ಪ್ರಾಂಶುಪಾಲರಾಗಿ ಪ್ರೊ. ಟಿ. ವೀರಭದ್ರ್ಪ ಅಧಿಕಾರ ಸ್ವೀಕಾರ
ಬಳ್ಳಾರಿ ನ.25 : ನಗರದ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪ್ರೊ. ಟಿ. ವೀರಭದ್ರ್ಪ ತಂಬ್ರಳ್ಳಿ ಅವರು ಇಂದು ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮುನ್ಸಿಪಲ್ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ತಿಮ್ಮಪ್ಪ, ಪತ್ರಕರ್ತ ತಿಪ್ಪೇಸ್ವಾಮಿ ಹಾಗೂ ಗುತ್ತಿ ಗೋವಿಂದರೆಡ್ಡಿ ಅವರು ಶುಭ ಹಾರೈಸಿದರು.