ವಿಜಯಪುರ

ಶಿಕ್ಷಣದ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಬಿ.ಎಲ್‌.ಡಿ.ಇ ಸಂಸ್ಥೆ

ಶಿಕ್ಷಣದ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಬಿ.ಎಲ್‌.ಡಿ.ಇ ಸಂಸ್ಥೆ


          ವಿಜಯಪುರ 06 :  ಕನ್ನಡ ಭಾಷಾಭಿಮಾನದ ಪ್ರೇರಣೆಯಿಂದ ಪ್ರಾರಂಭವಾದ ಬಿ.ಎಲ್‌.ಡಿ.ಇ ಸಂಸ್ಥೆ ಉತ್ತರ ಕರ್ನಾಟಕದ ಮಕ್ಕಳ ಬದುಕು ಬೆಳಗುತ್ತಿದೆ ಎಂದು ಆಲಮೇಲ ವಿರಕ್ತಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.   ಇಂದು ಶುಕ್ರವಾರ ನಗರದ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಬಿ. ಎಲ್‌. ಡಿ. ಇ ಸಂಸ್ಥಾಪನ ದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

           ಮಹಾರಾಷ್ಟ್ರದ ಪ್ರಭಾವದಲ್ಲಿದ್ದ ಮುಂಬಯಿ ಕರ್ನಾಟಕದಲ್ಲಿದ್ದ ವಿಜಯಪುರದಲ್ಲಿ ಅಂದು ಮರಾಠಿ ಪ್ರಭಾವವಿತ್ತು. ಕನ್ನಡ ಕಲಿಯುವುದು ಮತ್ತು ಶಿಕ್ಷಣ ಪಡೆಯಲು ಇಲ್ಲಿ ಅಷ್ಟೊಂದು ಅವಕಾಶಗಳಿರಲಿಲ್ಲ. ಅಂಥ ಸಮಯದಲ್ಲಿ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಸಂಸ್ಥೆಯನ್ನು ಪ್ರಾರಂಭಿಸಿದರು.  ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಅರಟಾಳು ರುದ್ರಗೌಡರು, ಶಿರಸಂಗಿ ಲಿಂಗರಾಜರು ಸೇರಿ ಹಲವು ಮಹನೀಯರಿಂದ ಈ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿಯಾಗಿದೆ.  

 ಬಿ.ಎಲ್‌.ಡಿ.ಇ ಸಂಸ್ಥೆ ಅಭಿವೃಧಿಗೆ ಕಾರಣರಾದ ಬಂಥನಾಳ ಶಿವಯೋಗಿಗಳು, ಶ್ರೀಮತಿ ಬಂಗಾರಮ್ಮ ಸಜ್ಜನರು ಹಾಗೂ ಬಿ. . ಪಾಟೀಲ ಅವರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು.

            ಹಳಕಟ್ಟಿಯವರು ವಚನಗಳನ್ನು ರಕ್ಷಿಸುವುದರ ಜೊತೆಗೆ ಈ ನೆಲಕ್ಕೆ ಅಕ್ಷರಗಳನ್ನು ಬಿತ್ತಿದ್ದಾರೆ.  ಇಂದು ಈ ಸಂಸ್ಥೆ ನಾಡಿನ ನಾಡಿ ಮಿಡಿತವಾಗಿದೆ. ಇಲ್ಲಿನ ಪ್ರದೇಶ ಶಿಕ್ಷಣಮಯವಾಗಿ ನಮ್ಮ ಮಕ್ಕಳು ವಿದ್ಯಾವಂತರಾಗಿದ್ದಾರೆ. ನಮಗೆಲ್ಲ ಕಲಾದಗಿ ಮೊದಲು ಜಿಲ್ಲಾ ಕೇಂದ್ರವಾಗಿತ್ತು. ನಂತರ ವಿಜಯಪುರ ಜಿಲ್ಲೆಯಾದಾಗ ಇಲ್ಲಿ ಲಿಂಗ, ಜಂಗಮವಾಗಿ ಅದನ್ನು ಪರಿವರ್ತಿಸಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಅವರಿಂದ ಈ ಜ್ಯೋತಿಯನ್ನು ಮುಂದೆ ಬೆಳಗಿಸಿದವರು ಸಂಗನಬಸವ ಶಿವಯೋಗಿಗಳು. ಮುಂದೆ ಬಿ. ಎಂ. ಪಾಟೀಲ ಅವರು ಈ ತೇರನ್ನು ಎಳೆದಿದ್ದಾರೆ.     


ಸುದ್ದಿ ಓದಿ