ಕಂಪ್ಲಿ

ಕಾಲುವೆಗೆ ಈಜಲು ಹೋದ ಇಬ್ಬರು ಬಾಲಕರು ನೀರು ಪಾಲು : ಕುಟುಂಬಸ್ಥರಲ್ಲಿ ಕಣ್ಣೀರಿನ ಆಕ್ರಂದನ

ಕಾಲುವೆಗೆ ಈಜಲು ಹೋದ ಇಬ್ಬರು ಬಾಲಕರು ನೀರು ಪಾಲು : ಕುಟುಂಬಸ್ಥರಲ್ಲಿ ಕಣ್ಣೀರಿನ ಆಕ್ರಂದನ

ಲೋಕದರ್ಶನ ವರದಿ 


         ಕಂಪ್ಲಿ  16: ತಾಲೂಕು ಸಮೀಪದ ಬುಕ್ಕಸಾಗರ ಬಳಿಯ ಎಲ್‌ಎಲ್‌ಸಿ ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಈಜು ಬಾರದೇ ನೀರು ಪಾಲಾದ ಧಾರುಣ ಘಟನೆ ನಡೆದಿದೆ. ಮೂಲತ ಕುರುಗೋಡು ತಾಲೂಕಿನ ಎಚ್‌.ವೀರಾಪುರ ಗ್ರಾಮದ ಇಬ್ಬರು ಬಾಲಕರು ಮೃತಪಟ್ಟು ದುರ್ಧೈವಿ. ಮುನಿರಾಬಾದ್‌ನ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗಿ ವಾಪಸ್ ಬಂದು, ಬುಕ್ಕಸಾಗರದ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದರು.

          ನಂತರ ಪಕ್ಕದಲ್ಲಿರುವ ಎಲ್‌ಎಲ್‌ಸಿ ಕಾಲುವೆಗೆ ಈಜಾಡಲು ಹೋಗಿದ್ದಾರೆ. ಈ ಕಾಲುವೆಯಲ್ಲಿ ನೀರಿನ ಸುಳಿಗೆ ಸಿಲುಕಿ ಸತೀಶ್, ಅನ್ನಪೂರ್ಣ ದಂಪತಿಯ ಮಗ ಮೌನೇಶ್ (16), ಫಕ್ಕೀರ​‍್ಪ, ಸಣ್ಣ ಈರಮ್ಮ ದಂಪತಿಯ ಮಗನಾದ ಸೋಮಶೇಖರ್ (12 ) ಮೃತಪಟ್ಟಿದ್ದಾರೆ. ಇಬ್ಬರ ಮೃತ ದೇಹಗಳನ್ನು ಮೂಲತ ಎಚ್‌.ವೀರಾಪುರ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಮನೆಗೆ ಶಾಸಕ ಜೆ.ಎನ್‌.ಗಣೇಶ್ ಭೇಟಿ ನೀಡಿ ಸಾಂತ್ವನ ಹೇಳಿ, ಸಹಾಯಧನ ಮಾಡಿದರು. 


ಸುದ್ದಿ ಓದಿ