ಕಂಪ್ಲಿ

ಕಂಪ್ಲಿ ವ್ಯಾಪ್ತಿಯ ಕೊಟ್ಟಾಲ್‌ನಲ್ಲಿ ಅರ್ಥಪೂರ್ಣವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕಂಪ್ಲಿ ವ್ಯಾಪ್ತಿಯ ಕೊಟ್ಟಾಲ್‌ನಲ್ಲಿ ಅರ್ಥಪೂರ್ಣವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಲೋಕದರ್ಶನ ವರದಿ 

            ಕಂಪ್ಲಿ 26  : ಪಟ್ಟಣದ ಪುರಸಭೆ ವ್ಯಾಪ್ತಿಯ ಕೊಟ್ಟಾಲ್‌ನ 7ನೇ ವಾರ್ಡಿನಲ್ಲಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ವಿಶೇಷ ಪೂಜೆ, ಮಾಲಾರೆ​‍್ಣ ಸಲ್ಲಿಸುವ ಮೂಲಕ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಸೋಮವಾರ ಆಚರಿಸಲಾಯಿತು.  

ಇಲ್ಲಿನ ಜಯಂತಿಯಲ್ಲಿ ಭಾಗವಹಿಸಿ, ವಾಲ್ಮೀಕಿ ಪುತ್ಥಳಿಗೆ ಮಾಲಾರೆ​‍್ಣ ಮಾಡಿದ ನಂತರ ಶಾಸಕ ಜೆ.ಎನ್‌.ಗಣೇಶ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಮಾನವೀಯತೆ, ಸಮಾನತೆ, ಸತ್ಯದ ಸಂದೇಶಗಳನ್ನು ಜಗತ್ತಿಗೆ ಸಾರಿದ ಮಹಾನ್ ಋಷಿಗಳಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.      

             ನಂತರ ಯುವ ಮುಖಂಡ ವಿರೇಶ ನಾಯಕ ಕೊಟ್ಟಾಲ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಹಾಕಾವ್ಯ ರಾಮಾಯಣವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ಅವರ ಶ್ರದ್ಧೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಇದರಿಂದ ಪ್ರೀತಿ, ವಿಶ್ವಾಸದಿಂದ ಬದುಕಲು ಸಾಧ್ಯ. ಅ.30ರಂದು ಕೊಟ್ಟಾಲ್‌ನಲ್ಲಿ ವಿಜೃಂಭಣೆಯಿಂದ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು. ಎಂದರು.  

            ಈ ಸಂದರ್ಭದಲ್ಲಿ ಮುಖಂಡರಾದ ದುಬ್ಬಾರೆಡ್ಡಿ, ಲಿಂಗಪ್ಪ, ಲಕ್ಷ್ಮಣ, ರಾಮುಡು, ಪರಶಪ್ಪ, ಮಧು, ವಿರೇಶ, ಭಾಸ್ಕರ್, ಶಿವ, ಸಿಂಗರಯ್ಯ, ಗಿರಿಯಪ್ಪ, ಹರಿ, ರಾಜ, ಹನುಮಂತರಾಯುಡು, ಮದಲೇಟಿ, ದೇವೇಂದ್ರ, ಸೀನಾ, ರಾಮು, ಮಾರುತಿ, ಅಂಬರೇಶ, ಸೋಮರಾಜು, ಲಕ್ಷ್ಮೀದೇವಿ, ಸಾಲಮ್ಮ, ರಾಧಮ್ಮ ಸೇರಿದಂತೆ ವಾಲ್ಮೀಕಿ ಸಮಾಜದವರು ಪಾಲ್ಗೊಂಡಿದ್ದರು. ತದನಂತರ ಅನ್ನ ಸಂತಾರೆ​‍್ಣ ಜರುಗಿತು. 


ಸುದ್ದಿ ಓದಿ