ಬೈಕ್ ಡಿಕ್ಕಿ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ
ಲಕ್ಷ್ಮೇಶ್ವರ 10 : ಪಟ್ಟಣದ ದೂದ್ ನಾನಾ ದರ್ಗಾದ ಹತ್ತಿರ ಮಧ್ಯಾಹ್ನ 3:00 ಸುಮಾರಿಗೆ ಬೈಕ್ ಸವಾರನೊಬ್ಬ ದರ್ಗಾಕೆ ಬಂದ ಹುಡುಗಿಗೆ ಬೈಕ್ ಡಿಕ್ಕಿ ಹೊಡೆದ ವಿಚಾರವಾಗಿ ದರ್ಗಾಕೆ ಬಂದ ದಾವಣಗೆರೆ ಮೂಲದ ಮುಸ್ಲಿಂ ವ್ಯಕ್ತಿಗಳು ಬೈಕ್ ಡಿಕ್ಕಿ ಒಡೆದ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಯ ಮುಖಂಡರಿಂದ ಪಟ್ಟಣದ ಪೊಲೀಸ್ ಠಾಣೆ ಹತ್ತಿರ ಇರುವ ಕೆರೆಯ ದಂಡಿಯಲ್ಲಿ ಧರಣಿ ಕುಳಿತ ಘಟನೆ ನಡೆಯಿತು. ಧರಣಿ ಕುಳಿತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ಬಿ ವಿ ನ್ಯಾಮೇಗೌಡ ಪಿಎಸ್‌ಐ ಆನಂದ್ ಕ್ಯಾರೆಕಟ್ಟಿ ಕ್ರೈಂ ಪಿಎಸ್‌ಐ ಟಿ ಕೆ ರಾಠೋಡ್ ಅವರು ಧರಣಿ ನಿರತರೊಂದಿಗೆ ಮಾತುಕತೆ ನಡೆಸಿ ತಪ್ಪಿಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದರಿಂದ ಶಾಂತರಾದ ಹಿಂದೂ ಸಂಘಟನೆಯ ಮುಖಂಡರು ತಮ್ಮ ಧರಣಿಯನ್ನು ಹಿಂಪಡೆದರು.