ದುಪಧಾಳ ಜಲಾಶಯದ ನೀರೀಕ್ಷಣಾ ಮಂದಿರ ಅಭಿವೃದ್ಧಿಗೆ ಮನವಿ
ಗೋಕಾಕ 01: ತಾಲೂಕಿನ ಐತಿಹಾಸಿಕ ದುಪಧಾಳ ಜಲಾಶಯದ ಪಕ್ಕದಲ್ಲಿರುವ ನೀರೀಕ್ಷಣಾ ಮಂದಿರದ ಕಾರಂಜಿ ಹಾಗೂ ಉದ್ಯಾನವನವನ್ನು ಪುನರ್ನಿರ್ಮಿಸಿ ಸುಂದರವಾಗಿ ಅಭಿವೃದ್ಧಿಪಡಿಸುವಂತೆ ಕನ್ನಡ ಸೇನೆ ಕರ್ನಾಟಕ ಸಂಘಟನೆ ವತಿಯಿಂದ ಲೋಕೋಪಯೋಗಿ ಸಚಿವ ಸತೀಶ ಲ. ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಚಿವರ ಆಪ್ತ ಸಹಾಯಕ ಶಿವನಗೌಡ ಪಾಟೀಲ ಅವರ ಮೂಲಕ ಹಿಲ್ ಗಾರ್ಡನ್ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ಐತಿಹಾಸಿಕ ಪ್ರವಾಸಿ ತಾಣದ ಸೌಂದರ್ಯ ಹೆಚ್ಚಿಸುವ ಹಾಗೂ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರಂಜಿ ಮತ್ತು ಉದ್ಯಾನವನವನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕನ್ನಡ ಸೇನೆ ತಾಲೂಕಾಧ್ಯಕ್ಷ ಅಪ್ಪಾಸಾಬ ಮುಲ್ಲಾ, ಉಪಾಧ್ಯಕ್ಷ ಶ್ರೀಕಾಂತ ಮಹಾಜನ, ಗೌರವಾಧ್ಯಕ್ಷ ಸುರೇಶ ಪಾಟೀಲ, ಸಂಜು ಸಂತವ್ವಗೋಳ, ಜಬೀಲಾ ಶೇಖ, ಅಕ್ಬರ ನೇರ್ಲಿ, ಕುಶಣ್ಣಾ ಬಸರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.