ ಸಾತಣ್ಣವರ, ಚೆನ್ನಪ್ಪ ಕುಂದಗೋಳ, ಬಸನಗೌಡ ಪಾಟೀಲ್, ರಮೇಶ್ ಸಾತಣ್ಣವರ, ಈರನಗೌಡ ನಡುವಿನಮನಿ, ಈರಮ್ಮ ಹಡಪದ ಸೇರಿಸಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.