ಬೆಳಗಾವಿ ಪಾಕಿಸ್ತಾನದಲ್ಲಿ ಇದೇನಾ? ನಾವು ವಾಸಿಸುವ ಭಾಷೆ ಒಪ್ಪಿಕೊಳ್ಳಬೇಕು: ಝಾಪಾಗಳ ನಿದ್ದೆಗೆಡಿಸಿದ ಮರಾಠಿ ಸಾಹಿತ್ಯ ಸಮ್ಮೇಳನ ಅಧ್ಯಕರ ಹೇಳಿಕೆ
ಬೆಳಗಾವಿ : ನಾವು ಯಾವ ಪ್ರದೇಶದಲ್ಲಿ ವಾಸಿಸುತ್ತೇವೆ ಅಲ್ಲಿನ ಸಂಸ್ಕೃತಿ ಸ್ವೀಕರಿಸಿ, ಅಲ್ಲಿನ ಭಾಷೆಯನ್ನು ಒಪ್ಪಿಕೊಳ್ಳಬೇಕು. ಬೆಳಗಾವಿ ಮಹಾರಾಷ್ಟ್ರ ಸೇರಬೇಕು ಎನ್ನುತ್ತಾರೆ ಆದರೆ ವಿದೇಶಗಳಲ್ಲಿ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಮರಾಠಿ ಭಾಷಿಕರು ನೆಲೆಸಿದ್ದಾರೆ, ಹಾಗಿದ್ದರೆ ಆ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಸಾದ್ಯನಾ? ಬೆಳಗಾವಿ ಪಾಕಿಸ್ತಾನದಲ್ಲಿ ಇದೇನಾ ಅದು ಭಾರತದದಲ್ಲಿ ಇದೆ ಎಂದು ಹೇಳುವ ಮೂಲಕ ಝಾಪಾಗಳ ನಿದ್ದೆಗೇಡು ಮಾಡಿರುವ ನೂತನ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಶರಣಕುಮಾರ ಲಿಂಬಾಳೆ ಅವರ ನಡೆ ಕನ್ನಡಿಗರು ಭೇಷ ಎನ್ನುವ ಹಂತ ತಲುಪಿದೆ. ಇದರಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಬೇಡುವ ಝಾಪಾಗಳ ಗಾಯದ ಮೇಲೆ ಉಪ್ಪು ಸುರಿದಿರುವ ಲಿಂಬಾಳೆ ಅವರ ರಾಜೀನಾಮೆಗೆ ಎಮ್ ಇಎಸ್ ಪುಂಡರು ದುಂಬಾಲು ಬಿದ್ದಿರುವ ಸ್ಪೋಟ್ ಕ ಸುದ್ದಿ ಹೊರಬಿದ್ದಿದೆ.
ಹೌದು ಇಂತಹದೊಂದು ಹೇಳಿಕೆಯ ಸುದ್ದಿ ಈಗ ಮಹಾರಾಷ್ಟ್ರ ತುಂಬೆಲ್ಲಾ ಸಂಚಲನ ಮೂಡಿಸಿದ್ದು, ಮಹಾರಾಷ್ಟ್ರ ಮುಖಂಡ ರಾಜ್ ಠಾಕ್ರೆ ಅವರ ಬಳಿಕ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳದ ನೂತನ ಅಧ್ಯಕ್ಷ ಶರಣಕುಮಾರ ಲಿಂಬಾಳೆ ಅವರ ಈ ನಡೆ ಈಗ ಝಾಪಾಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಶರಣಕುಮಾರ ಅವರು ಮರಾಠಿಗರ ಕ್ಷಮಾಪಣೆ ಕೇಳಬೇಕು ಅಲ್ಲದೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ರಾಜೀನಾಮೆ ನೀಡದಿದ್ದಲ್ಲಿ ಮಹಾರಾಷ್ಟ್ರ ಸರಕಾರ ಹಾಗೂ ಸಾಹಿತ್ಯ ಪರಿಷತ್ತು ಇವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿರುವ ಝಾಪಾಗಳು ಯಾವ ದಾರಿ ತೋಚದೆ ಕವಲು ದಾರಿಯಲ್ಲಿ ಸಾಗಿವೆ.
ಮಹಾರಾಷ್ಟ್ರದ ಪುಣೆಯಲ್ಲಿ ಸದ್ಯ ನಡೆಯಲಿರುವ 100ನೇ (ಶತಮಾನೋತ್ಸವ) ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶರಣಕುಮಾರ ಲಿಂಬಾಳೆ ಅವರ ಈ ಹೇಳಿಕೆ ಇದೀಗ ಗಡಿ ಭಾಗದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬೆಳಗಾವಿ ಗಡಿಪ್ರಶ್ನೆ ಹಾಗೂ ಮರಾಠಿ ಭಾಷೆಯ ಅಸ್ಮಿತೆಗೆ ಧಕ್ಕೆ ತರುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ ಎಂಬ ಆರೋಪವನ್ನು ಮಾಡಿರುವ ಝಾಪಾಗಳು ಲಿಂಬಾಳೆ ಹೇಳಿಕೆಗೆ ಬೆಳಗಾವಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಗಡಿ ವಿಷಯ ಸದ್ಯ ನ್ಯಾಯಪೀಠದ ಮುಂದೆ ಇದ್ದು, ನ್ಯಾಯದೇವತೆ ಯಾವಗಾ ಕಣ್ಣು ತೆರೆಯುತ್ತಾಳೆ ನೋಡೊನ ಎಂದಿರುವ
ಮುಂದಿನ ದಿನಗಳಲ್ಲಿ ಕೆಲಸಕ್ಕಾಗಿ ಒಬ್ಬ ವ್ಯಕ್ತಿ ಬೇರೆ ಬೇರೆ ರಾಜ್ಯಗಳಿಗೆ, ಸ್ಥಳಕ್ಕೆ ಹೋಗಬೇಕಾಗುತ್ತದೆ. ಯಾವದೇ ಭಾಷೆ ಹಾಗೂ ಸಂಸ್ಕೃತಿ ಒಂದೇ ಪ್ರಾಂತದಲ್ಲಿ ಹಿಡಿದು ಇಡಲು ಸಾಧ್ಯವಿಲ್ಲ. ಭಾಷೆ ಹಾಗೂ ಕಲೆಗೆ ವೈಶುದ್ದ ಪರಿಸ್ಥಿತಿ ಇದೆ ಎಂದು ಪ್ರತಿಪಾದಿಸಿದರು.
ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳದ ನೂತನ ಅಧ್ಯಕ್ಷ ರಾದ ಬಳಿಕ ಮಾಧ್ಯಮಗಳಿಗೆ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಲಿಂಬಾಳೆ ಅವರು, ನಾನು ಕೂಡಾ ಒಬ್ಬ ಕನ್ನಡಿಗ, ನನ್ನ ತಂದೆ ತಾಯಿ ಕನ್ನಡದವರೆ ಆದರೆ ನಾನು ಇವಾಗ ಮಹಾರಾಷ್ಟ್ರ ದಲ್ಲಿ ನೆಲಸಿರುವದರಿಂದ ನಾನು ಕನ್ನಡ ಮರೆತು ಮರಾಠಿ ಭಾಷೆಯನ್ನು ಪ್ರೀತಿಸುತ್ತೇನೆ. ನನಗೆ ಈಗ ಕನ್ನಡ ಮಾತನಾಡಲು ಬರೊಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಯಾವ ಪ್ರದೇಶದಲ್ಲಿ ವಾಸಿಸುತ್ತೇವೆಯೋ, ಅಲ್ಲಿನ ಸಂಸ್ಕೃತಿಯನ್ನು ಸ್ವೀಕರಿಸಬೇಕು ಮತ್ತು ಅಲ್ಲಿನ ಭಾಷೆಯನ್ನು ಒಪ್ಪಿಕೊಳ್ಳಬೇಕು ಎಂಬ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಎಮ್ ಇಎಸ್ ಪುಂಡರು, ಈ ನಿಲುವು ಬೆಳಗಾವಿಯ ಮರಾಠಿ ಭಾಷಿಕರ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.
ಕೇವಲ ಮರಾಠಿ ಗರು ಬೆಳಗಾವಿಯಲ್ಲಿ ಅಷ್ಟೇ ಅಲ್ಲ ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ಮರಾಠಿ ಭಾಷಿಕರು ನೆಲೆಸಿದ್ದಾರೆ. ಹಾಗಾದರೆ ಅವರೆಲ್ಲರೂ ವಾಸಿಸುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿರುವ ಲಿಂಬಾಳೆ, ಭಾಷೆ ಮತ್ತು ಸಂಸ್ಕೃತಿಯ ವಿಚಾರದಲ್ಲಿ ಇಂತಹ ಹೇಳಿಕೆಗಳು ಗೊಂದಲ ಹಾಗೂ ಅಸಮಾಧಾನಕ್ಕೆ ಕಾರಣವಾಗುತ್ತವೆ ಎಂದು ಗಡಿಭಾಗದ ಮರಾಠಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಸಂಯುಕ್ತ ಮಹಾರಾಷ್ಟ್ರದ ಆಶಯಕ್ಕೆ ವಿರುದ್ಧವಾದ ನಿಲುವು ಹೊಂದಿದ್ದಾರೆ ಎನ್ನಲಾದ ವ್ಯಕ್ತಿಯ ಆಯ್ಕೆಯಾಗಿರುವುದು ದುರದೃಷ್ಟಕರ ಎಂದು ಎಂಇಎಸ್ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶರಣಕುಮಾರ ಲಿಂಬಾಳೆ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಬೇಕು ಹಾಗೂ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ವಿವಾದದ ಕುರಿತು ಮಹಾರಾಷ್ಟ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸಾಹಿತ್ಯ ಪರಿಷತ್ತು ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಅಲ್ಲಿಯ ವರೆಗೆ ತಮ್ಮ ಹೋರಾಟ ನಿಲ್ಲದು ಎಂದು ಝಾಪಾ ಮುಖಂಡರು ಒತ್ತಾಯಿಸುತ್ತಿದ್ದಾರೆ.
ಅಮೇರಿಕಾ ಸೇರಿದಂತೆ ದೇಶದ ತಮಿಳನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮರಾಠಿಗರು ನೆಲೆಸಿದ್ದಾರೆ, ಹಾಗಿದ್ದರೆ ಅವುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಆಗುತ್ತಾ ಎಂದು ಪ್ರಶ್ನಿಸಿರುವ ಲಿಂಬಾಳೆ ಅವರು ಭಾರತವನ್ನು ಬಲಿಷ್ಠ ರಾಷ್ಟ್ರ ಮಾಡಲು ಇವೆಲ್ಲವನ್ನು ಬದಿಗೆ ಇಡುವಂತೆ ಝಾಪಾಗಳಿಗೆ ಬುದ್ದಿಮಾತು ಹೇಳಿದ್ದಾರೆ.
ಒಟ್ಟಿನಲ್ಲಿ, ಶರಣಕುಮಾರ ಲಿಂಬಾಳೆ ಅವರ ಹೇಳಿಕೆ ಗಡಿಭಾಗದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದು, ಈ ವಿವಾದದ ಕುರಿತು ಅವರು ನೀಡಲಿರುವ ಮುಂದಿನ ಸ್ಪಷ್ಟನೆ ಹಾಗೂ ಎಂಇಎಸ್‌ನ ಪ್ರತಿಕ್ರಿಯೆ ಕುತೂಹಲ ಮೂಡಿಸಿದೆ.