ಗೃಹ ರಕ್ಷಕದಳ ವಯೋ ನಿವೃತ್ತಿ ಹೊಂದಿದ ಮಾಟೂರು ಕರಿಬಸಪ್ಪಗೆ ಸನ್ಮಾನ
ಲೋಕದರ್ಶನ ವರದಿ
ಕಂಪ್ಲಿ 31 : ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಕಾಲೇಜು ಹಿಂಬದಿಯಲ್ಲಿರುವ ಗೃಹ ರಕ್ಷಕದಳದ ಕಛೇರಿಯಲ್ಲಿ ವಯೋ ನಿವೃತ್ತಿ ಹೊಂದಿದ ಗೃಹ ರಕ್ಷಕದಳದ ಸಿಬ್ಬಂದಿ ಮಾಟೂರು ಕರಿಬಸಪ್ಪ ಅವರಿಗೆ ಅದ್ಧೂರಿಯಾಗಿ ಸನ್ಮಾನಿಸುವ ಮೂಲಕ ಶನಿವಾರ ಬೀಳ್ಕೊಟ್ಟರು.ನಂತರ ಜಿಲ್ಲಾ ಸಮಾದೀಷ್ಟರಾದ ಎಮ್ಮಿಗನೂರು ಶೇಖ್ ಸಾಬ್ ಕಾರ್ಯಕ್ರಮದಲ್ಲಿ ಮಾತನಾಡಿ, ಕರಿಬಸಪ್ಪ ಅವರು ಅತ್ತ್ಯುತ್ತಮವಾಗಿ ಸೇವೆ ಸಲ್ಲಿಸಿರುವುದು ಶ್ಲಾಘನೀಯವಾಗಿದೆ.
ಸರ್ಕಾರದ ಮಟ್ಟದಲ್ಲಿ ಗೃಹ ರಕ್ಷಕದಳದ ಹಲವು ಬದಲಾವಣೆಯಾಗುವ ಸಾಧ್ಯ ಇದೆ. ಆದ್ದರಿಂದ ತಾಳ್ಮೆಯಿಂದ ಕರ್ತವ್ಯದೊಂದಿಗೆ ಸೇವೆ ಸಲ್ಲಿಸಬೇಕು. ಇಂದಿನ ಯುವ ಗೃಹ ರಕ್ಷಕದಳದವರು ಉತ್ತಮವಾಗಿ ಸೇವೆ ಸಲ್ಲಿಸಬೇಕು ಎಂದರು.ತದನಂತರ ಸನ್ಮಾನ ಸ್ವೀಕರಿಸಿ ಎಂ.ಕರಿಬಸಪ್ಪ ಮಾತನಾಡಿ, ಸತತ18 ವರ್ಷ ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆ ರೂಢಿಸಿಕೊಂಡು ಮಾಡಿರುವ ಸೇವೆ ತೃಪ್ತಿಕರವಾಗಿದೆ.
ಯುವ ಗೃಹರಕ್ಷಕದಳದವರು ಒಳ್ಳೆಯ ಸೇವೆಯೊಂದಿಗೆ ಹಾಗೂ ಹೆಸರು ಪಡೆದುಕೊಳ್ಳಬೇಕು ವಯೋ ನಿವೃತ್ತಿ ಹೊಂದಿದ ಕುಟುಂಬದವರಿಗೆ ಸರ್ಕಾರದಿಂದ ಸಹಾಯ ಧನ ನೀಡಲು ಮುಂದಾಗಬೇಕು ಎಂದರು. ನಿವೃತ್ತ ಮಾಟೂರು ಕರಿಬಸಪ್ಪ ಅವರ ಧರ್ಮಪತ್ನಿ ಎಂ.ಅಕ್ಕನಾಗಮ್ಮ ಅವರಿಗೆ ಗೃಹ ರಕ್ಷಕದಳದಿಂದ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪ ಸಮಾದೀಷ್ಟರು ಹೆಚ್.ತಿಪ್ಪೇಸ್ವಾಮಿ,
ಜಿಲ್ಲಾ ಬೋಧಕ ಯೋಗೇಂದ್ರ, ಕುರಗೋಡು ಪಿ ಎಲ್ ಸಿ ಬಿ.ನಾಗರಾಜ, ಕಂಪ್ಲಿ ಪಿಎಲ್ ಸಿ ಹೆಚ್.ಗಿರಿಧರ್ ಕಂಪ್ಲಿ ಪ್ರಭಾರಿ ಘಟಕಾಧಿಕಾರಿ ಕೆ.ಹೊನ್ನೂರವಲಿ, ಕುರುಗೋಡು ಪ್ರಭಾರಿ ಘಟಕ ಅಧಿಕಾರಿ ಓಭಳೇಶ ಸಾಜೆಂರ್ಟ್ ಬಿ. ಚಂದ್ರಶೇಖರ, ಸೆಕ್ಷನ್ ಲೀಡರ್ ಕೆ.ಜಗದೀಶ, ಕಂಪನಿ ಕಮಾಂಡರ್ ಸುರೇಶ ಎಪ್ ಡಿ ಎ ಶಿವು ುಕುಮಾರ ಸಿಬ್ಬಂದಿ ಎಂ.ಅಲ್ಲಂಪ್ರಭು ಸೇರಿದಂತೆ ಜಿಲ್ಲಾ ಕಚೇರಿ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.