ಮಹಲಿಂಗಪುರ

ವಿಠ್ಠಲ ರುಕ್ಮಿಣಿ ಅದ್ಧೂರಿ ಮಹಾ ರಥೋತ್ಸವ

ವಿಠ್ಠಲ ರುಕ್ಮಿಣಿ ಅದ್ಧೂರಿ ಮಹಾ ರಥೋತ್ಸವ

ಲೋಕದರ್ಶನ ವರದಿ 

           ಮಹಾಲಿಂಗಪುರ 25 : ಸ್ಥಳೀಯ ಬುದ್ಧಿ ಪಿಡಿ ಬಡಾವಣೆಯ 700 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಐತಿಹಾಸಿಕ ವಿಠ್ಠಲ ರುಕ್ಮಿಣಿ ಮಹಾ ರಥೋತ್ಸವ ಮಂಗಳವಾರ ಸಂಜೆ 7 ಗಂಟೆಗೆ ಅದ್ಧೂರಿಯಾಗಿ ನೆರವೇರಿತು.  

             ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಶ್ರೀಕೃಷ್ಣ ರಥೋತ್ಸವಕ್ಕೆ ಭಂಡಾರ, ಬೆತ್ತಾಸು ಹರಿಸಿ ಭಕ್ತಿ ಮೆರೆದರು. ಭವ್ಯ ರಥೋತ್ಸವದೊಂದಿಗೆ ಉಚ್ಚಾಯ, ಕಂಡ್ಯಾಳ ಬಾಸಿಂಗ, ಡೊಳ್ಳು ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಪ್ರದರ್ಶನ ಜನರ ಗಮನ ಸೆಳೆಯಿತು. ಮಧ್ಯರಾತ್ರಿಯವರೆಗೂ ರಥೋತ್ಸವ ವಿಜೃಂಭಣೆಯಿಂದ ಜರುಗಿ, ಬಳಿಕ ಮೂಲಸ್ಥಾನಕ್ಕೆ ಮರಳಿತು. ಸಂಜೆ ವೇಳೆಯಿಂದಲೇ ಆಗಮಿಸಿದ ಸಾವಿರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.  

                 ಮೊದಲ ಬಾರಿಗೆ ನಿರಂತರ ಆರು ದಿನಗಳ ಕಾಲ ನಡೆದ ಜಾತ್ರೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಬುಧವಾರ ಸಂಜೆ ಕಳಸ ಇಳಿಸುವ ಮೂಲಕ ಮಹಾಪ್ರಸಾದದೊಂದಿಗೆ ಮುಕ್ತಾಯಗೊಂಡಿತು. ನೂತನವಾಗಿ ನಿರ್ಮಿಸಿರುವ ಉಚ್ಚಾಯ ಹಾಗೂ ಈ ಬಾರಿ ಹೊಸದಾಗಿ ಆಯೋಜಿಸಿದ್ದ ರೊಟ್ಟಿ ಬುಟ್ಟಿ ಮೆರವಣಿಗೆ ವಿಶೇಷ ಆಕರ್ಷಣೆಯಾಗಿದ್ದವು.  

            ಜಾತ್ರಾ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಉಪಾಧ್ಯಕ್ಷ ಮಹಾಲಿಂಗಪ್ಪಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಮಹಾಲಿಂಗಪ್ಪ ತಟ್ಟಿಮನಿ, ಶಂಕರಗೌಡ ಪಾಟೀಲ, ಸುನೀಲಗೌಡ ಪಾಟೀಲ, ವಿಜುಗೌಡ ಪಾಟೀಲ ಹಾಗೂ ಲಕ್ಷ್ಮಣ ಮಾಂಗ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.  

ಸಮಿತಿ ಸಹ ಕಾರ್ಯದರ್ಶಿ ರಾಜು ಮುದಕಪ್ಪಗೋಳ,

           ಖಜಾಂಚಿ ಸದಾಶಿವ ಶೇಗುಣಸಿ, ಸದಸ್ಯರಾದ ಶ್ರೀಮಂತ ಒಂಟಗೋಡಿ, ವಿಠ್ಠಲಗೌಡ ಪಾಟೀಲ, ಕುಮಾರ ಪವಾರ, ಮಹಾಲಿಂಗ ಪಾಟೀಲ, ನಾರಾಯಣಗೌಡ ಪಾಟೀಲ, ಅಪ್ಪಾಸಾಬ ನಾಲಬಂದ, ಶ್ರೀಶೈಲ ಮಠಪತಿ, ವಿಠ್ಠಲ ಮೇಟಿ, ಸಿದ್ದಪ್ಪ ಮಿರ್ಜಿ, ಬೇಬವ್ವ ಯಾದವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ