ಬಳ್ಳಾರಿ

ಎಪಿಎಂಸಿ ಮಾರುಕಟ್ಟೆಗೆ ಶಾಸಕ ನಾರಾ ಭರತ್ ರೆಡ್ಡಿ ಭೇಟಿ; ಬೀದಿ ವ್ಯಾಪಾರಿಗಳೊಂದಿಗೆ ಚರ್ಚೆ ; ಸಮಸ್ಯೆಗಳ ಪರಿಹಾರಕ್ಕೆ ಭರವಸೆ

ಎಪಿಎಂಸಿ ಮಾರುಕಟ್ಟೆಗೆ ಶಾಸಕ ನಾರಾ ಭರತ್ ರೆಡ್ಡಿ ಭೇಟಿ; ಬೀದಿ ವ್ಯಾಪಾರಿಗಳೊಂದಿಗೆ  ಚರ್ಚೆ  ;  ಸಮಸ್ಯೆಗಳ ಪರಿಹಾರಕ್ಕೆ ಭರವಸೆ
MLA Nara Bharath Reddy visits APMC market; holds discussions with street vendors; assures resolutio

                 ಬಳ್ಳಾರಿ. ನ. 25 : ನಗರದ ಎಪಿಎಂಸಿ ಮಾರುಕಟ್ಟೆಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿನ್ನೆ  ಬೆಳಂಬೆಳಿಗ್ಗೆಯೇ ಭೇಟಿ ನೀಡಿ, ಅಲ್ಲಿನ ಬೀದಿ ವ್ಯಾಪಾರಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಪ್ರತಿದಿನ  ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಳ್ಳುವ ಬೀದಿ ವ್ಯಾಪಾರಿಗಳ ನಡುವೆ ತೆರಳಿದ ಶಾಸಕರು, ಯಾವುದೇ ಹಿಂಜರಿಕೆಯಿಲ್ಲದೆ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ, ವ್ಯಾಪಾರದ ಸ್ಥಿತಿಗತಿ, ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಜೀವನ ನಿರ್ವಹಣೆಯ ಸವಾಲುಗಳ ಕುರಿತು ವಿಚಾರಿಸಿದರು.

                 ವ್ಯಾಪಾರಿಗಳ ತಾಳ್ಮೆಯಿಂದ ಆಲಿಸಿ, ಅವರ ಅಹವಾಲುಗಳಿಗೆ ಆಲಿಸಿದರು.ಸಾರ್ವಜನಿಕರ ಸಮಸ್ಯೆಗಳನ್ನು ಕಚೇರಿಗಳಲ್ಲಿ ಕುಳಿತು ಕೇಳುವುದಕ್ಕಿಂತ, ಜನರ ಬಳಿಗೆ ತೆರಳಿ ಅವರ ನಡುವೆಯೇ ನಿಂತು ಸಮಸ್ಯೆಗಳನ್ನು ಅರಿಯುವ ಉದ್ದೇಶದಿಂದ ಶಾಸಕ ನಾರಾ ಭರತ್ ರೆಡ್ಡಿ ಸ್ವತಃ ತಾವೇ ಖುದ್ದಾಗಿ  ಮಾರುಕಟ್ಟೆಗೆ ಭೇಟಿ ನೀಡಿರುವುದು ಗಮನ ಸೆಳೆಯಿತು. 

                ಈ ವೇಳೆ ವ್ಯಾಪಾರಿಗಳು ಮಾರುಕಟ್ಟೆಯಲ್ಲಿನ ಮೂಲಭೂತ ಸೌಲಭ್ಯ ಸ್ವಚ್ಛತೆ ಕುಡಿಯುವ ನೀರು ಶೌಚಾಲಯದ ಸ್ವಚ್ಛತೆ  ಇಲ್ಲಿ ನಿಗದಿಪಡಿಸಿರುವ ಬಾಡಿಗೆ ಹೆಚ್ಚಳ ದಲ್ಲಾಳಿಗಳ ಕಿರಿಕಿರಿ ಸೇರಿದಂತೆ ಅನೇಕ  ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ,  ಶೀಘ್ರವಾಗಿ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

               ಶಾಸಕರು ತಾವೇ ಖುದ್ದಾಗಿ  ಬಂದು ನೇರವಾಗಿ ಮಾತನಾಡಿ,  ವಿಚಾರಿಸಿದ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಜನರ ಬಳಿಗೇ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವ ಇಂತಹ ಜನಸಂಪರ್ಕ ಭೇಟಿಯನ್ನು ವರ್ತಕರು ಹಾಗೂ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. 


ಸುದ್ದಿ ಓದಿ