ಬಳ್ಳಾರಿ

ಇಂದಿನ ಸಮ ಸಮಾಜದ ಪರಿಕಲ್ಪನೆಗೆ ಸಂವಿಧಾನವೇ ಕಾರಣವಾಗಿದೆ : ಪ್ರಾಂಶುಪಾಲ ವೀರಭದ್ರ​‍್ಪ ತಂಬ್ರಹಳ್ಳಿ ಅಭಿಮತ

ಇಂದಿನ ಸಮ ಸಮಾಜದ ಪರಿಕಲ್ಪನೆಗೆ  ಸಂವಿಧಾನವೇ ಕಾರಣವಾಗಿದೆ : ಪ್ರಾಂಶುಪಾಲ ವೀರಭದ್ರ​‍್ಪ ತಂಬ್ರಹಳ್ಳಿ ಅಭಿಮತ
The Constitution is the reason for today's concept of an egalitarian society: Principal Veerabhadrap

             ಬಳ್ಳಾರಿ. ನ . 26 : ಸಂವಿಧಾನದಿಂದಾಗಿ ಸಮಾಜದಲ್ಲಿ ಎಲ್ಲರೂ ಸಮಾನವಾದ ಅವಕಾಶಗಳನ್ನು ಪಡೆಯಲು ಸಾಧ್ಯವಾಗಿದೆ ಅದಕ್ಕೆ ಮುಖ್ಯ ಕಾರಣವೆಂದರೆ ಡಾ. ಬಿ ಆರ್ ಅಂಬೇಡ್ಕರ್  ರಚಿಸಿರುವ  ಭಾರತ ಸಂವಿಧಾನವೇ ಕಾರಣವಾಗಿದೆ ಇಂದು ಶ್ರೀಮತಿ ಗಾಲಿ ರುಕ್ಮಿಣಿಮ್ಮ ಚೆಂಗಾರೆಡ್ಡಿ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ವೀರಭದ್ರ​‍್ಪ ತಂಬ್ರಹಳ್ಳಿ ಅಭಿಪ್ರಾಯ ಪಟ್ಟರು .

             ಅವರು ಗುರುವಾರದಂದು ಶ್ರೀಮತಿ ಗಾಲಿ ಋಕ್ವಿನಮ್ಮ ಮತ್ತು ಚಂಗ ರೆಡ್ಡಿ ಸ್ಮಾರಕ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ  78ನೇ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು ಸಂವಿಧಾನವನ್ನು 1949 ನವಂಬರ್ 26ರಂದು ನಮ್ಮಷ್ಟಕ್ಕೆ ನಾವೇ  ಅರ​‍್ಿಸಿಕೊಂಡು 1950 ಜನವರಿ 26ರಂದು ಜಾರಿಗೆ ಮಾಡಿಕೊಳ್ಳಲಾಯಿತು.

              1949 ನವಂಬರ್ 26ರಂದು ಏಕೆ ನಾವು ಜಾರಿಗೆ ತರಲಿಲ್ಲ ಅನ್ನೋದು ಮುಖ್ಯ ಏಕೆಂದರೆ ಬ್ರಿಟಿಷರ ವಿರುದ್ಧ ಹೋರಾಟ ಮಾಡುವಂತಹ ಸಂದರ್ಭದಲ್ಲಿ ಲಾಹೋರ್ ಅಧಿವೇಶನದಲ್ಲಿ 1930 ಜನವರಿ 26ರಂದು  ಬ್ರಿಟಿಷರಿಂದ ನಮ್ಮ ಸ್ವಾತಂತ್ರವನ್ನು ಪಡೆಯಲೇಬೇಕೆನ್ನುವ ಒಂದು ಘೋಷಣೆಯನ್ನು ಮಾಡಲಾಗಿತ್ತು.

               ಆ ದಿನದ ಸವಿನೆನಪಿಗಾಗಿ 1949 ನವೆಂಬರ್ 26 ರಿಂದ 1950 ಜನವರಿ 26ನೇ ದಿನಾಂಕದ ವರೆಗೆ ಮುಂದೂಡಿ 1950 ಜನವರಿ ನಮ್ಮ ಭಾರತ ಸಂವಿಧಾನವನ್ನು ಜಾರಿಗೆ ತರಲಾಯಿತು   ಸಂವಿಧಾನದ ಕರ್ತೃ  ಪಿತಾಮಹ ಡಾ. ಬಿಆರ್ ಅಂಬೇಡ್ಕರ್ ಅವರು ಹಗಲಿರುಳು ಶ್ರಮವಹಿಸಿ.

                ಸಂವಿಧಾನದ ರಚನಾ ಸಭೆಯಲ್ಲಿ ಪ್ರಮುಖವಾದಂತಹ ಪಾತ್ರವಹಿಸಿ ನಮ್ಮ ದೇಶಕ್ಕೆ ಅಗತ್ಯವಾದ ಎಲ್ಲಾ ಸರ್ಕಾರಗಳಿಗೂ ಸಂಬಂಧಿಸಿದ ಕಾನೂನುಗಳ ಗ್ರಂಥವನ್ನು ಮಹಾನ್ ಶಕ್ತಿ ಡಾ. ಬಿಆರ್ ಅಂಬೇಡ್ಕರ್ ಪ್ರಾಚೀನ ಭಾರತದಲ್ಲಿ ನಾವು ನಮ್ಮ ದೇಶದ ಪವಿತ್ರ ಗ್ರಂಥಗಳೆಂದು ರಾಮಾಯಣ ಮಹಾಭಾರತ ಕುರಾನ್ ಬೈಬಲ್ ಎಂದು ಗುರುತಿಸುತ್ತೇವೆ .

             

ಸುದ್ದಿ ಓದಿ