ತಾರಾಪುರ ಕ್ರಾಸ್ನಲ್ಲಿ ಬಸ್ಗಾಗಿ ಗ್ರಾಮಸ್ಥರ ಗಲಾಟೆ
ಆಲಮೇಲ 25: ತಾಲ್ಲೂಕಿನ ತಾವರಖೇಡ ಕಡಣಿ ಗ್ರಾಮಕ್ಕೆ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ತೆರಳುವ ಮುಗುಳಖೋಡ ಬಸ್ಗೆ ತಾರಾಪುರ ಗ್ರಾಮದ ನಿವಾಸಿಗಳು ಯಾವುದೇ ಮುನ್ಸೂಚನೆ ನೀಡದೆ ಅಡ್ಡಿಪಡಿಸಿದ ಘಟನೆ ತಾರಾಪುರ ಕ್ರಾಸ್ನಲ್ಲಿ ನಡೆದಿದೆ.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಕಡಣಿ ಗ್ರಾಮ ಪಂಚಾಯಿತಿ ಉದ್ಘಾಟನಾ ಸಮಾರಂಭದ ವೇಳೆ, ವಿಜಯಪುರಕ್ಕೆ ತೆರಳುವ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ವ್ಯವಸ್ಥೆ ಮಾಡಿಸಿರುವುದಾಗಿ ಭರವಸೆ ನೀಡಿದ್ದರು. ಸಚಿವರ ಭರವಸೆಯಿಂದ ಕದಣಿ ಗ್ರಾಮದ ಸ್ವಾಮಿ ವಿವೇಕಾನಂದ ಗೆಳೆಯರ ಬಳಗದ ಬಹುದಿನಗಳ ಕನಸು ನನಸಾದಂತಾಗಿತ್ತು.
ಅದರಂತೆ ಕಡಣಿ ಹಾಗೂ ತಾವರಖೇಡ ಗ್ರಾಮದ ಪ್ರಯಾಣಿಕರು ತಾರಾಪುರ ಕ್ರಾಸ್ನಲ್ಲಿ ಬಸ್ ಹತ್ತಿ ತಮ್ಮ ಪ್ರಯಾಣ ಮುಂದುವರಿಸಲು ಬಂದಾಗ, ತಾರಾಪುರ ಗ್ರಾಮಸ್ಥರು ಬಸ್ ಸಂಚಾರಕ್ಕೆ ಅಡ್ಡಿಪಡಿಸಿದರು.
ಈ ಸಂದರ್ಭದಲ್ಲಿ ಆಲಮೇಲ ಪೊಲೀಸ್ ಠಾಣೆಯ ಸಿಬ್ಬಂದಿ ಸಿದ್ದರಾಮ ಪಾಟೀಲ ಅವರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಯಾವುದೇ ಕ್ರಮ ಕೈಗೊಳ್ಳುವುದಾದರೂ ಕಾನೂನುಬದ್ಧವಾಗಿ ಕೈಗೊಳ್ಳಬೇಕು. ಅನುಮತಿ ಅಥವಾ ಆದೇಶವಿಲ್ಲದೆ ಬಸ್ ಸಂಚಾರಕ್ಕೆ ಅಡ್ಡಿಪಡಿಸುವುದು ಕಾನೂನುಬಾಹಿರವಾಗಿದ್ದು, ಇಂತಹ ಕೃತ್ಯ ಎಸಗಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಗ್ರಾಮಸ್ಥರು ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕಡಣಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ತಾವರಗೇರಿ, .ಭೋಗಣ್ಣ ಲಾಳಸಂಗಿ.ಸಿದ್ರಾಮ ತಳವಾರ. ಭೋಗು ತೆಲ್ಲೋರ. ಶರಣಪ್ಪ ನಾಟಿಕಾರ್. ಅನೇಕ ಉಪಸ್ಥಿರಿದ್ದರು.