ಆಧ್ಯಾತ್ಮಿಕ ಚಿಂತನೆಯಿಂದ ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯ
ತಾಳಿಕೋಟಿ 05: ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಒತ್ತಡದ ಬದುಕಿನಿಂದಾಗಿ ಶಾಂತಿ ಹಾಗೂ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ. ಇದಕ್ಕೆ ಪ್ರಮುಖ ಕಾರಣ ಆಧ್ಯಾತ್ಮಿಕ ಮೌಲ್ಯಗಳ ಕೊರತೆ, ಜೀವನ ನೆಮ್ಮದಿ ದಾಯಕವಾಗಿರಲು ಆಧ್ಯಾತ್ಮಿಕ ಒಲವು ಅತ್ಯಗತ್ಯವಾಗಿದೆ ಎಂದು ನಾವದಗಿ ಬ್ರಹನ್ಮಠದ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಓಂ ಶಾಂತಿ ಆಶ್ರಮದಲ್ಲಿ ಹಮ್ಮಿಕೊಂಡ 108 ಗಂಟೆಗಳ ಕಾಲ ನಡೆಯುವ ಯೋಗ ಬಟ್ಟಿ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಜನರಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳಸಲು ಓಂ ಶಾಂತಿ ಆಶ್ರಮ ನಿರಂತರ ಪ್ರಯತ್ನಿಸುತ್ತಿದೆ, ಇವರ ಸೇವಾಕಾರ್ಯ ಶ್ಲಾಘನೀಯವಾಗಿದೆ ಎಂದರು.
ಬ್ರಹ್ಮಕುಮಾರ ರಾಜಯೋಗಿ ಪ್ರಕಾಶ ಹಾಗೂ ಲಿಂಗರಾಜ ಅವರು ಮಾತನಾಡಿ 108 ಗಂಟೆಗಳ ರಾಜಯೋಗ ಅಭ್ಯಾಸದಿಂದ ಮನುಷ್ಯ ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯವಿದೆ ಎಂದರು. ಕೆಸರಟ್ಟಿಯ ಬಾಲ ತಪಸ್ವಿ ಪ. ಪೂ. ಸೋಮಲಿಂಗೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ ವಿಶ್ವಶಾಂತಿಗೆ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಬಟ್ಟಿ ಯೋಗದಿಂದ ಮನುಷ್ಯನಲ್ಲಿ ಉತ್ತಮ ಸಂಸ್ಕಾರಗಳು ಬೆಳೆಯುತ್ತವೆ, ಇಲ್ಲಿ ನಡೆಯುವ ನಿರಂತರ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಮಾಡಿಕೊಳ್ಳಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜಯೋಗಿ ಪುನೀತ ಅಕ್ಕನವರು, ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್‌ಎಸ್ ಪಾಟೀಲ, ಬಿ. ಕೆ.ದೇವರಾಜ, ಎ. ಎಸ್. ಪಾಟೀಲ, ಬಸವರಾಜ ಗೊರಜಿ, ವಾಯ್. ವಾಯ್. ಹಿಪ್ಪರಗಿ, ಬಿ. ಕೆ.ಲಿಂಗದಳ್ಳಿ, ಅಮ್ಮನಗೌಡ, ಶರಣಪ್ಪ, ಎನ್‌ಎಂ ಕುಂಬಾರ, ನಾನಾಗೌಡ ಬಸರಡ್ಡಿ, ಆರ್ ಬಿ ದಾನಿ, ವಿನೋದಕುಮಾರ,ಬಿ.ಕೆ. ಪ್ರೇಮಾ, ಬಿ. ಕೆ. ಪೂರ್ಣಿಮಾ ಬಿ.ಕೆ.ಶೈಲಜಾ, ಬಸಮ್ಮಾ ಕೊಡೆಕಲ್ ಮತ್ತಿತರರು ಇದ್ದರು.