ತಾಳಿಕೋಟಿ

ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಅನಾವರಣ

ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಅನಾವರಣ




ತಾಳಿಕೋಟಿ 03 : ಘನಮಠೇಶ್ವರ ಶಿಕ್ಷಣ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಶ್ರೀಘನಮಠೇಶ್ವರ ಸಿಬಿಎಸ್‌ಇ, ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ಅಂತರ್ಶಾಲಾ ಖೋ-ಖೋ ಹಾಗೂ ಕಬಡ್ಡಿ ಪಂದ್ಯಾವಳಿ ಉತ್ಸಾಹದಿಂದ ನಡೆಯಿತು.  


ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್‌.ಎಲ್‌. ಲೊಕ್ಕಪ್ಪದ ಅವರು, ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ವಿವರಿಸಿದರು. ಕ್ರೀಡೆಯಿಂದ ಶಿಸ್ತು, ಆತ್ಮವಿಶ್ವಾಸ, ಸಮಯಪಾಲನೆ, ನಾಯಕತ್ವ ಗುಣ ಹಾಗೂ ತಂಡದ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದು ಹೇಳಿದರು.  


ಕಬಡ್ಡಿ ವಿಭಾಗದಲ್ಲಿ ಶ್ರೀಘನಮಠೇಶ್ವರ ಸಿಬಿಎಸ್‌ಇ ವಿಜಯಪುರ ಕ್ರಾಸಲ್ ಶಾಲೆಯ ಚಾಲುಕ್ಯ ಹೌಸ್ ಪ್ರಥಮ ಸ್ಥಾನ ಪಡೆದರೆ, ಕನಕ ಕನ್ನಡ ಮಾಧ್ಯಮ ಪ್ರೌಢಶಾಲೆಯ ಒಡೆಯರ್ ಹೌಸ್ ದ್ವಿತೀಯ ಸ್ಥಾನ ಪಡೆಯಿತು.  


ಖೋ-ಖೋ ವಿಭಾಗದಲ್ಲಿ ಶ್ರೀಘನಮಠೇಶ್ವರ ಸಿಬಿಎಸ್‌ಇ ವಿಜಯಪುರ ಕ್ರಾಸಲ್ ಶಾಲೆಯ ಹೊಯ್ಸಳ ಹೌಸ್ ಪ್ರಥಮ ಸ್ಥಾನ ಪಡೆದರೆ, ಕನಕ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿಜಯನಗರ ಹೌಸ್ ದ್ವಿತೀಯ ಸ್ಥಾನ ಗಳಿಸಿತು.  


ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು. ಶಾಲೆಗಳ ಮುಖ್ಯಸ್ಥರು, ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಿದರು.  


ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಂಜುಮನ್ ಶಾಲೆಯ ಎಸ್‌.ಎಸ್‌. ಸಜ್ಜನ, ಆಡಳಿತಾಧಿಕಾರಿಗಳಾದ ವಿವೇಕಾನಂದ ಸಜ್ಜನ, ಸಂಜನಾ ಸಜ್ಜನ, ಮುಖ್ಯಗುರು ಬಸವರಾಜ ಸಜ್ಜನ, ಶ್ರೀಘನಮಠೇಶ್ವರ ಸಿಬಿಎಸ್‌ಇ ವಿಜಯಪುರ ಕ್ರಾಸಲ್ ಶಾಲೆಯ ಪ್ರಾಂಶುಪಾಲ ಜಯಚಂದ್ರನ್, ಕನ್ನಡ ಮಾಧ್ಯಮ ಪ್ರಾಂಶುಪಾಲೆ ಆರ್‌.ಎಸ್‌. ದೇಸಾಯಿ, ಬೆಸ್ಟ್‌ ಪಿಯು ಕಾಲೇಜಿನ ಪ್ರಾಂಶುಪಾಲ ಎಂ. ಮಾರೆಣ್ಣ, ದೈಹಿಕ ಶಿಕ್ಷಣ ಶಿಕ್ಷಕ ಶಿವಾನಂದ ಸುನದೊಳ್ಳಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ