ಗದಗ

ಬನ್ನಿಕಟ್ಟಿ ಈಶ್ವರ ದೇವಸ್ಥಾನದಲ್ಲಿ ಅ.14ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮ

ಬನ್ನಿಕಟ್ಟಿ ಈಶ್ವರ ದೇವಸ್ಥಾನದಲ್ಲಿ ಅ.14ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮ



ಲಕ್ಷೇಶ್ವರ 10 : ಪಟ್ಟಣದ ಹಾಗೂ ಸುತ್ತಮುತ್ತಲಿನ ಭಕ್ತರ ಧಾರ್ಮಿಕ ಭಾವನೆಗಳಿಗೆ ಸಾಕ್ಷಿಯಾಗಿರುವ ಬನ್ನಿಕಟ್ಟಿ ಈಶ್ವರ ದೇವರ ಪೂಜಾ ಕಾರ್ಯಕ್ರಮದ ಅಂಗವಾಗಿ, ದಿವಂಗತ ಶ್ರೀಮತಿ ಶಂಕ್ರಮ್ಮ ಕೊಂ. ಪರಮೇಶ್ವರ​‍್ಪ ಬಳಿಗಾರ ಅವರ ಪುಣ್ಯಸ್ಮರಣೆ ನಿಮಿತ್ತ ಅಕ್ಟೋಬರ್ 14, 2026ರ ಬುಧವಾರದಂದು ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಶಿಗ್ಲಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 11 ಗಂಟೆಗೆ ಅಮೃತಾರೆ​‍್ಣ ಕಾರ್ಯಕ್ರಮ ಜರುಗಲಿದ್ದು, ಧಾರ್ಮಿಕ  ವಿಧಿವಿಧಾನಗಳೊಂದಿಗೆ ದೇವರ ಪೂಜೆ ಹಾಗೂ ಸ್ಮರಣಾ ಕಾರ್ಯಕ್ರಮವನ್ನು ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಮುಕ್ತಿಮಂದಿರ ಧರ್ಮ ಕ್ಷೇತ್ರದ ಮುಕ್ತಿ ಮುನಿ ಶಿವಾಚಾರ್ಯ ಮಹಾಸ್ವಾಮಿಜಿಗಳು, ವಿರಕ್ತಮಠ ಹೂವಿನಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು, ಗಜ್ಜಿಗಟ್ಟಿ ಮಠದ ಶಿವಲಿಂಗ ಶರ ಮೂರ್ತಿಶ್ವರ ಮಹಾಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಕುಟುಂಬದ ಬಂಧುಗಳು, ಆತ್ಮೀಯರು, ಭಕ್ತರು ದಿವಂಗತರ ಸ್ಮರಣೆಗೆ ಗೌರವ ಸಲ್ಲಿಸುವಂತೆಆಯೋಜಕರು ಮನವಿ ಮಾಡಿದ್ದಾರೆ. 


ಸುದ್ದಿ ಓದಿ