ರಾಣೆಬೆನ್ನೂರ

ದೇವರಗುಡ್ಡ ಗ್ರಾಮದ ಅಂಬಾಡೆಮ್ಮನ ಕಟ್ಟಿ: ಮಿನಿ ಬಸ್ ನಿಲ್ದಾಣ ಲೋಕಾರೆ​‍್ಣ

ದೇವರಗುಡ್ಡ ಗ್ರಾಮದ ಅಂಬಾಡೆಮ್ಮನ ಕಟ್ಟಿ: ಮಿನಿ ಬಸ್ ನಿಲ್ದಾಣ ಲೋಕಾರೆ​‍್ಣ


              ರಾಣೆಬೆನ್ನೂರು 08 :  ತಾಲೂಕಿನ ಇತಿಹಾಸ ಪ್ರಸಿದ್ಧ ಮಾಲತೇಶ ಮಾರ್ತಾಂಡ ಭೈರವನ ಸುಕ್ಷೇತ್ರ ದೇವರಗುಡ್ಡ ಗ್ರಾಮದ, ಗುತ್ತಲ ರಸ್ತೆಯ, ಅಂಬಾಡೆಮ್ಮ ಕಟ್ಟಿ  ಬಳಿಯಲ್ಲಿ, ಸಾರ್ವಜನಿಕರ ಅನುಕೂಲತೆಗಾಗಿ, ಗ್ರಾಮದ ನಾಗರಿಕರು ಮತ್ತು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಇತ್ತೀಚೆಗೆ ನಡೆದ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಿಸಲಾದ ಮಿನಿ ಬಸ್ ನಿಲ್ದಾಣಗಳು ಸಾರ್ವಜನಿಕರ ಸೇವೆಗೆ ಲೋಕಾರೆ​‍್ಣಗೊಳಿಸಲಾಯಿತು.                      ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ, ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಅವರು, ಗ್ರಾಮಗಳ ಅಭಿವೃದ್ಧಿಗೆ ಮತ್ತು ಸಾರ್ವಜನಿಕರ ಅನುಕೂಲತೆಗೆ ಇಂತಹ ಮಿನಿ ಬಸ್ ನಿಲ್ದಾಣಗಳು, ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಗ್ರಾಮದ ಯುವಕರು ಮುಂದಾಗಿ ಇಂದು ಉದ್ಘಾಟಿಸಿದ್ದು ಗ್ರಾಮಸ್ಥರಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ತುಂಬಾ ಅನುಕೂಲವಾಗಲಿದೆ.                  ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಆರಂಭವಾಗಿದ್ದು, ಗ್ರಾಮಸ್ಥರಲ್ಲಿ ಹರ್ಷವನ್ನುಂಟು ಮಾಡಿದೆ ಎಂದರು. ಗ್ರಾಮೀಣ ಭಾಗದಲ್ಲಿ ಸಾರಿಗೆ ಸೌಲಭ್ಯಗಳು ಬೇಕೇ ಬೇಕು, ಜನರು ಮನಸ್ಸು ಮಾಡಿದರೆ ಏನಾದರೂ ಮಾಡಬಹುದು ಎನ್ನುವುದಕ್ಕೆ ಇಂದು ಸಾರ್ವಜನಿಕ ಸೇವೆಗೆ ಲಭ್ಯವಾಗಿರುವ ಮಿನಿ ಬಸ್ ಸ್ಟ್ಯಾಂಡ್ ಗಳು ಸಾಕ್ಷಿಯಾಗಿವೆ ಎಂದರು.  

             ಈ ಸಂದರ್ಭದಲ್ಲಿ  ಕರವೇ ಕಾರ್ಯಕರ್ತರಾದ  ಆನಂದ ಲಮಾಣಿ, ಗುಡಪ್ಪ ಕೆಂಗಲ್ (ಸೈನಿಕ) ನಿಂಗಪ್ಪ ಬೀರ​‍್ಪನವರ್, ಕುಮಾರ್ ಜಜ್ಜುರಿ, ಹನುಮಂತ, ಕೃಷ್ಣ ವೇಷಗಾರ, ಶಂಕರ್ ಹಳ್ಳಪ್ಪನವರ, ಪರಶುರಾಮ್ ಕುರುವತ್ತಿ, ಮರಡೆಪ್ಪ ಚಳಗೇರಿ, ರಾಘವೇಂದ್ರ ಕೋಳಿವಾಡ, ದಿಳ್ಳೇಪ್ಪ ನಾಯರ್, ಮಾಲತೇಶ್ ಚಲವಾದಿ, ನೀಲಪ್ಪ ನಾಯರ್, ಭೀಮಪ್ಪ ನಾಯರ್,

              ರಾಹುಲ್ ಮುದ್ದಿ, ರಮೇಶ್, ಆಕಾಶ ಡೊಳ್ಳಿನ, ಮೃತ್ಯುಂಜಯ, ಅಜಯ್ ತಳಗೇರಿ, ಆನಂದ ಮುದ್ದಿ, ಶಿವಾನಂದ ಮುದ್ದಿ, ಆಕಾಶ ಸತಗಿ , ಕರಿಯಪ್ಪ ಚೂರಿ, ರಣದಪ್ಪ ನಾಯರ್, ಗಣೇಶ ಏಳುಕುರಿ, ಸಂದೀಪ್ ಗುಡಗೂರ, ಸೇರಿದಂತೆ ಗ್ರಾಮದ ಮುಖಂಡರು ಮತ್ತು ಯುವಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ