ಕಂಪ್ಲಿ

ಕನ್ನಡ ರಾಜ್ಯೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕನ್ನಡ ರಾಜ್ಯೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಲೋಕದರ್ಶನ ವರದಿ 

       ಕಂಪ್ಲಿ 08 : ಮಕ್ಕಳ ಮನಸ್ಸಿನಲ್ಲಿ ನಮ್ಮ ಭಾಷೆಯ ಬಗ್ಗೆ ಆತ್ಮೀಯತೆ ಮತ್ತು ಅಭಿಮಾನ ಬೆಳೆಯಲಿ. ಕನ್ನಡ ಶಾಲೆಗಳ ಮಹತ್ವವನ್ನು ಅರಿತು, ಅವುಗಳ ಉಳಿವು ಮತ್ತು ಬೆಳವಣಿಗೆಗೆ ನಮ್ಮಿಂದಾದ ಕೊಡುಗೆ ನೀಡೋಣ ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು. ಪಟ್ಟಣದ ಸಣಾಪುರ ರಸ್ತೆಯ ವೀರಶೈವ ಸಂಘದ ಶಾರದ ಶಾಲೆಯಲ್ಲಿ ಕನ್ನಡ ಹಿತರಕ್ಷಕ ಸಂಘದಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಘದ 56ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ನಮ್ಮ ಭಾಷೆಯ ಜೊತೆಗೆ ನಮ್ಮ ನಾಡಿನ ನೆಲ, ಜಲ, ಪ್ರಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನೂ ಕಾಳಜಿಯಿಂದ ಕಾಪಾಡೋಣ ಎಂದರು.

        ಗಂಗಾವತಿಯ ಇತಿಹಾಸ ಸಂಶೋಧಕ ಹಾಗೂ ಉಪನ್ಯಾಸಕ ಶರಣಬಸಪ್ಪ ಕೋಲ್ಕಾರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನ್ನಡ ಸಂಸ್ಕೃತಿ ಪರಂಪರೆಯ ಸುಗಂಧವನ್ನು ಪಸರಿಸುತ್ತಿದೆ. ಕನ್ನಡ ನಾಡು ನುಡಿಗೆ ನುಡಿ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕನ್ನಡ ಹಿತರಕ್ಷಕ ಸಂಘ ನಿರಂತರವಾಗಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ಕನ್ನಡದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಸರ್ಕಾರವೇ ಇಂಗ್ಲೀಷ್ ಭಾಷೆಗೆ ಆಧ್ಯತೆ ನೀಡುತ್ತಿರುವುದು ವಿಪರ್ಯಾಸವಾಗಿದೆ. ಇದರಿಂದ ಕನ್ನಡತನವೂ ಮರೆಯಾಗುವಂತಾಗಿದೆ.

               ಆದ್ದರಿಂದ ಕನ್ನಡವನ್ನು ಉಳಿಸಿ ಬೆಳೆಸುವ ಕರ್ತವ್ಯ ನಾಡಿನ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದರು. ಕನ್ನಡ ಹಿರಕ್ಷಕ ಸಂಘದ ಗೌರವಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಪ್ರಾಸ್ತಾವಿಕ ನುಡಿ, ಸಂಘವೂ 1971ರಲ್ಲಿ ಸ್ಥಾಪನೆಯಾಗಿದೆ. ಇತಿಹಾಸ, ಪರಂಪರೆ ಜಾಗೃತಿಗೊಳಿಸುವಲ್ಲಿ ನುಡಿ ಮುತ್ತುಗಳು ಕಾರಣವಾದವು. ಸಮಾನತೆ ಅವಶ್ಯಕತೆ ಇದೆ ಎಂದರು. ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಮಾತನಾಡಿದರು ಕನ್ನಡ ಹಿತರಕ್ಷಕ ಸಂಘದ ಬೂದಗುಂಪಿ ಅಂಬಣ್ಣ ಮಾತನಾಡಿದರು. ವೀರಶೈವ ಸಂಘದ ಅಧ್ಯಕ್ಷ ಎಸ್‌.ಎಂ.ನಾಗರಾಜ ಸಭಾಧ್ಯಕ್ಷೆವಹಿಸಿದ್ದರು.

             ನಂತರ ಸ್ಥಳೀಯ ಕಲಾವಿದರು, ಸಮಾಜ ಸೇವಕರು, ಕ್ರೀಡಾ ಮತ್ತು ಯೋಗ ಸಾಧಕರು, ಪ್ರತಿಭಾ ವಿದ್ಯಾರ್ಥಿಗಳು ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ತದನಂತರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳು. ನಡೆದವು ಎಸ್ಸೆಸ್ಸೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ಸಾನಿಕಾಗೆ ಪ್ರತಿಭಾ ಪುರಸ್ಕಾರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಅಯ್ಯೋದಿ ವೆಂಕಟೇಶ, ಇಂದ್ರಜೀತ್ ಸಿಂಗ್, ಯಂಕಾರೆಡ್ಡಿ, ಬಂಗಿ ದೊಡ್ಡ ಮಂಜುನಾಥ, ಶ್ರೀನಿವಾಸ, ಕೆ.ಮೆಹಬೂಬ್, ಶಾಮಸುಂದರ, ಅಂಬಿಗರ ಮಂಜುನಾಥ, ಮುಖಂಡರಾದ ಬಿ.ನಾರಾಯಣಪ್ಪ, ಡಿ.ಮೌನೇಶ್, ಕಾಳಿಂಗ ವರ್ಧನ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ