ಮಹಲಿಂಗಪುರ

ಮಹಾಫೌಂಡೇಶನ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಗುರುತಿನ ಚೀಟಿ ವಿತರಣೆ

ಮಹಾಫೌಂಡೇಶನ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಗುರುತಿನ ಚೀಟಿ ವಿತರಣೆ

ಲೋಕದರ್ಶನ ವರದಿ 

           ಮಹಾಲಿಂಗಪುರ 16:  ಗೆಳೆಯರ ಬಳಗದ 'ಮಹಾಫೌಂಡೇಶನ್' ಸಂಸ್ಥೆಯು ಸ್ಥಳೀಯ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಸುಧಾರಿತ ಗುರುತಿನ ಚೀಟಿಗಳನ್ನು ವಿತರಿಸಿ ಮಾದರಿ ಕಾರ್ಯ ಮಾಡಿತು. 

                ಸೋಮವಾರ ಪಟ್ಟಣದ ಜೋಡು ರಸ್ತೆಯ ಶಾಲೆಯ ಪಾಲಕರ ಸಭೆ ಮತ್ತು ಗುರುತಿನ ಚೀಟಿ ವಿತರಣೆಗೆ, ವೇದಿಕೆ ಗಣ್ಯರು ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

                       ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಇದೆ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಬಸವರಾಜ ಪೂಜಾರಿ ಅವರು ಮಾತನಾಡುತ್ತ, ಖಾಸಗಿ ಶಾಲೆಗಳಲ್ಲಿ ಕಂಡು ಬರುವ ಗುರುತಿನ ಚೀಟಿಗಳು ಬಹುಪಯೋಗಿಯಾಗಿವೆ. ಶಿಸ್ತು ಕಲಿಕೆಯೊಂದಿಗೆ ಮಕ್ಕಳ ಕಣ್ಮರೆ, ವೈದ್ಯಕೀಯವಾಗಿ ರಕ್ತದ ಗುಂಪು, ಬಸ್, ರೇಲ್ವೆ ಇನ್ನಿತರ ಕಡೆಗಳಲ್ಲಿಯೂ ಮಾಹಿತಿ ಒದಗಿಸುತ್ತದೆ.

               ಇಷ್ಟಕ್ಕೆಲ್ಲ ಸಹಕಾರಿಯಾಗಿರುವ ಈ ಗುರುತಿನ ಚೀಟಿ ಒದಗಿಸಿರುವ ಪಟ್ಟಣದ 'ಮಹಾಫೌಂಡೇಶನ್'' ಕಾರ್ಯಕ್ಕೆ ಅಭಿನಂದನೆ ತಿಳಿಸುತ್ತ,ಖಾಸಗಿಗಿಂತ ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿರುತ್ತಾರೆ.ಆದ್ದರಿಂದ ಪಾಲಕ, ಪೋಷಕರು ತಮ್ಮ ಹಾಗೂ ತಮ್ಮ ಆಸುಪಾಸಿನಲ್ಲಿರುವ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಕಾಳಜಿ ವಹಿಸಿ ಎಂದರು. 

                ಶಾಲೆಯ ಹಳೆ ವಿದ್ಯಾರ್ಥಿ ಈರಣ್ಣ ಹಲಗತ್ತಿ ಮತ್ತು ಸಿಆರ​‍್ಿ ಎಸ್‌. ಎಂ. ಮುಗೆನ್ನವರ ಮಾತನಾಡಿ, ಗುರುತಿನ ಚೀಟಿ ಮಕ್ಕಳಲ್ಲಿ ಉತ್ಸಾಹ ಮತ್ತು ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ.ಇದರ ಜೊತೆಯಲ್ಲಿ ಪಾಲಕರು ಮಕ್ಕಳ ಆಟ-ಪಾಠಗಳತ್ತ ಗಮನ ಹರಿಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಬದುಕು ಸಾಗಿಸುತ್ತಾರೆ ಎಂದರು.

                   ಮಕ್ಕಳಿದ್ದರೆ ನಾವು, ಅಂದ ಹಾಗೆ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಮಕ್ಕಳು ಇಲ್ಲಿ ಕಲಿಯುವಂತಹವರಾಗಬೇಕು ಆಗ ಶಾಲೆ ಮಾದರಿ ರೂಪ ಪಡೆದುಕ್ಕೊಳ್ಳುತ್ತದೆ ಎಂದರು. ಶಾಲೆಯ ಮುಖ್ಯ ಗುರುಗಳಾದ ವಾಯ್‌. ವಾಯ್‌. ತಂಬೂರಿ ಪ್ರಾಸ್ತಾವಿಕ ಮಾತನಾಡಿ, ಸಭೆಯಲ್ಲಿ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳ ಕಾಳಜಿ ವಹಿಸಲು ಹೇಳಿದರು. 

              ಎಸ್‌.ಡಿ .ಎಂ .ಸಿ ಅಧ್ಯಕ್ಷೆ ಸಾಹೀರಾ ಪೆಂಡಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಾ ಫೌಂಡೇಶನ್ ಸದಸ್ಯರಾದ ಅನೀಲ ಉಳ್ಳಿಗಡ್ಡಿ, ಮೀರಾ ಮುಲ್ಲಾ, ಈರಣ್ಣ ನಕಾತಿ, ಶ್ರೀಶೈಲ ಕಾರಜೋಳ, ಶ್ರೀಶೈಲ ಹುನಿಶ್ಯಾಳ, ಸುರೇಶ ಕಳ್ಯಾಗೋಳ, ಶ್ರೀಶೈಲ ಕುಕ್ಕುಗೋಳ,ಗೊಡಚಪ್ಪ ಜಿಡ್ಡಿಮನಿ, ಮೋನೇಶ ಬಡಿಗೇರ, ಸಿದ್ದು ಬಡಿಗೇರ,ಲತಾ ಪೂಜಾರಿ ,ಎಂ ಆರ್ ಚಿತ್ರಗಾರ,ಬಸು ಅಳ್ಳಿಮಟ್ಟಿ, ಇದ್ದರು. ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಶಿಕ್ಷಕರಾದ ಜಿ.ಬಿ.ಪೂಜಾರಿ ಸ್ವಾಗತಿಸಿ ಸಹಶಿಕ್ಷಕಿ ಎಸ್‌. ಆಯ್‌. ಗದಗ ನಿರೂಪಿಸಿ, ಸಲಿಂ ನದಾಫ ವಂದಿಸಿದರು. 


ಸುದ್ದಿ ಓದಿ