ಹೊಸಮಠದಲ್ಲಿ ಬೆಳಗಾವಿಗೆ ರಾಜ್ಯಮಟ್ಟದ ಸಮ್ಮೇಳನಕ್ಕೆ ಪತ್ರಿಕಾ ವಿತರಕರ ಪ್ರಯಾಣದ ವಾಹನಕ್ಕೆ ಚಾಲನೆ
ಹಾವೇರಿ : ಪತ್ರಿಕಾ ವಿತರಣೆಯಲ್ಲಿ ಮಹತ್ವದ ಶ್ರಮ ಹಾಗೂ ಪಾತ್ರವಹಿಸುವ ಪತ್ರಿಕಾ ವಿತರಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಲಿ. ಬೆಳಗಾವಿಯಲ್ಲಿನ 6ನೇ ರಾಜ್ಯ ಮಟ್ಟದ ಪತ್ರಿಕಾ ವಿತರಕರ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾವೇರಿಯ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಗಳು ಶುಭ ಕೋರಿದರು.
ನಗರದ ಹೊಸಮಠದಲ್ಲಿ ಬೆಳಗಾವಿಗೆ ರಾಜ್ಯಮಟ್ಟದ ಸಮ್ಮೇಳನಕ್ಕೆ ಪತ್ರಿಕಾ ವಿತರಕರ ಪ್ರಯಾಣದ ವಾಹನಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು. ಪ್ರತಿ ದಿನ ಎದ್ದು ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಸಮಾಜಕ್ಕೆ ದಿನನಿತ್ಯದ ಸುದ್ದಿಗಳನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಮಹತ್ವದ್ದಾಗಿದೆ.
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಪತ್ರಿಕಾ ವಿತರಕರ 6ನೇ ರಾಜ್ಯ ಸಮ್ಮೇಳನ ಆಯೋಜಿಸಿದ್ದು, ಒಕ್ಕೂಟದ ಒಗ್ಗಟ್ಟು ಸಂಘಟನೆ ಪ್ರದರ್ಶನಗೊಳ್ಳಲಿ. ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗಲಿ. ಪತ್ರಿಕಾ ವಿತರಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಸಮ್ಮೇಳನಕ್ಕೆ ತೆರಳುತ್ತಿರುವ ಎಲ್ಲರಿಗೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಸಂಘದ ತಾಲ್ಲೂಕಾಧ್ಯಕ್ಷರಾದ ಬೀರ್ಪ ಕುರಗುಂದ, ಪದಾಧಿಕಾರಿಗಳಾದ ಜಯಪ್ಪ ಬಣಕಾರ, ನಿಂಗಪ್ಪ ಆರೇರ, ಚೇತನಪ್ರಸಾದ ರಾಜಪುರೋಹಿತ, ಚಂದ್ರಶೇಖರ ಅಕ್ಕಿ, ಬಸವರಾಜ ಬೆನ್ನೂರ, ಶಿವಾಜಿ ತಿಳವಳ್ಳಿ, ನಿಂಗಪ್ಪ ಮಡಿವಾಳರ, ಗಂಗಾಧರಯ್ಯ ಕಳ್ಳಿಮಠ,ಅಶೋಕ ಬಳಿಗಾರ, ಭೀಮಣ್ಣ ಕರ್ಜಗಿ, ಮಂಜುನಾಥ ಹೋಳಗಿ, ನಾಗರಾಜ ಬಾರ್ಕಿ,ಸತೀಶ ಹಿರೇಮಠ, ಸದಾಮಣಿ ಕುರಗುಂದ, ಅದ್ವಿಕ ಬೆನ್ನೂರ ಸೇರಿದಂತೆ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.