ಬಳ್ಳಾರಿ

ವಿಎಸ್‌ಕೆಯು ನೂತನ ಪರೀಕ್ಷಾಂಗ ಕುಲಸಚಿವರಾಗಿ ಪ್ರೊ. ಪಿ. ಕಣ್ಣನ್ ಅಧಿಕಾರ ಸ್ವೀಕಾರ

ವಿಎಸ್‌ಕೆಯು ನೂತನ ಪರೀಕ್ಷಾಂಗ ಕುಲಸಚಿವರಾಗಿ ಪ್ರೊ. ಪಿ. ಕಣ್ಣನ್ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ 

  ಬಳ್ಳಾರಿ,ನ.06 :  

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಮೌಲ್ಯಮಾಪನ (ಪರೀಕ್ಷಾಂಗ) ಕುಲಸಚಿವರಾಗಿ ಪ್ರೊ. ಪಿ. ಕಣ್ಣನ್ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು. 

ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಪ್ರೊ. ಪಿ. ಕಣ್ಣನ್ ಅವರು ಮೂಲತಃ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ. 

ಇದುವರೆಗೆ ವಿಎಸ್‌ಕೆಯು ಮೌಲ್ಯಮಾಪನ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ. ಎನ್‌. ಎಂ. ಸಾಲಿಯ ಅವರನ್ನು ಮಾತೃ ಸಂಸ್ಥೆಗೆ ಮರಳಿ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 


ಸುದ್ದಿ ಓದಿ