ಭಾರತ ಸಂವಿಧಾನವು ಭಾರತೀಯ ಪ್ರಜಾಪ್ರಭುತ್ವ ಭದ್ರ ಬುನಾದಿಯಾಗಿದೆ : ರಮೇಶ ಅಳಗುಂಡಿ
ಲೋಕದರ್ಶನ ವರದಿ
ಬೆಟಗೇರಿ 26: ನಮ್ಮ ಭಾರತ ಸಂವಿಧಾನ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿದಿದೆ. ಭಾರತ ಸಂವಿಧಾನ ದಿನಾಚರಣೆ ಮಹತ್ವದ ಕುರಿತು ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ನ.26ರಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನವಾಗಿದೆ. ಭಾರತ ಸಂವಿಧಾನವು ಭಾರತೀಯ ಪ್ರಜಾಪ್ರಭುತ್ವ ಭದ್ರ ಬುನಾದಿಯಾಗಿದೆ. ಎಂದರು.
ಶಾಲೆಯ ಸಹಶಿಕ್ಷಕ ವೈ.ಎಮ್.ವಗ್ಗರ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸಂವಿಧಾನ ರಚನೆ ಮತ್ತು ಡಾ.ಅಂಬೇಡ್ಕರ ಅವರ ಕೊಡುಗೆ, ಪ್ರತಿಯೊಬ್ಬ ನಾಗರಿಕನು ತಿಳಿದುಕೊಳ್ಳಬೇಕಾದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸ್ಥಳೀಯ ಪ್ರೌಢ ಶಾಲೆಯ ಮಕ್ಕಳಿಗೆ ಭಾರತೀಯ ಸಂವಿಧಾನದ ಪೂರ್ವ ಪೀಠಿಕೆಯ ಸಾಮೂಹಿಕವಾಗಿ ವಾಚಿಸುವುದರ ಮೂಲಕ ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿರುವ ಬಗ್ಗೆ ಪ್ರತಿಜ್ಞೆಯನ್ನು ಮಾಡಿಸಲಾಯಿತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜಾ ಸಮರೆ್ನ ನೆರವೇರಿಸಿದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಶ್ರೇಷ್ಠ್ ರಾ್ಯಂಕ್ ಗಳಿಸಿ ಶಾಲೆಗೆ ಕೀರ್ತಿ: ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಹಂತದ ಪ್ರತಿಭಾ ಅನ್ವೇಷಣಾ ಪರೀಕ್ಷೆಯಲ್ಲಿ ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ 14 ಜನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶ್ರೇಷ್ಠ ರಾ್ಯಂಕ್ಗಳನ್ನು ಗಳಿಸಿ ಜಿಲ್ಲೆಗೆ ಮತ್ತು ಬೆಟಗೇರಿ ಗ್ರಾಮಕ್ಕೆ ಹಾಗೂ ಪ್ರೌಢ ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಶಿಕ್ಷಕರು, ಅತಿಥಿಶಿಕ್ಷಕರು, ಸಿಬ್ಬಂದಿ, ಎಸ್‌ಡಿಎಮ್‌ಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ, ಸದಸ್ಯರು, ಶಿಕ್ಷಣಪ್ರೇಮಿಗಳು, ಸ್ಥಳೀಯರು ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ 14 ಜನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದಾನಂದ ತೆರಣೆ, ಶುಭಾ.ಬಿ., ಪ್ರಕಾಶ ಕುರಬೇಟ, ರಾಕೇಶ ನಡೋಣಿ, ಗಣಪತಿ ಭಾಗೋಜಿ, ಭಾಗ್ಯಶ್ರೀ ನಾಯಕ, ಮಲ್ಹಾರಿ ಪೋಳ, ಸಿರಾಜಅಹ್ಮದ ಜಿಡ್ಡಿಮನಿ, ನಾಗರಾಜ ಅರಳಿಮಟ್ಟಿ, ಮಂಜುನಾಥ ಸವತಿಕಾಯಿ, ಬಸವರಾಜ ಗೋಸಲೆ, ಸಿದ್ರಾಮೇಶ್ವರ ಕಮತ, ಭಿಮಶಿ ನರಸಪ್ಪಗೋಳ, ದೀಪಾ ದಾಸಂಗಳಿ, ಸ್ವಾತಿ ಬಡಿಗೇರ ಸೇರಿದಂತೆ ಶಾಲೆಯ ಶಿಕ್ಷಕರು, ಅತಿಥಿಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.