ಅದ್ದೂರಿಯಾಗಿ ನಡೆದ ಉಡಚಮ್ಮದೇವಿ (ಕರೆಮ್ಮದೇವಿ)ಯ ನೂತನ ಪಲ್ಲಕ್ಕಿ ಉತ್ಸವ
ಲೋಕದರ್ಶನ ವರದಿ
ಶಿಗ್ಗಾವಿ 12: ಪಟ್ಟಣದ ವಿಶ್ವೇಶ್ವರ ನಗರ, ಹಳೆ ಆಶ್ರಯ ಪ್ಲಾಟ್ ನಂ 2 ಶಾಲೆಯ ಹಿಂಬಾಗದಲ್ಲಿರುವ ಉಡಚಮ್ಮದೇವಿ (ಕರೆಮ್ಮದೇವಿ) ದೇವಸ್ಥಾನ ಸೇವಾ ಸಮಿತಿಯಿಂದ ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ರವಿವಾರ ಬೆಳಗ್ಗೆ ದೇವಿ ರುದ್ರಾಭಿಷೇಕ ನಡೆದು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ನೂತನ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು, ಸಾಯಂಕಾಲ 7 ಗಂಟೆಗೆ ಘಟಸ್ಥಾಪನೆ ನಡೆಯಿತು.
ಈ ಸಂದರ್ಭದಲ್ಲಿ ಉಡಚಮ್ಮದೇವಿ (ಕರೆಮ್ಮದೇವಿ) ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ರವಿ ಬಾಳಿಕಾಯಿ ಮುಖಂಡರಾದ ಸಂಗಪ್ಪ ಕಾರಡಗಿ, ತಿರಕಪ್ಪ ಸಂತಬಾನವರ, ರಮೇಶ ಹೊಟ್ಟೂರು, ಆನಂದ ಬೆಳವಲಕೊಪ್ಪ, ಸುನೀಲ್ ದಂಡಿನ, ಶಿವರಾಜ ಕ್ಷೌರದ, ಪರಸು ಸಂತಬಾನವರ, ಆನಂದ್ ಕಟ್ಟಿಮನಿ, ತುಕಾರಾಮ ಚೌವಾಣ, ಈರ್ಪ ಹೊಸಕೇರಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.