ಬೆಳಗಾವಿ

ಯುಗಪುರುಷ ಬಸಣ್ಣನವರ ಕುರಿತಾದ ಹೇಳಿಕೆಗೆ ತೀವ್ರ ಖಂಡನೆ

ಯುಗಪುರುಷ ಬಸಣ್ಣನವರ ಕುರಿತಾದ ಹೇಳಿಕೆಗೆ ತೀವ್ರ ಖಂಡನೆ

ಲೋಕದರ್ಶನ ವರದಿ 

             ಹಾರೂಗೇರಿ 26: ಅನಿವಾಸಿ ಭಾರತೀಯ ರವಿ ಹಂಜ್ ಎಂಬ ವ್ಯಕ್ತಿಯು ಯುಗಪುರುಷ ಬಸವಣ್ಣನವರ ಕುರಿತಾಗಿ ಇಲ್ಲಸಲ್ಲದ ಮಾತುಗಳನ್ನಾಡಿರುವುದು ಕಳವಳಕಾರಿ ಸಂಗತಿಯಾಗಿದೆ. ಸಕಲ ಜೀವರಾಶಿಗೂ ಒಳಿತನ್ನೇ ಬಯಸಿದ ಬಸವಣ್ಣನವರನ್ನು ಕೊಲೆಗಾರ ಎಂದು ಕರೆದಿರುವುದು ಅಕ್ಷಮ್ಯವಾಗಿದೆ. ದೇವರಾಗಬಹುದು ಬಸವನಾಗಲೂ ಬಾರದು ಎಂಬುದು ಅನೇಕ ಶರಣರ ಅಭಿಪ್ರಾಯವಾಗಿದೆ.                           

                ಇಂತಹ ಮಹಾಮಾನವತಾವಾದಿ ಬಸವಣ್ಣನವರ ಕುರಿತಾಗಿ ಬಹಳ ಹಗುರವಾಗಿ ಮಾತನಾಡಿದ ರವಿ ಹಂಜ್‌ರಂತಹ ಲೇಖಕರನ್ನು ಪ್ರಜ್ಞಾವಂತ ಸಮಾಜ ಯಾವತ್ತೂ ಕ್ಷಮಿಸುವುದಿಲ್ಲ. ಸರಕಾರ ಇಂತಹ ಕುತ್ಸಿತ ಮನಸ್ಸಿನ ವ್ಯಕ್ತಿಗೆ ಘೋರ ಶಿಕ್ಷೆಯನ್ನು ನೀಡಬೇಕೆಂದು ಅಥಣಿ ತಾಲೂಕಿನ ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಆಗ್ರಹಿಸಿದ್ದಾರೆ. 


ಸುದ್ದಿ ಓದಿ