ಆರಾಧನಾ ಮಹೋತ್ಸವದ ಮಧ್ಯಾರಾಧನೆ ಸಂಪನ್ನ
ತಾಳಿಕೋಟೆ 10: ತಾಲ್ಲೂಕಿನ ಬಿಳೇಭಾವಿ ಗ್ರಾಮದಲ್ಲಿ ಅಕ್ಷೋಭ್ಯ ತೀರ್ಥರ 215 ನೇ ಆರಾಧನಾ ಮಹೋತ್ಸವದಂಗವಾಗಿ ಶುಕ್ರವಾರ ಮಧ್ಯಾರಾಧನೆ ಕಾರ್ಯಕ್ರಮ ಜರುಗಿತು.ಮುಂಜಾನೆ 11-00 ಘಂಟೆಗೆ ಹುಣಸಿಹೊಳೆ ಕಣ್ವಮಠದ ಪೀಠಾಧಿಕಾರಿ ವಿದ್ಯಾರಣ್ಯ ವಿರಾಜ ತೀರ್ಥರು ಇವರ ದಿವ್ಯ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ನೆರವೇರಿದವು. ನೈರ್ಮಲ್ಯ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಅಷ್ಟೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದದ ನಂತರ ಶ್ರೀಗಳಿಂದ ಆಶೀರ್ವಚನ ನಡೆಯಿತು.
ಈ ಸಂದರ್ಭದಲ್ಲಿ ಅವರು, ಶಕ್ತಿಶಾಲಿಯಾದ ಗಾಯತ್ರಿ ಮಂತ್ರ ಜಪಿಸಿ, ಧರ್ಮದಿಂದ ನಡೆಯಿರಿ, ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಯುತ್ತದೆ ಎಂದರು.ಬಾಗಲಕೋಟೆ ನಗರದ ಸಂಗೀತಗಾರ ವಿದ್ವಾನ ಅನಂತ ಕುಲಕರ್ಣಿ ಇವರಿಂದ ದಾಸವಾಣಿ ಕಾರ್ಯಕ್ರಮ, ನಂತರ ತಾಳಿಕೋಟೆಯ ಗಾಯತ್ರಿ ಮಹಿಳಾ ಭಜನಾ ಮಂಡಳಿ ಹಾಗೂ ಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗುರುರಾಜ್ ಕುಲಕರ್ಣಿ, ಮಲ್ಹರಾವ್ ದೇಶಪಾಂಡೆ, ರವೀಂದ್ರ, ಅಶೋಕ್, ಚಂದ್ರಶೇಖರ್, ಮನೋಹರ್, ಭೀಮಸೇನಾಚಾರ್ಯ ಸುರಪುರ, ಗಂಗಾಧರ್ ಜೋಶಿ, ಜಗನ್ನಾಥಾಚಾರ್ಯ ಜೋಶಿ, ವೆಂಕಟೇಶಾಚಾರ್ಯ ಗ್ರಾಮಪುರೋಹಿತ, ಯಲಗೂರೇಶ ಆಚಾರ್ಯ, ರಾಜು ಪದಕಿ, ಶ್ರೀಹರಿ, ಭೀಮರಾವ್ ಹೆಗಡ್ಯಾಳ್, ಅಶೋಕ ಮೈಲೇಶ್ವರ, ಶಶಿಕಾಂತ ದೇಶಪಾಂಡೆ, ಶ್ರೀಧರಾಚಾರ್ಯ ಗ್ರಾಮಪುರೋಹಿತ, ಪ್ರತೀಕ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಮಾಣಿಕರಾವ್ ಚಪೆಟ್ಲಾ,ಇತರರು ಉಪಸ್ಥಿತರಿದ್ದರು.,