ಬಳ್ಳಾರಿ

ರಾಯದುರ್ಗ ಶಾಸಕ ಕಾಲುವ ಶ್ರೀನಿವಾಸ್ ಇವರೊಂದಿಗೆ ತುಂಗಭದ್ರಾ ಜಲಾಶಯ ಕುರಿತು ಪುರುಷೋತ್ತಮ್ ಗೌಡ ಚರ್ಚೆ

ರಾಯದುರ್ಗ  ಶಾಸಕ  ಕಾಲುವ ಶ್ರೀನಿವಾಸ್ ಇವರೊಂದಿಗೆ ತುಂಗಭದ್ರಾ ಜಲಾಶಯ ಕುರಿತು ಪುರುಷೋತ್ತಮ್ ಗೌಡ ಚರ್ಚೆ

 

           ಬಳ್ಳಾರಿ. ನ . 12 : ನಗರದ ಇನ್ಫೆಂಟ್ರಿ ರಸ್ತೆಯ ಲ್ಯಾಬ್  ಉದ್ಘಾಟನಾ ಖಾಸಗಿ ಕಾರ್ಯಕ್ರಮಕ್ಕೆ  ಆಗಮಿಸಿದ್ದ  ಆಂಧ್ರ​‍್ರದೇಶದ ರಾಯದುರ್ಗ ತಾಲೂಕಿನ ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಕಾಲುವ ಶ್ರೀನಿವಾಸ್ ಇವರುಗಳನ್ನು ಭೇಟಿ ಮಾಡಿ, ತುಂಗಭದ್ರಾ ಜಲಾಶಯದ ಬಲದಂಡೆಯ ಮೇಲ್ಮಟ್ಟದ ಕಾಲುವೆ (ಎಚ್ ಎಲ್ ಸಿ ) ಗೆ ನವಂಬರ್ 30ರವರೆಗೂ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಸಹ ಆಂಧ್ರ​‍್ರದೇಶದ ಪಾಲಿನ ನೀರು ಪಡೆಯಬೇಕೆಂದು ಹಸಿರು ಶಾಲು ಹಾಕಿ ಗೌರವಿಸಿ ವಿನಂತಿಸಲಾಯಿತು.

           ಈ ಕುರಿತು ನಿಮ್ಮ ಬಳ್ಳಾರಿ ಜಿಲ್ಲೆಯ  ಶಾಸಕ ಮತ್ತು  ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡು ರಾಜ್ಯಗಳ ಪಾಲಿನ ನೀರು ಪಡೆಯಲು ಪ್ರಯತ್ನಿಸೋಣ ಎಂದು ಕಾಲುವ ಶ್ರೀನಿವಾಸ್   ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುರುಷೋತ್ತಮಗೌಡ, ಎಚ್ ಕೆ ಗೌರಿಶಂಕರ್, ತಿಮ್ಮರಾಜು ಬಳ್ಳಾರಿ, ಕೃಷ್ಣ ನಗರ ಕ್ಯಾಂಪ್ ಶಿವಯ್ಯ , ಗಂಗಾವತಿ ವೀರೇಶ್, ಕೃಷ್ಣ ನಗರ ಕ್ಯಾಂಪ್ ಬಲರಾಮ , ಕಂಪ್ಲಿ ಸತ್ಯನಾರಾಯಣ , ಕೃಷ್ಣ ನಗರ್ ಕ್ಯಾಂಪ್ ರಾಮಕೃಷ್ಣ , ಜಾಲಿಹಾಳ್ ಶ್ರೀಧರ್ ಗೌಡ,  , ಕೃಷ್ಣ ನಗರ್ ಕ್ಯಾಂಪ್ ಶಿವಯ್ಯ , ಗಂಗಾವತಿ ವೀರೇಶ್ , ಕಂಪ್ಲಿ ಸತ್ಯನಾರಾಯಣ , ಶಿವಶಂಕರಯ್ಯ ಸ್ವಾಮಿ , ಕೊಳೂರು ಚಂದ್ರಶೇಖರ್ ಗೌಡ , ಚಾಲಿಹಾಳ್ ಶ್ರೀಧರ್ ಗೌಡ , ಬಂದ್ರಾಳು ಮೃತ್ಯುಂಜಯ ಸ್ವಾಮಿ ಸೇರಿದಂತೆ ಇತರ ಇದ್ದರು. 


ಸುದ್ದಿ ಓದಿ