ಡಿ 15ರವರೆಗೆ ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಬಿಡಿ : ಪ್ರತಾಪ್ ರೆಡ್ಡಿ ಮನವಿ
ಬಳ್ಳಾರಿ ನ. 8: ಬಳ್ಳಾರಿ ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳು ಕೈ ಸೇರಲು ಡಿಸೆಂಬರ್ ತಿಂಗಳ 15ನೇ ತಾರೀಖಿನವರೆಗೆ ನೀರಿನ ಅಗತ್ಯವಿದೆ ಕಾರಣ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಈಗ ಆರಂಭಿಸಿರುವಂತೆ ಆನ್ ಅಂಡ್ ಆಫ್ ಪದ್ಧತಿಯಲ್ಲಿ ಡಿಸೆಂಬರ್ 15ರವರೆಗೆ ನೀರು ಹರಿಸಬೇಕೆಂದು ಮಾಜಿ ಬುಡ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಮನವಿ ಮಾಡಿದರು.
ಅವರು ಇಂದು ನಗರದ ನಕ್ಷತ್ರ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ತುಂಗಭದ್ರಾ ಮಂಡಳಿಯ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಪಕ್ಕದ ರಾಜ್ಯಗಳಾದ ಆಂಧ್ರ್ರದೇಶ ಮತ್ತು ತೆಲಂಗಾಣದ ಜೊತೆ ಮಾತನಾಡಿ ನೀರನ್ನು ಬಳಸಿಕೊಳ್ಳಲು ಅನುಮತಿಯನ್ನು ಪಡೆದುಕೊಂಡು ಜಿಲ್ಲೆಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ನೀರನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕು ಇದರಿಂದ ಲಕ್ಷಾಂತರ ರೈತರ ಬೆಳೆಯ ಫಸಲು ಕೈಗೆ ಬಂದು ರೈತರು ನಷ್ಟ ಹೊಂದುವುದು ತಪ್ಪಿಸಬಹುದು ಎಂದು ಪ್ರತಾಪ್ ರೆಡ್ಡಿ ಅಭಿಪ್ರಾಯಪಟ್ಟರು.
ಪೆಟ್ರೋಲ್ ನಲ್ಲಿ 10 ರಿಂದ 15ಅ ಏತೇನಾಲ್ ಬಳಸಲು ಅವಕಾಶವಿದ್ದರೂ ಪೆಟ್ರೋಲಿಯಂ ಕಂಪನಿಗಳು 30ಕ್ಕಿಂತಲೂ ಅಧಿಕ ಪಟ್ಟು ಬೆರೆಸುತ್ತಿದ್ದಾರೆ ಇದರಿಂದ ವಾಹನಗಳ ಮೈಲೇಜ್ ಪ್ರಮಾಣ ಕಡಿಮೆಯಾಗಿ ವಾಹನಗಳ ಇಂಜನಿಗೂ ಸಹ ಒತ್ತಡ ಬೀಳುತ್ತದೆ ಇದನ್ನು ಪತ್ತೆ ಹಚ್ಚಿದ ಆಹಾರ ನಾಗರಿಕ ಸರಬರಾಜು ಸಚಿವ ಹರ್ಷದ್ ಅಭಿನಂದನ ಅರ್ಹರು ಎಂದ ರೆಡ್ಡಿ ಇತ್ತೀಚೆಗೆ ಹೋಟೆಲ್ ನಲ್ಲಿ ಆಹಾರದ ಗುಣಮಟ್ಟ ಕಡಿಮೆಯಾಗುತ್ತಿದೆ ಹಲವು ದಿನಗಳ ಹಲವು ತಿಂಗಳುಗಳ ಮಾಂಸವನ್ನು ಶೇಖರಿಸಿಟ್ಟು ಗ್ರಾಹಕರಿಗೆ ಕಳಪೆ ಗುಣಮಟ್ಟದ ಆಹಾರವನ್ನು ಒದಗಿಸುತ್ತಾರೆ.
ಇದರಿಂದ ಗ್ರಾಹಕರ ಆರೋಗ್ಯದಲ್ಲಿ ಏರುಪೇರಾಗಿ ಹದಗೆಡುವ ಸಂದರ್ಭವಿರುತ್ತದೆ, ಹಣಕ್ಕೆ ತಕ್ಕ ಗುಣಮಟ್ಟದ ಆಹಾರವನ್ನು ಒದಗಿಸಲು ಕ್ರಮ ಕೈಗೊಂಡಿರುವ ಆರೋಗ್ಯ ಸಚಿವರ ಕ್ರಮ ಶ್ಲಾಘನೀಯ ಎಂದರು. ಕೆ ಎಫ್ ಸಿ ಮತ್ತು ಇತರ ವಿದೇಶಿ ಕಂಪನಿಗಳ ಮಾಂಸ ಖಾದ್ಯಗಳು ಹಲವಾರು ತಿಂಗಳ ಹಳೆಯ ಸ್ಟಾಕ್ ಆಗಿದ್ದು ಇದನ್ನು ಹಲವು ರಾಸಾಯನಿಕಗಳ ಮಿಶ್ರಣದಿಂದ ಬೇಗನೆ ಕೆಡದಂತೆ ಶೇಖರಣೆ ಮಾಡಿ ಇಟ್ಟುಕೊಂಡಿರುತ್ತಾರೆ ಇದನ್ನು ಸೇವಿಸಿದಾಗ ಆರೋಗ್ಯದ ಮೇಲೆ ಗಂಭೀರವಾದ ದುಷ್ಪರಿಣಾಮ ಉಂಟಾಗುತ್ತದೆ ಇಂತಹ ಆರ ಪದಾರ್ಥಗಳನ್ನು ಬ್ಯಾನ್ ಮಾಡಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು.