ಶಿಕ್ಷಕರಿಗೆ “ಹುಲಿಕುಂಟೆ ಶ್ರೀ” ಶಿಕ್ಷಣ ಸಾಧಕ ರಾಜ್ಯ ಪ್ರಶಸ್ತಿ ಪ್ರಧಾನ
ಲೋಕದರ್ಶನ ವರದಿ
ಕಂಪ್ಲಿ 11: ಇತ್ತೀಚೆಗೆ ಬಳ್ಳಾರಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ನಡೆದ ಶಿಕ್ಷಕರ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ರಂಗದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಗುರುತಿಸಿ, ಕಂಪ್ಲಿಯ ಸಿಆರ್‌ಪಿ ಎ.ಗಂಗಾಧರ, ಸಹ ಶಿಕ್ಷಕರಾದ ಬಿ.ಚಂದ್ರಶೇಖರ, ಐ.ಗಂಗಮ್ಮ, ಹೆಚ್.ಯಶೋಧ ಪ್ರಭಾಕರ ಇವರಿಗೆ “ಹುಲಿಕುಂಟೆ ಶ್ರೀ” ಶಿಕ್ಷಣ ಸಾಧಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂತರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಹನುಮಂತಪ್ಪ ಮಾತನಾಡಿ, 2019ರಲ್ಲಿ ಸಿರುಗುಪ್ಪ ತಾಲೂಕಿನಲ್ಲಿರುವ ಹೊಸ ಚನ್ನಪಟ್ಟಣ ಸರ್ಕಾರಿ ಶಾಲೆಯಲ್ಲಿ ಸೇವೆಗೆ ಸೇರೆ್ಡಗೊಂಡು, ಪ್ರಸ್ತುತ ಕಂಪ್ಲಿ ನಗರದ 8ನೇ ವಾರ್ಡ್ ಕ್ಲಸ್ಟರ್ ಮಟ್ಟದ ಸಿಆರ್‌ಪಿ ಆಗಿ ಸೇವೆ ಸಲ್ಲಿಸುತ್ತಿರುವ ಎ.ಗಂಗಾಧರ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಮತ್ತು ಸರ್ಕಾರಿ ಸೇವೆ ಸೇರುವ ಮೊದಲೇ 2018ರಲ್ಲಿ ಉತ್ತಮ ಮುಖ್ಯೋಪಾಧ್ಯಯ ಪ್ರಶಸ್ತಿ ದೊರೆತಿರುವುದು ಸ್ಮರಣೀಯವಾಗಿದೆ. ಕಂಪ್ಲಿ ತಾಲೂಕು ವ್ತಾಪ್ತಿಯ ಹೊಸ ನೆಲ್ಲುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1999ರಲ್ಲಿ ಕರ್ತವ್ಯಕ್ಕೆ ಸೇರಿ, 2011ರಲ್ಲಿ ಜನಮೆಚ್ಚಿನ ಶಿಕ್ಷಕ ಪ್ರಶಸ್ತಿ, 2018ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2007ರಲ್ಲಿ ಸಮಾಜ ವಿಜ್ಞಾನ ವೇದಿಕೆಯಿಂದ ಕನ್ನಡ ಕಲಿಕಾ ಶಿಕ್ಷಕ ಪ್ರಶಸ್ತಿ ಪಡೆಯುವ ಜೊತೆಗೆ ಪ್ರಭಾರಿ ಮುಖ್ಯಗುರು ಮತ್ತು ಸಹ ಶಿಕ್ಷಕರಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಾ ಬಂದಿರುವ ಬಿ.ಚಂದ್ರಶೇಖರ ಅವರ ಸೇವೆಯನ್ನು ಗುರುತಿಸಲಾಗಿದೆ.
ಮತ್ತು ಕಂಪ್ಲಿ ಸಕ್ಕರೆ ಕಾರ್ಖಾನೆಯ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಐ.ಗಂಗಮ್ಮ ಅವರು ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿಗೆ ರಾಮಸಾಗರದಲ್ಲಿ 2002ರಲ್ಲಿ ಕರ್ತವ್ಯಕ್ಕೆ ಹಾಜರಾಗಿ ಸತತ 22 ವರ್ಷ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಸಲ್ಲುತ್ತದೆ. ನಂತರ ಇಲ್ಲಿನ ಸಕ್ಕರೆ ಕಾರ್ಖಾನೆ ಶಾಲೆಯಲ್ಲಿ ಪ್ರಸ್ತುತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನಿರಂತರ ಸೇವೆಗೆ ಒಲಿದ ಪ್ರಶಸ್ತಿಯಾಗಿದೆ.
ಪಟ್ಟಣದಲ್ಲಿರುವ ಎಸ್‌ಎನ್‌ಪೇಟೆಯ ಸಹ ಶಿಕ್ಷಕಿ ಹೆಚ್.ಯಶೋಧ ಪ್ರಭಾಕರ ಇವರು ಬಳ್ಳಾರಿ ನಗರದ ಹಂದ್ರಾಳ್ 2007ರಲ್ಲಿ ಸೇವೆಗೆ ಪ್ರವೇಶಿಸಿ, ನಂತರ 2012ರಲ್ಲಿ ದೇವಲಾಪುರ ಸರ್ಕಾರಿ ಶಾಲೆಯಲ್ಲಿ, ತದನಂತರದಲ್ಲಿ ಕಂಪ್ಲಿ ನಗರದ ಎಸ್‌ಎನ್‌ಪೇಟೆಯ ಸರ್ಕಾರಿ ಶಾಲೆಯಲ್ಲಿ ಸೇವೆ ಮಾಡುತ್ತಿದ್ದಾರೆ. ಇವರ ಉತ್ತಮ ಸೇವೆಗೆ ಪ್ರಶಸ್ತಿ ಲಭಿಸಿದೆ. ಒಟ್ನಲ್ಲಿ ಈ ನಾಲ್ಕು ಜನರಿಗೆ “ಹುಲಿಕುಂಟೆ ಶ್ರೀ” ಶಿಕ್ಷಣ ಸಾಧಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯಾಗಿದೆ.
ಈ ಪ್ರಶಸ್ತಿ ಸಮಾಜದಲ್ಲಿ ಜವಾಬ್ದಾರಿ ಹೆಚ್ಚಿಸುತ್ತದೆ’. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸಿದಾಗ ಅವರು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರಣೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ದೊಡ್ಡಬಸಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಜಡೆಪ್ಪ, ಸಿಆರ್‌ಪಿ ಪ್ರಭಾಕರ ಸೇರಿದಂತೆ ಶಿಕ್ಷಕರು ಇದ್ದರು.