ಬಸ್ತವಾಡ: ದತ್ತುಪಂತ ಮಹಾರಾಜರ ಜಾತ್ರಾ ಮಹೋತ್ಸವ; ರಾಜ್ಯಮಟ್ಟದ ಮುಕ್ತ ಭಜನಾ ಸ್ಪರ್ಧೆ
ಪಾಲಬಾವಿ 25 : ರಾಯಬಾಗ ತಾಲೂಕು ಬಸ್ತವಾಡ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ (ನ.26) ರಂದು ಗುರುವಾರ ಪವಾಡ ಪುರುಷ ದತ್ತುಪಂತ ಮಹಾರಾಜರ ಜಾತ್ರಾ ಮಹೋತ್ಸವ ಹಾಗೂ ಮಧ್ಯಾಹ್ನ 3ಗಂಟೆಗೆ ದಿ.ರಾಮಚಂದ್ರ ನವರತ್ನ (ಬ್ಯಾಕೂಡ ಮಾಸ್ಟರ) ಭಜನಾ ವೇದಿಕೆಯಲ್ಲಿ ರಾಜ್ಯಮಟ್ಟದ ಮುಕ್ತ ಭಜನಾ ಸ್ಪರ್ಧೆಗಳು ಜರುಗಲಿವೆ. ಕೋಳಿಗುಡ್ಡದ ಸುಜ್ಞಾನ ಕುಟಿರದ ಪೀಠಾಧಿಪತಿ ಸ್ವರೂಪಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು.
ಗುರುಸ್ವಾಮಿ ಕಾಡದೇವರ ಮಠ ಹಾಗೂ ಕಾಡಯ್ಯ ಸ್ವಾಮೀಜಿ ಹಿರೇಮಠ ಸಾನಿಧ್ಯ ವಹಿಸುವರು. ಹಿರಿಯ ಭಜನಾ ಕಲಾವಿದ ಬೈರಗೌಡ ಪಾಟೀಲ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮಹಾದೇವ ಕಾಂಬಳೆ, ಅಮರ ನವರತ್ನ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಭಜನಾ ಕಲಾವಿದ ಗಂಗಾರಾಮ ಜುಂಜರವಾಡ ಅಧ್ಯಕ್ಷತೆವಹಿಸುವರು.
ಬಹುಮಾನಗಳು:- ಪ್ರಥಮ 20,000/- ದ್ವಿತೀಯ 15,000/-, ತೃತೀಯ 10,000/-, ಚತುರ್ಥ 5,000/- ಬಹುಮಾನಗಳಿದ್ದು ಸ್ಪರ್ಧಾಳುಗಳಿಗೆ ವಿಶೇಷ ಸೂಚನೆ ನಿಜಗುಣ ಶಿವಯೋಗಿಗಳ, ಸರೂ್ಭಷಣ ಶಿವಯೋಗಿಗಳ ಹಾಗೂ ಮಹಾಲಿಂಗರಂಗರ ಸೇರಿ ಒಂದು ಪದ, ದಾಸ ಸಾಹಿತ್ಯದ ಒಂದು ಪದ ಹೀಗೆ ಒಟ್ಟು ಎರಡು ಪದಗಳನ್ನು ಹಾಡಬೇಕು. ಒಂದು ತಂಡದಲ್ಲಿ ಆರು ಜನ ಕಲಾವಿದರು ಇರಬೇಕು ಮತ್ತು ಒಂದು ತಂಡದಲ್ಲಿ ಭಾಗವಹಿಸಿದ ಸ್ಪರ್ಧಾಳು ಮತ್ತೊಂದು ತಂಡದಲ್ಲಿ ಭಾಗವಹಿಸುವಂತಿಲ್ಲ,
ಎರಡು ಪದ್ಯಗಳನ್ನು 14 ನಿಮಿಷದಲ್ಲಿ ಕಲಾವಿದರು ಹಾಡಿ ಪೂರ್ಣಗೊಳಿಸಬೇಕು. ಭಾಗವಹಿಸಿದ ಎಲ್ಲ ತಂಡಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಈ ಸ್ಪರ್ಧೆಯಲ್ಲಿ ದಮ್ಮಡಿ, ತಾಳು, ಹಾರ್ಮೋನಿಯಂ ನುಡಿಸಿದ ಕಲಾವಿದರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ಗಂಗಾಧರ ಸರಿಕರ 9901569566, ರಾಜು ಪಾಟೀಲ 8123321256, ಮಹೇಶ ಕಾಂಬಳೆ 7019737093, 7483961101 ಗುರುನಾಥ ಕಾಂಬಳೆ ಇವರನ್ನು ಸಂಪರ್ಕಿಸಲು ಕೋರಲಾಗಿದೆ.