ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯ
ಗೋಕಾಕ 03: ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದು ಗ್ರಾ,ಪಂ ಅಭಿವೃದ್ದಿ ಅಧಿಕಾರಿ ಉಮೇಶ ಮನಗೂಳಿ ಹೇಳಿದರು.ಅವರು ತಾಲೂಕಿನ ಬಡಿಗವಾಡ ಗ್ರಾಮದಲ್ಲಿ ಗ್ರಾಮ ಪಂಚಾಯತ ಸಭಾಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹಾಗೂ ಮಾಜಿ ಪ್ರಧಾನಿ ಲಾಲಬಹದ್ದೂರ್ ಶಾಸ್ತೀಜಿ ಜಯಂತಿ ಆಚರಣೆ ಮಾಡಿ ನಂತರ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರದ ನಿರ್ದೇಶನದ ಮೇರೆಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಗಳನ್ನು ಪ್ರತಿಜ್ಞಾನವಿಧಿ ಬೋಧಿಸಲಾಯಿತು. ಹಾಗೂ ವಿಬಿಜಿ ಆರ್ ಎ ಎಂ ಜಿ ಯೋಜನೆಯಡಿ ಐಇಸಿ ಚಟುವಟಿಕೆಯಡಿ ವಿಶೇಷ ಗ್ರಾಮಸಭೆ, ಬಾಲ್ಯ ವಿವಾಹ ತಡೆಗಟ್ಟುವಿಕೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಸಹಕಾರ ನೀಡಬೇಕೆಂದರು. ಸ್ವಚ್ಛತಾ ಆಂದೋಲನದ ಗ್ರಾ.ಪಂ ಸಿಬ್ಬಂದಿಯವರು ಸರಿಯಾಗಿ ಕಾರ್ಯನಿರ್ವಣೆಯ ಮೂಲಕ ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ಸಹಕಾರ ನೀಡಿ ಸ್ವಚ್ಛ ಗ್ರಾಮದ ಪರಿಕಲ್ಪನೆ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯವಾಗಬೇಕು. ಗ್ರಾಮೀಣ ಅಭಿವೃದ್ಧಿಗೆ ಸಂಬಧಿಸಿದ ಕಾರ್ಯಗಳ ಮೂಲಕ ಸಂಕಲ್ಪ ಮಾಡಲಾಗುವುದು. ಮಹಾತ್ಮ ಗಾಂಧಿ ರಿಫಾರ್ಮ್ ಉತ್ಸವದ ಬಗ್ಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಚಂದ್ರು ಕರಗಾಂವಿ ಸೇರಿದಂತೆ ಗ್ರಾಮಸ್ಥರು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಉಪಸ್ಥಿರಿದ್ದರು