ವಿಜಯಪುರದಲ್ಲಿ ಪಿಂಚಣಿದಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಲೋಕದರ್ಶನ ವರದಿ
ವಿಜಯಪುರ 06 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಿಂಚಣಿದಾರರ ಒಕ್ಕೂಟದ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟ ಜಿಲ್ಲಾಧ್ಯಕ್ಷರಾದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಲೇಂಡಿ ಮಾತನಾಡಿ, ಬೆಲೆ ಏರಿಕೆ ಮತ್ತು ಜೀವನ ನಿರ್ವಹಣಾ ವೆಚ್ಚಗಳ ಹೆಚ್ಚಳವನ್ನು ಪರಿಗಣಿಸಿ, ಮುಂದಿನ ಪಿಂಚಣಿ ಪರಿಷ್ಕರಣೆ ಜಾರಿಯಾಗುವವರೆಗೆ ಪಿಂಚಣಿದಾರರಿಗೆ ಮಧ್ಯಂತರ ಪರಿಹಾರ ನೀಡುವ ಸಾಧ್ಯತೆಯನ್ನು ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ತುಟ್ಟಿರೀಲೀಫ್ನ ಶೇ. 50ರಷ್ಟನ್ನು ಮೂಲ ಪಿಂಚಣಿಯೊಂದಿಗೆ ವೀಲೀನಗೊಳಿಸುವ ಬೇಡಿಕೆಯನ್ನು ರಾಜ್ಯ ಸರ್ಕಾರವು ಪರೀಶೀಲಿಸಿ. ಆರ್ಥಿಕ ಪರಿಣಾಮ ಮತ್ತು ಅನ್ವಯಿಸುವ ನಿಯಮಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಪಿಂಚಣಿಯ ಒಂದು ಭಾಗವನ್ನು ಪರಿವರ್ತಿಸಿಕೊಂಡಿರುವ ನಿವೃತ್ತ ನೌಕರರಿಂದ ವಸೂಲಾತಿ ಮಾಡುವ ಅವಧಿಯನ್ನು ಮರುಪರೀಶೀಲಿಸಬೇಕು.
ವಸೂಲಾತಿ ಅವಧಿಯನ್ನು 10 ವರ್ಷ ಮತ್ತು 8 ತಿಂಗಳಿಗೆ ಸೀಮಿತಗೊಳಿಸುವ ಬೇಡಿಕೆಯನ್ನು ಪರಿಗಣಿಸಿ, ರಾಜ್ಯ ಪಿಂಚಣಿದಾರರಿಗೆ ಕುಟುಂಬ ಪಿಂಚಣಿದಾರರಿಗೆ ಸಮಾನ ಸೌಲಭ್ಯಗಳು ಕುಟುಂಬ ಪಿಂಚಣಿದಾರರ ಆರ್ಥಿಕ ಭದ್ರತೆಯನ್ನು ಬಲಪಡಿಸಲು ಕುಟುಂಬ ಪಿಂಚಣಿಯನ್ನು ಹೆಚ್ಚಿಸುವುದು, ಅರ್ಹ ಕುಟುಂಬ ಸದಸ್ಯರಿಗೆ ಸಕಾಲದಲ್ಲಿ ಪಿಂಚಣಿ ಪಾವತಿಸುವುದು ಹಾಗೂ ಪಿಂಚಣಿ ಸೌಲಭ್ಯಗಳಲ್ಲಿ ಅನಗತ್ಯ ತಾರತಮ್ಯವನ್ನು ನಿವಾರಿಸುವ ಕ್ರಮ ಕೈಗೊಳ್ಳಬೇಕು. ಹಿರಿಯ ನಾಗರಿಕರಿಗೆ ರೈಲು ಮತ್ತು ವಿಮಾನ ಪ್ರಯಾಣದ ಟಿಕೆಟ್ಗಳಲ್ಲಿ ರಿಯಾಯಿತಿಯನ್ನು ಮರುಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಸಾರಿಗೆ ಸೌಲಭ್ಯಗಳಲ್ಲಿ ಹಿರಿಯ ನಾಗರಿಕರಿಗೆ ಸಾಧ್ಯವಾದಷ್ಟು ರಿಯಾಯಿತಿ ಹಾಗೂ ಆದ್ಯತೆಯ ಸೇವೆಗಳನ್ನು ಒದಗಿಸಬೇಕು. ಕರ್ನಾಟಕ ರಾಜ್ಯದ ಪಿಂಚಣಿದಾರರು ಮತ್ತು ಹಿರಿಯ ನಾಗರಿಕರು ಎದುರಿಸುತ್ತಿರುವ ಪಿಂಚಣಿ, ವೈದ್ಯಕೀಯ, ಸಾಮಾಜಿಕ ಭದ್ರತೆ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ರಾಜ್ಯ ಮಟ್ಟದಲ್ಲಿ ಪಿಂಚಣಿದಾರರ ಕಲ್ಯಾಣ ಮಂಡಳಿ ರಚಿಸಬೇಕು.
ಈ ಮಂಡಳಿಯಲ್ಲಿ ಪಿಂಚಣಿದಾರರ ಸಂಘಟನೆಗಳ ಪ್ರತಿನಿಧಿಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಈಗಾಗಲೇ ಕೇರಳ ಸರ್ಕಾರವು ಹಿರಿಯ ನಾಗರೀಕರ ಹಾಗೂ ಪಿಂಚಣಿದಾರರ ಕಲ್ಯಾಣ ಮಂಡಳಿಯನ್ನು ರಚಿಸಿ ಮುಂಚೂಣಿಯಲ್ಲಿರುವಂತೆ ಕರ್ನಾಟಕ ಸರ್ಕಾರವು ಕೂಡ ರಚಿಸಿ ದೇಶಕ್ಕೆ ಮಾದರಿಯಾಗಲೆಂಬ ಆಶಯ ನಮ್ಮ ಸಂಘಟನೆಯದ್ದಾಗಿದೆ ಎಂದರು.