ಕಂಪ್ಲಿ

ಪುನೀತ್ ರಾಜ್ ಪುಣ್ಯಸ್ಮರಣೆ : ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

ಪುನೀತ್ ರಾಜ್ ಪುಣ್ಯಸ್ಮರಣೆ : ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

ಲೋಕದರ್ಶನ ವರದಿ 


          ಕಂಪ್ಲಿ 29:  ಪಟ್ಟಣದ ನೀರಾವರಿ ಇಲಾಖೆಯ ಬಳಿಯ ಮಹಾತ್ಮಗಾಂಧ ವೃತ್ತದ ಜಾನೂರು ಆಟೋ ನಿಲ್ದಾಣದಲ್ಲಿ ಡಾ.ಪುನೀತ್ ರಾಜಕುಮಾರ ಅವರ 5ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಯುವ ಮುಖಂಡ ರಾಜ ಉಪೇಂದ್ರ ನೇತೃತ್ವದಲ್ಲಿ ಪುನೀತ್ ನಾಮಫಲಕಕ್ಕೆ ವಿಶೇಷ ಪೂಜೆ ಸಲ್ಲಿಸಿ, ನಂತರ ಬಡ ಮಕ್ಕಳಿಗೆ ಉಚಿತ ನೋಟ್ ಬುಕ್, ಲೇಖನಿ ಸಾಮಾಗ್ರಿ ಹಾಗೂ ಮಜ್ಜಿಗೆ ಗುರುವಾರ ವಿತರಿಸುವ ಮೂಲಕ ಪುಣ್ಯಸ್ಮರಣೆ ಆಚರಿಸಲಾಯಿತು.

          ನಂತರ ರಾಜ ಉಪೇಂದ್ರ ಮಾತನಾಡಿ, ನಾಡಿನ ಕೊಡಗೈದಾನಿ, ಸಮಾಜ ಸೇವೆ ಜೊತೆಗೆ ನಟನೆಯಲ್ಲಿ ಅದ್ವೀತಿಯ ಸಾಧನೆಯೊಂದಿಗೆ ಅಭಿಮಾನಿಗಳ ಮನೆ ಮಾತಾಗಿರುವ ಡಾ.ಪುನೀತ್ ರಾಜಕುಮಾರ ಅವರ ಪುಣ್ಯ ಸ್ಮರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪುಣ್ಯ ಸ್ಮರಣೆ ಪ್ರಯುಕ್ತ ಇಲ್ಲಿನ ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ನೋಟ್ ಪುಸ್ತಕ, 100ಕ್ಕೂ ಹೆಚ್ಚು ಜನರಿಗೆ ಮಜ್ಜಿಗೆ ವಿತರಿಸುವ ಮೂಲಕ ಅವರನ್ನು ನೆನೆಯಲಾಯಿತು.

          ಅವರು ಹಾಕಿಕೊಟ್ಟ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ನಿಟ್ಟಿನಲ್ಲಿ ದಿನನಿತ್ಯದ ದುಡಿಮೆಯ ಅಲ್ಪಸ್ವಲ್ಪ ಹಣ ಕೂಡಿಟ್ಟು, ಮಕ್ಕಳಿಗೆ ನೋಟ್ ಬುಕ್ ಸೇರಿದಂತೆ ಇನ್ನಿತರ ಸಮಾಜಮುಖಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದರು.  ಈ ಸಂದರ್ಭದಲ್ಲಿ ಯುವ ಮುಖಂಡರಾದ ನೂರು, ರಿಯಾನ್, ರುದ್ರಿ, ಮಂಜು, ಗಾಳೆಪ್ಪ, ಸಿಂಹಾದ್ರಿ, ಆಕಾಶ, ವಾಹೀದ್, ಪ್ರೀತಮ್ ಸೇರಿದಂತೆ ಇತರರು ಇದ್ದರು.  


ಸುದ್ದಿ ಓದಿ