ಅಂಗವಿಕಲರಿಗೆ ಕೃತಕ ಅಂಗ, ನಿರ್ಗತಿಕ ರೋಗಿಗಳಿಗೆ ಓಷಧ ನೆರವು
ಶಿಗ್ಗಾವಿ 10 : ಸಮಾಜ ಸೇವೆ ಮಾಡಬೇಕು ಎನ್ನುವ ಗುಣ ಎಲ್ಲರಲ್ಲೂ ಬರಬೇಕು ಸಮಾಜದ ಒಳಿತಿಗೆ ಎಲ್ಲರು ನಿಸ್ವಾರ್ಥ ಸೇವೆ ಸಲ್ಲಿಸಬೇಕು ಹಾಗಾಗಿ ನಾನು ನಮ್ಮ ವರುಣಗೌಡ ಪಾಟೀಲ ಸೇವಾ ಸಂಸ್ಥೆ ವತಿಯಿಂದ ಪ್ರತಿ ತಿಂಗಳು ಶಿಗ್ಗಾವಿ ತಾಲೂಕಿನ ಒಬ್ಬ ಬಡ ಅಂಗವಿಕಲರಿಗೆ ಕೃತಕ ಕೈ ಅಥವಾ ಕಾಲು ಜೋಡಣೆ ಮಾಡಲಾಗುವದು ಎಂದು ಲ್ಯಾಂಡ್ ಲಾರ್ಡ್ ಹಾಗೂ ಸಮಾಜ ಸೇವಕ ವರುಣಗೌಡ ಪಾಟೀಲ ತಿಳಿಸಿದರು.
ತಾಲೂಕಿನ ಶ್ಯಾಡಂಬಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ತಂದೆಯವರು ಈ ಭಾಗದಲ್ಲಿ ಹಿಂತಹ ಸಾಕಷ್ಟು ಸಾಮಾಜಿಕ ಧಾರ್ಮಿಕ ಕೆಲಸ ಕಾರ್ಯಗಳಿಗೆ ಸಹಾಯ ಸಹಕಾರ ನೀಡುತ್ತಿದ್ದರು ಅವರು ಮಾಡುತ್ತಿರುವ ಸಮಾಜ ಸೇವಾ ಕಾರ್ಯಗಳು ನಮಗೆ ಪ್ರೇರಣೆ.ಹಾಗಾಗಿ ಬಡವರು ಕೂಲಿ ಕಾರ್ಮಿಕರು ತಮ್ಮ ಅಂಗ ವೈಖಲ್ಯತೆಯಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ.
ಎನ್ನುವವರಿಗೆ ನಮ್ಮ ಸಂಸ್ಥೆಯಿಂದ ಪ್ರತಿ ತಿಂಗಳು ಒಬ್ಬರಿಗೆ ಕೃತಕ ಕೈ ಅಥವಾ ಕಾಲು ಜೋಡಣೆ ಮಾಡಿಸಲಾಗುತ್ತದೆ ಒಂದು ವೇಳೆ ತಾಲೂಕಿನಲ್ಲಿ ಯಾರು ಅಂಗವಿಕಲತೆ ಹೊಂದಿದ ಬಡವರು ಸಿಗದೇ ಇದ್ದ ಪಕ್ಷದಲ್ಲಿ ದೀರ್ಘವಾದ ಕಾಯಿಲೆಯಿಂದ ಅಂದರೆ ಬಿಪಿ ಶುಗರ್ ರೋಗದಿಂದ ಬಳಲುತ್ತಿರುವ ಅಸಹಾಯಕ ಓಷಧಿ ತೆಗೆದುಕೊಳ್ಳಲು ಕಷ್ಟವಿರುವ ಅಂತ ಯಾರು ಇಲ್ಲದೆ ಒಬ್ಬರೇ ಜೀವನ ನಡೆಸುತ್ತಿರುವ ನಿರ್ಗತಿಕ ರೋಗಿಗಳಿಗೆ ಪ್ರತಿ ತಿಂಗಳು ಒಬ್ಬರಿಗೆ ಬೇಕಾಗುವ ಮಾತ್ರೆ ಓಷದ ವ್ಯವಸ್ಥೆ ಮಾಡಲಾಗುವುದು ಹಾಗಾಗಿ ತಾಲೂಕಿನ ಬಡವರು ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು ಹೆಚ್ಚಿನ ಮಾಹಿತಿಗೆ ಈ ಮೊಬೈಲ್ ನಂಬರಿಗೆ 95382 93918 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕೆಂದು ಹೇಳಿದರು.