ಕಂಪ್ಲಿ

ಬರದ ಹಿನ್ನಲೆ ರೈತರ ಸಾಲ ಮನ್ನಾ ಮಾಡಬೇಕು : ಹೊಸಕೊಟೆ ಜಗದೀಶ

ಬರದ ಹಿನ್ನಲೆ ರೈತರ ಸಾಲ ಮನ್ನಾ ಮಾಡಬೇಕು : ಹೊಸಕೊಟೆ ಜಗದೀಶ

ಲೋಕದರ್ಶನ ವರದಿ 


           ಕಂಪ್ಲಿ 14 : ತಾಲೂಕಿನ ಮೆಟ್ರಿ ಗ್ರಾಮದಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ನೇತೃತ್ವದಲ್ಲಿ ಶನಿವಾರ ನಡೆಯಿತು. ಅಪೆಕ್ಸ್‌ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಮನೋಭಾವ ಮತ್ತು ಒಗ್ಗಟ್ಟು, ಹೊಂದಾಣಿಕೆಯೊಂದಿಗೆ ಸಹಕಾರ ಸಂಘಗಳ ಅಭಿವೃದ್ಧಿಯೇ ಮೂಲಕ ಉದ್ದೇಶವಾಗಿದೆ.

            14ರಿಂದ 20ರವರೆಗೆ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಲಿದೆ ಎಂದರು. ಹೊಸಕೋಟೆ ಜಗದೀಶ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಸಾಲ ಸೌಲಭ್ಯ, ಮಹಿಳೆಯರಿಗೆ ಕೌಶಲ್ಯ ಸೇರಿದಂತೆ ನಾನಾ ಸೌಲಭ್ಯಗಳು ದೊರಕಲಿವೆ. ರೈತರ ಪ್ರತಿ ಎಕರೆಗೆ ಸಾಲವನ್ನು ಹೆಚ್ಚಿಸಬೇಕು. ಈ ಬಾರಿ ಬರ ಇರುವುದರಿಂದ ಸಾಲ ಮನ್ನಾ ಮಾಡಬೇಕು. ಅತಿ ಶೀಘ್ರದಲ್ಲಿ ಮೆಟ್ರಿಯಲ್ಲಿ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ ಪ್ರಾರಂಭವಾಗಲಿದೆ ಎಂದರು.

             ಡಿಆರ್ ಜಿ.ಎಂ.ವೀರಭದ್ರಯ್ಯ ಮಾತನಾಡಿ, ಗ್ರಾಮೀಣ ಆರ್ಥಿಕತೆಯ ಜೀವಾಳ. ಈ ತತ್ವವನ್ನು ಬಲಪಡಿಸಬೇಕಾಗಿದೆ. ಸಹಕಾರದ ಜಾಗೃತಿ ಮೂಡಿಸಬೇಕಾಗಿದೆ. ಸಹಕಾರವೇ ಸಂವೃದ್ಧಿಯಾಗಿದೆ. ಕಟ್ಟಕಡೆಯ ವ್ಯಕ್ತಿಯನ್ನು ಬಲಪಡಿಸುವುದು ಸಹಕಾರ ಸಂಘವಾಗಿದೆ. ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿ, ಶೂನ್ಯ ಬಡ್ಡಿಯೊಂದಿಗೆ ಸೌಲಭ್ಯಗಳನ್ನು ಪಡೆಯಬೇಕು ಎಂದರು.                    ಕುಷ್ಟಗಿ ಸ.ಪ.ಪೂ ಕಾಲೇಜು ಉಪನ್ಯಾಸಕ ಸುಭಾಷ ಎ.ಗೌಡ ಅವರು ಸುಸ್ಥಿರ ಅಭಿವೃದ್ಧಿ ಮತ್ತು ಬೆಳೆವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸಮಾಜದಲ್ಲಿ ಬದುಕುವ ಸಹಕಾರ ಸಂಘಗಳು ಸೌಲಭ್ಯಗಳನ್ನು ನೀಡುವ ಮೂಲಕ ಅನುವು ಮಾಡಿಕೊಡುತ್ತಿವೆ. ಸಹಕಾರ ತತ್ವ ಮೊದಲಿಂದಲೂ ಉಳಿದುಕೊಂಡು ಬಂದಿದೆ.

                ಭಾರತದ ಆರ್ಥಿಕತೆಯಲ್ಲಿ ಸಹಕಾರ ಸಂಘಗಳ ಸುಸ್ಥಿರವೇ ಮುಖ್ಯವಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣವಾಗಿದೆ. ಬೆಳೆ ಬೆಳೆದ ರೈತರೇ ಬೆಲೆ ನಿಗದಿ ಮಾಡಬೇಕಾಗಿದೆ. ರೈತರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಪಡೆದುಕೊಂಡಾಗ ಬೆಳೆ ಹಾಗೂ ಬೆಲೆಯ ಅರಿವಾಗಲಿದೆ. ಕೃಷಿಯಲ್ಲಿ ವೈಜ್ಞಾನಿಕತೆ, ತಂತ್ರಜ್ಞಾನ ಬೆಳಸಬೇಕಾಗಿದೆ. ಪ್ರಜಾಪ್ರಭುತ್ವದ ಆಯುಧ ಶಿಕ್ಷಣವಾಗಿದೆ. ಕಳೆದ ಎರಡ್ಮೂರು ವರ್ಷದಲ್ಲಿ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಸ್ ಮೆಟ್ರಿ ಸಹಕಾರ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

                  ಈ ಸಂದರ್ಭದಲ್ಲಿ ಬಿಡಿಸಿಸಿ ನಿರ್ದೇಶಕ ಹುಲುಗಪ್ಪ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಉಪ್ಪಾರ್ ಮಲ್ಲೇಶಪ್ಪ, ಹೆಚ್‌.ವೀರೇಶ್‌ಗೌಡ, ಮೆಟ್ರಿ ಸಹಕಾರ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಗೌಡ್ರು ಡಿಂಡಿ ಮಹರ್ಷಿ, ಉಪಾಧ್ಯಕ್ಷ ಬಿ.ಗಂಗಾಧರ್, ಬಳ್ಳಾರಿ ಉಪ ವಿಭಾಗದ ಸಹಾಯಕ ನಿಬಂಧಕ ಗ್ಯಾನಪ್ಪ, ಕಂಪ್ಲಿ ಸಿಡಿಓ ಚಂದ್ರಮೌಳಿ, ಕ್ಷೇತ್ರಾಧಿಕಾರಿ ರಾಮಚಂದ್ರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್,

               ವ್ಯವಸ್ಥಾಪಕ ಬಸವರಾಜ, ಮೆಟ್ರಿ ಸಹಕಾರ ಸಂಘದ ನಿರ್ದೇಶಕರಾದ ಹೊನ್ನಳ್ಳಿ ಗಂಗಾಧರ, ಗಿರೆಡ್ಡಿ ಮರೇಗೌಡ, ಸಿ.ಡಿ.ಪಾಂಡುರಂಗ, ಪಿ.ಶಕ್ಷಾವಲಿ, ವೀರಭದ್ರ​‍್ಪ, ಫಕೀರ​‍್ಪ, ಅಯ್ಯಪ್ಪ, ಚಂದ್ರಶೇಖರ್, ಲಕ್ಷ್ಮಿ, ಮಂಜುಳಾ, ನಾಗರಾಜಗೌಡ(ಬ್ಯಾಂಕ್ ಪ್ರತಿನಿಧಿ) ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ